ETV Bharat / entertainment

ದರ್ಶನ್​​ ಬೆಂಬಲಿಸಿದ ಧನ್ವೀರ್​ 'ವಾಮನ' ಸಿನಿಮಾ ಹೇಗಿದೆ? ಫ್ಯಾನ್ಸ್ ಸೆಲೆಬ್ರೇಶನ್​ ಜೋರು - VAAMANA

ಧನ್ವೀರ್​, ರೀಷ್ಮಾ ನಾಣಯ್ಯ ನಟನೆಯ 'ವಾಮನ' ಸಿನಿಮಾ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ.

Vaamana
ಧನ್ವೀರ್​ ನಟನೆಯ 'ವಾಮನ' ಬಿಡುಗಡೆ (Photo: Film Poster)
author img

By ETV Bharat Entertainment Team

Published : April 10, 2025 at 3:33 PM IST

2 Min Read

2025ರ ಬಹುನಿರೀಕ್ಷಿತ ಕನ್ನಡ ಚಿತ್ರ 'ವಾಮನ' ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಚಂದನವನದ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ಧನ್ವೀರ್​​ ನಾಯಕ ನಟನಾಗಿ ಬಣ್ಣ ಹಚ್ಚಿರುವ ಚಿತ್ರಕ್ಕೆ ಚಾಲೆಂಜಿಂಗ್​ ಸ್ಟಾರ್ ದರ್ಶನ್​​​ ಅವರ ಬೆಂಬಲ ಸಿಕ್ಕಿದೆ. ಇತ್ತಿಚೆಗೆ ಟ್ರೇಲರ್​ ಅನಾವರಣಗೊಳಿಸಿ, ಕಳೆದ ದಿನ ಸ್ಪೆಷಲ್​ ಶೋನಲ್ಲಿ ಭಾಗಿಯಾಗಿ, ಸಿನಿಮಾ ನೋಡಿ ಹರಸುವಂತೆ ಕನ್ನಡ ಜನತೆಯಲ್ಲಿ ಮನವಿ ಮಾಡಿಕೊಳ್ಳುವ ಮೂಲಕ ಆಪ್ತನಿಗೆ ದಾಸ ಸಾಥ್ ನೀಡಿದ್ದಾರೆ.

ಸೋಷಿಯಲ್​ ಮೀಡಿಯಾಗಳಲ್ಲಿ ಸಿನಿಮಾ ಸೆಲೆಬ್ರೇಶನ್​ ವಿಡಿಯೋಗಳು ಸದ್ದು ಮಾಡುತ್ತಿವೆ. ಚಿತ್ರ ವೀಕ್ಷಿಸಿದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದು, ಬಹುತೇಕ ಪಾಸಿಟಿವ್​ ರಿಯಾಕ್ಷನ್ಸ್ ಸ್ವೀಕರಿಸಿದೆ.

ಸಿನಿಮಾ ವೀಕ್ಷಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಭಿಮಾನಿಯೋರ್ವರು, ''ಸೂಪರ್​ ಸಿನಿಮಾ. ಒಮ್ಮೆ ವೀಕ್ಷಿಸಿ ಮತ್ತೊಮ್ಮೆ ಬಂದಿದ್ದೇವೆ'' ಎಂದು ತಿಳಿಸಿದ್ದಾರೆ. ಮತ್ತೋರ್ವರು ಅಭಿಪ್ರಾಯ ವ್ಯಕ್ತಪಡಿಸಿ, 'ಸಿನಿಮಾ ಚೆನ್ನಾಗಿದೆ, ಧನ್ವೀರ್ ಸೇರಿ ಕಲಾವಿದರೆಲ್ಲರ​ ಅಭಿನಯ ಉತ್ತಮವಾಗಿ ಮೂಡಿಬಂದಿದೆ' ಎಂದು ತಿಳಿಸಿದ್ದಾರೆ.

ಸಿನಿಮಾ ಸೆಲೆಬ್ರೇಶನ್​​ ವಿಡಿಯೋ ಹಂಚಿಕೊಂಡ ಅಭಿಮಾನಿಯೋರ್ವರು, ''ಮೂವಿ ಚಿಂದಿ ಗುರು, ಸೆಕೆಂಡ್​ ಹಾಫ್​ ಕ್ರೇಜಿ, ಬ್ಲಾಕ್​ಬಸ್ಟರ್'' ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವ ಫ್ಯಾನ್​ ಶೇರ್​ ಮಾಡಿದ ಪೋಸ್ಟ್​​ನಲ್ಲಿ, 'ವಾಮನ ಹೌಸ್​ ಫುಲ್​ ಶೋ, ಬಾಸ್​ ತಮ್ಮ ಗೆದ್ಬಿಟ್ರು ಕಣ್ರೋ' ಎಂದು ತಿಳಿಸಲಾಗಿದೆ. ಹೀಗೆ ಪಾಸಿಟಿವ್​​ ರಿಯಾಕ್ಷನ್​ಗಳು ಹರಿದು ಬರುತ್ತಿವೆ. ಸೆಲೆಬ್ರೇಶನ್​ ವಿಡಿಯೋಗಳು ವ್ಯಾಪಕವಾಗಿ ವೈರಲ್​ ಆಗುತ್ತಿವೆ.

ಬಜಾರ್, ಬೈ ಟು ಲವ್ ಮತ್ತು ಕೈವ​ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟ ಧನ್ವೀರ್​ ಗೌಡ, ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅವರ ಆಪ್ತ ಗೆಳೆಯ. ದರ್ಶನ್​​ ಕಠಿಣ ಸಂದರ್ಭ ಸಾಥ್ ಕೊಟ್ಟು ಗಮನ ಸೆಳೆದಿದ್ದಾರೆ. ಇದೀಗ ದರ್ಶನ್​ ಅವರು ಧನ್ವೀರ್​ ಮುಖ್ಯಭೂಮಿಕೆಯ ಚಿತ್ರಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಸಿನಿಮಾ ವೀಕ್ಷಿಸಿ ​ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ, ಕನ್ನಡ ಸಿನಿಮಾ ವೀಕ್ಷಿಸಿ ಗೆಲ್ಲಿಸಿಕೊಡಿ ಎಂದು ಕನ್ನಡಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸಂಸದೆ ಕಂಗನಾ ರಣಾವತ್​ ಮನೆಗೆ 1 ಲಕ್ಷ ಕರೆಂಟ್​ ಬಿಲ್​: ಅಸಲಿ ವಿಚಾರವೇನು?

ಶಂಕರ್​ ರಾಮನ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ.​​ ಆ್ಯಕ್ಷನ್​ ಕಟ್​ ಹೇಳೋದರ ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ನಿರ್ವಹಿಸಿದ್ದಾರೆ. ಚೇತನ್​ ಗೌಡ ನಿರ್ಮಾಣದ ಚೊಚ್ಚಲ ಚಿತ್ರವಿದು. ರೀಷ್ಮಾ ನಾಣಯ್ಯ ನಟಿಸಿದ್ದಾರೆ.

ಇದನ್ನೂ ಓದಿ: 'ಕೊನೆ ಉಸಿರಿರುವವರೆಗೂ ಕನ್ನಡ ಸಿನಿಮಾ ಮಾತ್ರ': ಗೆಳೆಯ ಧನ್ವೀರ್​​ ಚಿತ್ರ ವೀಕ್ಷಿಸಿ ದರ್ಶನ್ ಹೇಳಿದ್ದಿಷ್ಟು​

ಅಜನೀಶ್​ ಬಿ.ಲೋಕನಾಥ್​ ಸಂಗೀತ, ಮಹೇನ್​ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಭೂಷಣ್​ ನೃತ್ಯ ನಿರ್ದೇಶನ, ಅರ್ಜುನ್​ ರಾಜ್, ವಿಕ್ರಂ ಮೋರ್​ ಹಾಗೂ ಜಾಲಿ ಬಾಸ್ಟಿನ್​ ಸಾಹಸ ನಿರ್ದೇಶನ ಹಾಗೂ ನವೀನ್​ ಹಾಡೋನಳ್ಳಿ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.