ಕನ್ನಡ ಚಿತ್ರರಂಗದಲ್ಲಿ ಸುಮಾರು 5 ದಶಕಗಳ ಕಾಲ ಮಿಂಚಿ ಮರೆಯಾದ ಡಾ.ರಾಜ್ಕುಮಾರ್ ಅವರ 19ನೇ ಪುಣ್ಯಸ್ಮರಣೆ. ಕನ್ನಡ ನಾಡಿನ ಸಾಂಸ್ಕೃತಿಕ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದ ಅಣ್ಣಾವ್ರು 2006ರ ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಅಂದು ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಆದ್ರೆ ಅವರ ನೆನಪು ಪ್ರತೀ ಕನ್ನಡಿಗರೆದೆಯಲ್ಲಿ ಅಚ್ಚಳಿಯದೇ ಉಳಿದಿದೆ. ಇಂದಿಗೂ ಕನ್ನಡ ಚಿತ್ರರಂಗದ ಕೀರ್ತಿಯಾಗಿ ಅವರ ನಟಸಾರ್ವಭೌಮನ ಸ್ಮರಣೆಯಾಗುತ್ತಿದೆ.
ನಟಸಾರ್ವಭೌಮನ 19ನೇ ಪುಣ್ಯಸ್ಮರಣೆ: ನಟಸಾರ್ವಭೌಮ, ಗಾನ ಗಂಧರ್ವ, ರಣಧೀರ, ಕಂಠೀರವ, ಮಹಾನಟ, ಅಣ್ಣಾವ್ರು, ಅಪ್ಪಾಜಿ ಹೀಗೆ ಅನೇಕ ಅರ್ಥಪೂರ್ಣ ಮತ್ತು ಬಹಳ ತೂಕದ ಬಿರುದುಗಳನ್ನು ಹೊಂದಿರುವ ಕನ್ನಡದ ಏಕೈಕ ನಟ ಅಂದ್ರೆ ಅವರು ರಾಜ್ಕುಮಾರ್. ಇಂದು ಸರಸ್ವತಿ ಪುತ್ರನ 19ನೇ ಪುಣ್ಯಸ್ಮರಣೆ ನಡೆಯುತ್ತಿದೆ. ಕೋಟ್ಯಂತರ ಅಭಿಮಾನಿಗಳು ರಾಜ್ಕುಮಾರ್ ಹೆಸರಿನಲ್ಲಿ ಪುಣ್ಯಕಾರ್ಯಗಳನ್ನು ಕೈಗೊಂಡಿದ್ದಾರೆ. ಇದು ಅವರ ಮೇಲಿನ ಅರ್ಥಪೂರ್ಣ ಅಭಿಮಾನಕ್ಕೆ ಹಿಡಿದ ಕೈಗನ್ನಡಿ ಅಂತಲೇ ಹೇಳಬಹುದು.
Growing up watching his films, his presence was always special. Remembering Dr. Rajkumar on his death anniversary. 💐❤️👑
— 𝘛𝘩𝘪𝘴 𝘬𝘢𝘳𝘵𝘩𝘪'𝘴 𝙓 (@AMkarthik63) April 12, 2025
" ರಾಜನಿಲ್ಲದ ರಾಜ್ಯಕ್ಕೆ 19 ವರ್ಷ" 💔#Annavru #DrRajkumar #VaraNataDrRajkumar #RajKumar #KingShivanna pic.twitter.com/sKsxeHwWu9
ರಾಜ್ ಚಿತ್ರಗಳು ಜನರ ಜೀವನಾಡಿಯಾಗಿದ್ದವು: ತಮ್ಮ ಅಭಿನಯ ಮತ್ತು ಸಾಮಾಜಿಕ ಕಾರ್ಯಗಳಿಂದ ಇಡೀ ಭಾರತದಾದ್ಯಂತ ದೊಡ್ಡ ಮಟ್ಟಕ್ಕೆ ಬೆಳೆದರೂ ನಡವಳಿಕೆ ಬಹಳ ವಿನಮ್ರವಾಗಿತ್ತು. ತಮ್ಮ ಘನತೆಯುಳ್ಳ ನಡೆನುಡಿಯಿಂದ ಕರುನಾಡಿನ ಕೀರ್ತಿಯಾಗಿ ಮತ್ತು ಚಂದನವನದ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದರು. 70ರಿಂದ 90ರ ದಶಕದವರೆಗೂ ಕನ್ನಡ ಚಿತ್ರರಂಗದಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಎಷ್ಟರಮಟ್ಟಿಗೆಂದರೆ ಕನ್ನಡ ಚಿತ್ರರಂಗವೆಂದ್ರೆ ರಾಜ್ಕುಮಾರ್ ಎಂದೇ ಆಗಿತ್ತು. 70ರಿಂದ 90ರ ದಶಕದವರೆಗೂ ಕರುನಾಡಿನ ಪ್ರತೀ ಮನೆಯ ಮಾತಾದರು. ಪ್ರತೀ ಪಾತ್ರಕ್ಕೂ ಜೀವ ತುಂಬಿ ನಾಟಸಾರ್ವಭೌಮ ಎಂದೇ ಗುರುತಿಸಿಕೊಂಡರು. ಆ ಕಾಲಕ್ಕೆ ರಾಜ್ ಚಿತ್ರಗಳು ಜನರ ಜೀವನಾಡಿಯಾಗಿದ್ದವು ಅಂದ್ರೆ ಅತಿಶಯೋಕ್ತಿಯಲ್ಲ.

ಇದನ್ನೂ ಓದಿ: 'ರೈತರು ಉಳಿದರೆ ಮಾತ್ರ ನಾವು ಉಳಿಯೋದು': ಕೃಷಿ ಉತ್ಪನ್ನಗಳ ನೇರ ಮಾರಾಟಕ್ಕೆ ಅದಿತಿ, ಡಾಲಿ ಬೆಂಬಲ
ನಿರ್ದಿಷ್ಟವಾಗಿ ಒಂದೇ ಜಾನರ್ಗೆ ಸೀಮಿತವಾಗಿರದೇ, ಪ್ರತೀ ಪಾತ್ರವನ್ನೂ ಒಂದಕ್ಕಿಂತ ಒಂದು ಚೆಂದ ಎನ್ನುವಂತೆ ನಿಭಾಯಿಸಿದ್ದರು. ಅವರ ಹೆಸರು ಹೇಳಿದ ಕೂಡಲೇ ಕಸ್ತೂರಿ ನಿವಾಸ, ಭಕ್ತ ಕುಂಬಾರ, ಸಮಯದ ಗೊಂಬೆ, ಭಕ್ತ ಪ್ರಹ್ಲಾದ, ಬಬ್ರುವಾಹನ ಹೀಗೆ ನೂರಾರು ಸಿನಿಮಾಗಳು ಅಭಿಮಾನಿಗಳೆದುರು ಬರುತ್ತವೆ. ಪಾತ್ರ ಯಾವುದೇ ಇರಲಿ ಅಚ್ಚುಕಟ್ಟಾಗಿ ನಿಭಾಯಿಸಿ, ಸಮಾಜಕ್ಕೊಂದು ಸಂದೇಶ ಒದಗಿಸುತ್ತಿದ್ದರು.
ಇದನ್ನೂ ಓದಿ: 'ಟಾಯ್ಲೆಟ್ ಏಕ್ ಪ್ರೇಮ್ ಕಥಾ ಟೀಕಿಸುವವರು ಮೂರ್ಖರು': ಜಯಾ ಬಚ್ಚನ್ ಹೇಳಿಕೆಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ಹೀಗಿತ್ತು
ಸಿನಿಮಾಗಳ ಮೂಲಕ ಮನರಂಜನೆ ಒದಗಿಸಿದ್ದು ಮಾತ್ರವಲ್ಲದೇ, ನಾಡಿನ ನೆಲ ಜಲ ಭಾಷೆ ವಿಷಯ ಬಂದಾಗ ಹೋರಾಟದ ಹಾದಿಯನ್ನೂ ಹಿಡಿಯುತ್ತಿದ್ದರು. ನಾಡಿನ ಸಂರಕ್ಷಣೆ ವಿಷಯದಲ್ಲಿ ಸದಾ ಮುಂದಿರುತ್ತಿದ್ದರು. ಜೊತೆಗೆ ರಾಜಕೀಯದಿಂದ ದೂರವೇ ಉಳಿದರು. ನಟಸಾರ್ವಭೌಮ ಅಂದು ಮನಸ್ಸು ಮಾಡಿದ್ದರೆ ರಾಜಕಾಕೀಯಕ್ಕಿಳಿಯಬಹುದಿತ್ತು. ಅವಕಾಶ, ಅರ್ಹತೆ ಎಲ್ಲವೂ ಇದ್ದರೂ ಅಣ್ಣಾವ್ರು ರಾಜಕೀಯಕ್ಕೆ ಬರಲಿಲ್ಲ. ಉಸಿರಿರುವವರೆಗೂ ಕಲಾ ಸೇವೆಗೆ ತಮ್ಮನ್ನು ಸಮರ್ಪಿಸಿದ್ದರು. ಕೋಟ್ಯಂತರ ಅಭಿಮಾನಿಗಳಿಂದ ದೇವತಾ ಮನುಷ್ಯ ಎಂದು ಕರೆಸಿಕೊಂಡ ರಾಜ್ಕುಮಾರ್ ಅಭಿಮಾನಿಗಳೆದೆಯಲ್ಲಿ ಸದಾ ಅಜರಾಮರ. ಅಣ್ಣಾವ್ರು ಮತ್ತೊಮ್ಮೆ ಹುಟ್ಟಿ ಬರಲಿ ಎಂಬುದು ಕನ್ನಡಿಗರ ಆಸೆ.