ವಿಶ್ವ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಸಿನಿಗಣ್ಯರ ಸಮಾಗಮವಾಗುತ್ತದೆ. ಚಿತ್ರರಂಗದಲ್ಲಿ ಸಾಧನೆ ಮಾಡಿದವರು ತಮ್ಮ ಆಕರ್ಷಕ ನೋಟದ ಮೂಲಕ ತಮ್ಮ ದೇಶವನ್ನು ಪ್ರತಿನಿಧಿಸುತ್ತಾರೆ. ಖ್ಯಾತ ನಟಿ ಪ್ರಣಿತಾ ಸುಭಾಷ್ ಭಾಗಿಯಾಗಿ, ಕನ್ನಡ ಚಿತ್ರರಂಗದ ಖ್ಯಾತಿ ಹೆಚ್ಚಿಸಿದ್ದಾರೆ.
ಡಿಸೈನರ್ ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿರುವ ಸೀರೆ ಧರಿಸಿ ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಪ್ರಣಿತಾ ಸುಭಾಷ್ ಬಹುತೇಕರನ್ನು ಬೆರಗುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಮಕ್ಕಳ ತಾಯಿಯಾದರೂ ಅತ್ಯುತ್ತಮ ಫಿಟ್ನೆಸ್ ಕಾಪಾಡಿಕೊಂಡಿರುವ ಪ್ರಣಿತಾ ಸುಭಾಷ್ ಜಾಗತಿಕ ವೇದಿಕೆಯಲ್ಲಿ ತಮ್ಮ ಅದ್ಭುತ ನೋಟದಿಂದ ಬಹುತೇಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ.
ಮಿನುಗುವ ಸೀರೆ, ಮಿನಿಮಮ್ ಮೇಕಪ್, ಸೀರೆಗೊಂದು ದುಪ್ಪಟ್ಟಾ. ಕಾಂತಿಯುತವಾಗಿ ಕಾಣಿಸಿಕೊಂಡ ಕನ್ನಡತಿ. ತಮ್ಮ ಅದ್ಭುತ ಚೆಲುವಿನೊಂದಿಗೆ ಜಾಗತಿಕ ವೇದಿಕೆಯಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸಿದ್ದಾರೆ. ಅದರಲ್ಲೂ ಸಿರೆಯುಟ್ಟು ಆಕರ್ಷಕ ನೋಟ ಬೀರಿದ್ದು, ಬಹುತೇಕರ ಪ್ರಶಂಸೆಗೆ ಪಾತ್ರವಾಗಿದೆ. ಬಹುಭಾಷಾ ನಟಿಯ ನೋಟ ಅಭಿಮಾನಿಗಳು ಮನಸೂರೆಗೊಂಡಿದೆ.
ಪ್ರಣಿತಾ ಸುಭಾಷ್ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿದ ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ಓ ಮೈ ಗಾಡ್, ಬಹಳ ಅದ್ಭುತ ಎಂದು ಬರೆದುಕೊಂಡಿದ್ದಾರೆ. ತುಂಬಾ ಸುಂದರ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನಿಜಕ್ಕೂ ಅತ್ಯಂತ ದೊಡ್ಡ ವಿಷಯ, ಕರ್ನಾಟಕದಿಂದ ತುಂಬಾನೆ ಪ್ರೀತಿ ಎಂದು ಮತ್ತೋರ್ವರು ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೊನ್ನೆ ಸೀರೆ-ಸಿಂಧೂರ, ನಿನ್ನೆ ಮಾರ್ಡನ್ ಡ್ರೆಸ್ನಲ್ಲಿ ಭಗವದ್ಗೀತೆಯ ಶ್ಲೋಕ: ಭಾರತೀಯ ಸಂಸ್ಕೃತಿ ಪ್ರದರ್ಶಿಸಿದ ಐಶ್ವರ್ಯಾ
ಭಾರತವನ್ನು ಪ್ರತಿನಿಧಿಸಿದ್ದಷ್ಟೇ ಅಲ್ಲ. ನೀವು ಭಾರತೀಯ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ ಮತ್ತು ಆಚರಣೆಗಳನ್ನು ಸಹ ಪ್ರತಿನಿಧಿಸಿದ್ದೀರಿ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಪ್ರಶಂಸಿಸಿದ್ದಾರೆ. ಮತ್ತೋರ್ವರು 'ನ್ಯೂ ಮಾಮ್ ಬಟ್ ಶೈನಿಂಗ್ ಲೈಕ್ ಎ ಸ್ಟಾರ್, ಗ್ರೇಟ್' ಎಂದು ಗುಣಗಾನ ಮಾಡಿದ್ದಾರೆ. ಒಟ್ಟಾರೆ, ನಟಿಯ ಈ ನೋಟ ಹೆಚ್ಚಿನವರ ಪ್ರೀತಿ ಗಳಿಸಿದೆ.
ಇದನ್ನೂ ಓದಿ: ಪುನೀತ್ ಕನಸು ನನಸು: ರಾಜಾಜಿನಗರದಲ್ಲಿ ಶಾಲೆಯ ಶುಭಾರಂಭ; ಅಶ್ವಿನಿ ಪ್ರಯತ್ನಕ್ಕೆ ಶಾಸಕ ಗೋಪಾಲಯ್ಯ-ಅನುಶ್ರೀ ಸಾಥ್
ರೆಟ್ ಕಾರ್ಪೆಟ್ಗೂ ಮುನ್ನ ಕೇನ್ಸ್ ಚಲನಚಿತ್ರೋತ್ಸವದ ಭಾರತ್ ಪೆವಿಲಿಯನ್ನಲ್ಲಿ ಭಾಗವಹಿಸಿದ್ದ ನಟಿ, ಸಿನಿಮಾ ಗಡಿ ಮೀರಿ ಬೆಳೆಯುತ್ತಿದೆ. ನಾವುಗಳು ವಿದೇಶದ ಸಿನಿಮಾಗಳನ್ನೂ ವೀಕ್ಷಿಸುತ್ತಿದ್ದೇವೆ. ವಿದೇಶಿಗರು ನಮ್ಮ ಚಿತ್ರ ವೀಕ್ಷಿಸುತ್ತಿದ್ದಾರೆ. ಹಲವು ಭಾಷೆಗಳಲ್ಲಿ ಹೆಚ್ಚಿನ ಸಂಖ್ಯೆಯ ಸಿನಿಮಾಗಳನ್ನು ಭಾರತೀಯ ಚಿತ್ರರಂಗ ನಿರ್ಮಾಣ ಮಾಡುತ್ತಿದ್ದು, ಜಾಗತಿಕ ಚಲನಚಿತ್ರೋತ್ಸವಗಳಲ್ಲಿ ಹೆಚ್ಚು ಭಾಗವಹಿಸಬೇಕಿದೆ. ಇದರಿಂದ ಭಾರತೀಯ ಸಿನಿಮಾಗಳಿಗೆ ಪ್ರಚಾರ, ಮನ್ನಣೆ ಸಿಗುವುದಷ್ಟೇ ಅಲ್ಲದೇ, ಸಾಮಸ್ಕೃತಿಕ ವಿನಿಮಯ ಮತ್ತು ಅಂತಾರಾಷ್ಟ್ರೀಯ ಸಹಯೋಗಕ್ಕೂ ಸಹಕಾರಿ ಎಂದು ತಿಳಿಸಿದ್ದರು.