ETV Bharat / entertainment

ಕನ್ನಡದಲ್ಲಿ ಒಳ್ಳೆ ಕಥೆ ಸಿಕ್ಕರೆ ಯಶ್ ಜೊತೆ ನಟಿಸುತ್ತೇನೆ: ಕಾಲಿವುಡ್ ನಟ - Yash

author img

By ETV Bharat Entertainment Team

Published : Aug 6, 2024, 8:29 PM IST

ಪ್ರಮೋಶನ್​​ ನಿಟ್ಟಿನಲ್ಲಿ ತಂಗಲಾನ್ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು.

YASH
ಯಶ್ (ETV Bharat)
ತಂಗಲಾನ್ ಚಿತ್ರತಂಡ (ETV Bharat)

ಬಹುಭಾಷೆಯ ಸಿನಿಮಾಗಳು ಕನ್ನಡದಲ್ಲಿ ಡಬ್ಬಿಂಗ್ ಆಗಿ ಬಿಡುಗಡೆ ಆಗೋದು ಹೆಚ್ಚಾಗುತ್ತಿದೆ. ಈಗ ಕಾಲಿವುಡ್​ನ ಚಿಯಾನ್ ವಿಕ್ರಮ್ ಅಭಿನಯದ ಚಿತ್ರ ತಂಗಲಾನ್ ಬಿಡುಗಡೆಗೆ ಸಜ್ಜಾಗಿದೆ. ಟ್ರೇಲರ್​​ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನಿರೀಕ್ಷೆ ಹುಟ್ಟು ಹಾಕಿರುವ ತಂಗಲಾನ್ ಚಿತ್ರ ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದೇ ಆಗಸ್ಟ್ 15ರಂದು ಬಿಡುಗಡೆ ಆಗುತ್ತಿದೆ.

ಈ ಚಿತ್ರದ ಪ್ರಚಾರಕ್ಕಾಗಿ ನಟ ವಿಕ್ರಮ್, ನಟಿ ಮಾಳವಿಕಾ ಮೋಹನ್ ನಿರ್ದೇಶಕ ಪಾ ರಂಜಿತ್ ಸೇರಿದಂತೆ ತಂಗಲಾನ್ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಖಾಸಗಿ ಹೋಟೆಲ್​​ನಲ್ಲಿ ನಡೆದ ತಂಗಲಾನ್ ಚಿತ್ರ ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು.

ಮೊದಲು ಮಾತನಾಡಿದ ಚಿಯಾನ್ ವಿಕ್ರಮ್, ತಂಗಲಾನ್ ಚಿತ್ರದ ಪಾತ್ರಕ್ಕಾಗಿ ರೆಡಿಯಾಗಲು ಆರು ತಿಂಗಳು ಹಿಡಿಯಿತು. ಸ್ವಲ್ಪ ದಪ್ಪ ಇದ್ದೆ. ಪಾತ್ರಕ್ಕಾಗಿ ತೂಕ ಇಳಿಸಬೇಕಾಯಿತು. ಹಾಗೇ ನನ್ನ ಗೆಟಪ್​ಗಾಗಿ ತುಂಬಾನೇ ವರ್ಕ್ ಔಟ್ ಮಾಡಬೇಕಾಯಿತು. ಹೇರ್ ಸ್ಟೈಲ್, ಮೇಕ್​ ಅಪ್​ಗೆ ಪ್ರತಿದಿನ 4ರಿಂದ 6 ಗಂಟೆ ಬೇಕಾಗುತ್ತಿತ್ತು. ಈ ಪಾತ್ರವನ್ನು ನಾನು ಬಹಳ ಇಷ್ಟಪಟ್ಟು ಮಾಡಿದ್ದೇನೆ. ಪಾತ್ರ ನಿಜಕ್ಕೂ ಪ್ರೇಕ್ಷಕರಿಗೆ ಇಷ್ಟ ಆಗಲಿದೆ ಎಂದು ತಿಳಿಸಿದರು.

ಇನ್ನೂ ಕನ್ನಡ ಚಿತ್ರರಂಗದಲ್ಲಿ ಬರುತ್ತಿರುವ ಕ್ವಾಲಿಟಿ ಚಿತ್ರಗಳ ಬಗ್ಗೆ ಮಾತನಾಡಿದ ವಿಕ್ರಮ್, ಬಹಳ ಖುಷಿ ಆಗಿದೆ. ಕೆಜಿಎಫ್ ಹಾಗೂ ಕಾಂತಾರ ನಂತರ ಇತ್ತೀಚೆಗೆ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡಿದೆ. ರಕ್ಷಿತ್ ಶೆಟ್ಟಿ ಪಾತ್ರ ಹಾಗೂ ಚಿತ್ರದ ಕಂಟೆಂಟ್ ಬಹಳ ಇಷ್ಟ ಆಯ್ತು. ಕನ್ನಡದಲ್ಲಿ ಕಂಟೆಂಟ್ ಸಿನಿಮಾಗಳು ಬಂದಾಗ ನಾನು ನೋಡುತ್ತಿರುತ್ತೇನೆ. ಒಳ್ಳೆ ಕಥೆ ಸಿಕ್ಕರೆ ಕನ್ನಡ ಸಿನಿಮಾದಲ್ಲಿ ನಟಿಸುತ್ತೇನೆ ಎಂದರು.

ಕನ್ನಡದಲ್ಲಿ ಯಾವ ನಟನ ಜೊತೆ ನೀವು ನಟಿಸುತ್ತೀರಾ ಎಂಬ ಪ್ರಶ್ನೆಗೆ ಯಶ್ ಜೊತೆ ಎಂದು ಉತ್ತರಿಸಿದರು. ನಿರ್ದೇಶಕರೆಂದು ಬಂದಾಗ ಪ್ರಶಾಂತ್ ನೀಲ್ ಡೈರೆಕ್ಷನ್​​ನಲ್ಲಿ ಅಭಿನಯಿಸುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: 'ಹ್ಯಾಪಿ ಬರ್ತ್​​ಡೇ ಟು ಯೂ': ಮನರಂಜಿಸುವ ಗೀತೆಯ​​ ಇತಿಹಾಸ ಗೊತ್ತಾ? - Happy Birthday To You

ಕೋಲಾರದ ಚಿನ್ನದ ಗಣಿ ಕಾರ್ಮಿಕರ ಜೀವನದ ಸುತ್ತ ಸುತ್ತುವ ಕಥೆಯನ್ನು ತಂಗಲಾನ್ ಚಿತ್ರ ಒಳಗೊಂಡಿದೆ. ಚಿಯಾನ್‌ ವಿಕ್ರಮ್‌ ಬುಡಕಟ್ಟಿನ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಪಾರ್ವತಿ ಮೆನನ್‌, ಮಾಳವಿಕಾ ಮೋಹನ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜೊತೆ ಪಶುಪತಿ, ಡೇನಿಯಲ್ ಕಾಲ್ಟಗಿರೋನ್ ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ.

ಇದನ್ನೂ ಓದಿ: 'ಟಾಕ್ಸಿಕ್' ನಿರ್ಮಾಪಕರ ಜೊತೆ ಕರಾವಳಿಯಲ್ಲಿ ನಟ ಯಶ್‌ ಟೆಂಪಲ್ ರನ್ - Yash Temple Run

ಕೆಜಿಎಫ್‌ ಸುತ್ತಲಿನ ಕಥೆಯನ್ನು ನಿರ್ದೇಶಕ ಪಾ.ರಂಜಿತ್‌ ಹೇಳಲು ಹೊರಟಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ತಂಗಲಾನ್ ಸಿನಿಮಾ ನಿರ್ಮಾಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.