ತಮಿಳು ಸೂಪರ್ ಸ್ಟಾರ್ ಅಜಿತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಆಕ್ಷನ್ - ಕಾಮಿಡಿ ಸಿನಿಮಾ 'ಗುಡ್ ಬ್ಯಾಡ್ ಅಗ್ಲಿ' ಏಪ್ರಿಲ್ 10, 2025ರಂದು ಭಾರಿ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು. ಅಧಿಕ್ ರವಿಚಂದ್ರನ್ ನಿರ್ದೇಶನದ ಮತ್ತು ಟಿ-ಸೀರೀಸ್ ಫಿಲ್ಮ್ಸ್ ಸಹಯೋಗದೊಂದಿಗೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ ಈ ಚಿತ್ರ ತೆರೆಕಂಡ ದಿನ ಭರ್ಜರಿ ಪ್ರತಿಕ್ರಿಯೆ ಪಡೆಯಿತು. ತನ್ನ ಮೊದಲ ದಿನದಂದು, ಮಾಸ್ ಎಂಟರ್‌ಟೈನರ್ 29.25 ಕೋಟಿ ರೂ. ಗಳಿಸಿತ್ತು. ಇದು ತಮಿಳು ಚಿತ್ರರಂಗದಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಒಂದಾಗಿದೆ. ಅದಾಗ್ಯೂ, ಕಲೆಕ್ಷನ್ ಎರಡನೇ ದಿನಕ್ಕೇ ಕುಸಿದಿದೆ.
2ನೇ ದಿನದ 'ಗುಡ್ ಬ್ಯಾಡ್ ಅಗ್ಲಿ' ಬಾಕ್ಸ್ ಆಫೀಸ್ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದ ಆರಂಭಿಕ ಅಂದಾಜಿನ ಪ್ರಕಾರ, ಏಪ್ರಿಲ್ 11, ಶುಕ್ರವಾರದಂದು ಗುಡ್ ಬ್ಯಾಡ್ ಅಗ್ಲಿ 13.50 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ 2 ದಿನಗಳ ಇಂಡಿಯಾ ನೆಟ್ ಕಲೆಕ್ಷನ್ 42.75 ಕೋಟಿ ರೂಪಾಯಿ ಆಗಿದೆ. ಬಹುನಿರೀಕ್ಷಿತ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ನೊಂದಿಗೆ ಪ್ರಾರಂಭವಾಯಿತು. ಆದರೆ, ಎರಡನೇ ದಿನ ಸುಮಾರು ಶೇ 54ರಷ್ಟು ಕುಸಿತ ಕಂಡಿದೆ. ಇದು ಚಿತ್ರವು ತನ್ನ ಬಾಕ್ಸ್ ಆಫೀಸ್ ಓಟವನ್ನು ಕಾಯ್ದುಕೊಳ್ಳುವುದು ಮುಂಬರುವ ದಿನಗಳಲ್ಲಿ ಕಷ್ಟಕರವಾಗಬಹುದು ಎಂಬುದನ್ನು ಸೂಚಿಸಿದೆ.
ಇದನ್ನೂ ಓದಿ: 'ಅಭಿಮಾನಿಗಳನ್ನು ದೇವರೆಂದ, ನಿರ್ಮಾಪಕರನ್ನು ಅನ್ನದಾತರೆಂದ ಕನ್ನಡಿಗರ ಕಣ್ಮಣಿ': ಅಪ್ಪಾಜಿ ಸ್ಮರಿಸಿದ ಶಿವಣ್ಣ
ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿ ದಕ್ಷಿಣ ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಹಾಸ್ಯಮಯ ಜೊತೆಗೆ ಭಯಾನಕ ದರೋಡೆಕೋರ ರೆಡ್ ಡ್ರ್ಯಾಗನ್ ಪಾತ್ರದಲ್ಲಿ ನಟಿಸಿದ್ದಾರೆ. ಅಜಿತ್ ಜೊತೆಗೆ ದಕ್ಷಿಣದ ಖ್ಯಾತ ಕಲಾವಿದರಾದ ತ್ರಿಶಾ ಕೃಷ್ಣನ್, ಅರ್ಜುನ್ ದಾಸ್, ರಾಹುಲ್ ದೇವ್, ಯೋಗಿ ಬಾಬು ಮತ್ತು ಪ್ರಿಯಾ ಪ್ರಕಾಶ್ ವಾರಿಯರ್ ಕೂಡಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟರಾದ ಜಾಕಿ ಶ್ರಾಫ್, ತಿನ್ನು ಆನಂದ್, ಸಯಾಜಿ ಶಿಂಧೆ ಮತ್ತು ಸುನಿಲ್ ವರ್ಮಾ ಮುಖ್ಯ ಪಾತ್ರಗಳಲ್ಲಿದ್ದಾರೆ. ಜಿ.ವಿ.ಪ್ರಕಾಶ್ ಅವರ ಸಂಗೀತ ಪ್ರಶಂಸೆಗೆ ಪಾತ್ರವಾಗಿದೆ.
#GoodBadUgly becomes the HIGHEST OPENER FOR AK IN TAMIL NADU 💥💥💥
— Mythri Movie Makers (@MythriOfficial) April 11, 2025
GBU collects a gross of 30.9 CRORES on Day 1 in Tamil Nadu - BLOCKBUSTER SAMBAVAM ❤️🔥
Book your tickets now!
🎟️ https://t.co/jRftZ6uRU5#BlockbusterGBU#AjithKumar #AdhikRavichandran #GoodBadUgly… pic.twitter.com/Q5OVrVfqlY
ಇದನ್ನೂ ಓದಿ: ಡಾ.ರಾಜ್ಕುಮಾರ್ ಪುಣ್ಯಸ್ಮರಣೆ: ಅಭಿಮಾನಿಗಳ ಮನದಲ್ಲಿ ಅಣ್ಣಾವ್ರು ಎಂದಿಗೂ ಅಜರಾಮರ
ಇತ್ತೀಚಿನ ವರದಿಗಳ ವರದಿಗಳ ಪ್ರಕಾರ, ನೆಟ್‌ಫ್ಲಿಕ್ಸ್ ಗುಡ್ ಬ್ಯಾಡ್ ಅಗ್ಲಿ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು 95 ಕೋಟಿ ರೂಪಾಯಿಗೆ ಪಡೆದುಕೊಂಡಿದೆ. ಇದು ಅಜಿತ್ ಕುಮಾರ್ ಅಭಿನಯದ ಚಿತ್ರವೊಂದಕ್ಕೆ ಈವರೆಗಿನ ಅತ್ಯಧಿಕ ಒಟಿಟಿ ಒಪ್ಪಂದವಾಗಿದೆ. ಚಿತ್ರ ಮೇ ತಿಂಗಳೊಳಗೆ ಐದು ಭಾಷೆಗಳಲ್ಲಿ ಒಟಿಟಿಯಲ್ಲಿ ಪ್ರಥಮ ಪ್ರದರ್ಶನಗೊಳ್ಳುವ ನಿರೀಕ್ಷೆ ಇದೆ.