ಕಿರುತೆರೆ, ಸಿನಿಮಾ ಹಾಗೂ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟಿ ಐಶ್ವರ್ಯ ಸಿಂಧೋಗಿ ಅವರ ಮನೆಗೆ ಐಷಾರಾಮಿ ಕಾರು ಎಂಟ್ರಿ ಕೊಟ್ಟಿದೆ. ಇತ್ತೀಚೆಗೆ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್' ಮನೆಗೆ ಹೋಗಿ ಬಂದಿದ್ದ ಐಶ್ವರ್ಯ ಸಿಂಧೋಗಿ ಅವರು ಶಿಶಿರ್ ಶಾಸ್ತ್ರಿ ಜೊತೆಗೂಡಿ ಹೊಸ ಬ್ಯುಸಿನೆಸ್ ಶುರು ಮಾಡಿದ್ದರು. ಇದೀಗ, ಹೊಸ ಕಾರು ಖರೀದಿಸುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಹೌದು, ದೊಡ್ಡ ಮೊತ್ತದ ಎಂಜಿ ಹೆಕ್ಟರ್ ಪ್ಲಸ್ ಐಷಾರಾಮಿ ಕಾರನ್ನು ಐಶ್ವರ್ಯ ಸಿಂಧೋಗಿ ಇತ್ತೀಚೆಗಷ್ಟೇ ಖರೀದಿಸಿದ್ದಾರೆ. ಈ ಕಾರಿನ ಬೆಲೆ 17.50 ಲಕ್ಷದಿಂದ 23.67 ಲಕ್ಷ ರೂಪಾಯಿವರೆಗೆ ಇದೆ. ನ್ಯೂ ಫ್ಯಾಮಿಲಿ ಮೆಂಬರ್ ಅನ್ನು ಐಶ್ವರ್ಯ ಬಹಳ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಐಶ್ವರ್ಯ ಕಾರು ಖರೀದಿಸಿರುವ ವೇಳೆ ಸ್ನೇಹಿತರಾದ ಮೋಕ್ಷಿತಾ ಪೈ ಹಾಗೂ ಶಿಶಿರ್ ಶಾಸ್ತ್ರಿ ಜೊತೆಗಿದ್ದರು. ಎಂದಿನಂತೆ ಗೆಳೆತಿಯ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹೊಸ ಕಾರು ಖರೀದಿ ಸಂದರ್ಭ, ಐಶ್ವರ್ಯ ತಮ್ಮ ಹಿಂದಿನ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಒಂದು ದಿನ ನಾನು ನನ್ನ ತಂದೆಯ ಕಾರನ್ನು ಭಾರವಾದ ಹೃದಯ ಮತ್ತು ಕಣ್ಣಲ್ಲಿ ನೀರು ತುಂಬಿಕೊಂಡು ಮಾರಿದೆ. ಆ ದಿನ ನಾನೇ ಒಂದು ಕಾರು ಖರೀದಿಸುತ್ತೇನೆಂದು ಸವಾಲು ಹಾಕಿಕೊಂಡೆ. 15.5.2025ರಂದು ಕಾರು ಖರೀದಿಸಲು ನನ್ನ ಕಠಿಣ ಪರಿಶ್ರಮ, ಬೆವರು, ರಕ್ತ, ಕಣ್ಣೀರು, ನಾನು ಅನುಭವಿಸಿದ ಎಲ್ಲಾ ಗಾಯಗಳು, ನನ್ನ ಬೆನ್ನಿನ ಹಿಂದಿನ ಇರಿತಗಳು, ನನ್ನ ದ್ವೇಷಿಗಳು - ಇವೆಲ್ಲವೂ ನನಗೆ ದಾರಿ ಮಾಡಿಕೊಟ್ಟವು.
ಇದನ್ನೂ ಓದಿ: 'ಮಗ ಯಶ್ ಜೊತೆ ಸಿನಿಮಾ ಮಾಡೋದಿಲ್ಲ': ತಾಯಿ ಪುಷ್ಪ ಕೊಟ್ಟ ಕಾರಣಕ್ಕೆ ನೆಟ್ಟಿಗರ ಚಪ್ಪಾಳೆ
ಮುಖ್ಯವಾಗಿ ನನ್ನ ಹೆತ್ತವರು, ದೇವರು ಮತ್ತು ನನ್ನ ಹಿತೈಷಿಗಳ ಆಶೀರ್ವಾದಗಳು ಇದನ್ನು ಸಾಧ್ಯವಾಗಿಸಲು ನನ್ನಲ್ಲಿ ಸಾಕಷ್ಟು ಶಕ್ತಿ ಮತ್ತು ಆಶಾವಾದವನ್ನು ತುಂಬಿದವು. ಆದರೆ ಅದು ಸುಲಭದ ನಿರ್ಧಾರವಾಗಿರಲಿಲ್ಲ. ಬಹಳಷ್ಟು ನಿದ್ದೆಯಿಲ್ಲದ ರಾತ್ರಿಗಳು, ಬಹಳಷ್ಟು ಖರ್ಚುಗಳನ್ನು ಕಡಿತಗೊಳಿಸುವುದು ಮತ್ತು ಸಾಕಷ್ಟು ಧೈರ್ಯದ ಅಗತ್ಯವಿತ್ತು. ನಾನೀಗ ಜವಾಬ್ದಾರಿಯುತಳಾಗಿದ್ದೇನೆ. ಮನೆಗೆ ಸ್ವಾಗತ ನನ್ನ ಸ್ನೋವೈಟ್ (ಕಾರಿಗೆ ಈ ರೀತಿಯಾಗಿ ಹೆಸರಿಸಿದ್ದೇನೆ). ಈ ಆಯ್ಕೆ ಮಾಡಲು ನನ್ನೊಂದಿಗೆ ನಿಂತ ನನ್ನ ಎಲ್ಲಾ ಸುಂದರ ಸ್ನೇಹಿತರಿಗೆ ವಿಶೇಷ ಧನ್ಯವಾದಗಳು ಎಂದು ಐಶ್ವರ್ಯ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಐಶ್ವರ್ಯಾ ರೈ ಸೌಂದರ್ಯಕ್ಕೆ ಸರಿ ಸಾಟಿಯಾರು? ಸೀರೆಯುಟ್ಟು, ಸಿಂಧೂರವಿಟ್ಟು ಜಾಗತಿಕ ವೇದಿಕೆಯಲ್ಲಿ ಸೊಬಗು ಪ್ರದರ್ಶನ