ಅಧಿಕ್ ರವಿಚಂದ್ರನ್ ನಿರ್ದೇಶನದ ಹಾಗೂ ಸೌತ್ ಸೂಪರ್ ಸ್ಟಾರ್ ಅಜಿತ್ ಕುಮಾರ್ ನಟನೆಯ ಬಹು ನಿರೀಕ್ಷಿತ ಆ್ಯಕ್ಷನ್ ಎಂಟರ್‌ಟೈನರ್ 'ಗುಡ್ ಬ್ಯಾಡ್ ಅಗ್ಲಿ' ಏಪ್ರಿಲ್ 10, 2025ರಂದು ಅದ್ಧೂರಿಯಾಗಿ ಬಿಡುಗಡೆಯಾಯಿತು. ಅಭಿಮಾನಿಗಳ ಭಾರಿ ನಿರೀಕ್ಷೆಗಳ ನಡುವೆ ಚಿತ್ರಮಂದಿರಗಳಲ್ಲಿ ಗುರುವಾರದಂದು ಗ್ರ್ಯಾಂಡ್ ರಿಲೀಸ್ ಕಂಡಿದೆ. ಕೊನೆಯ 'ವಿಡಾಮುಯರ್ಚಿ' ಚಿತ್ರ ತೀರಾ ಸಾಧಾರಣ ಪ್ರದರ್ಶನ ಕಂಡಿತ್ತು. ಹಾಗಾಗಿ, 'ಗುಡ್ ಬ್ಯಾಡ್ ಅಗ್ಲಿ' ತಮಿಳು ಸೂಪರ್ ಸ್ಟಾರ್‌ಗೆ ಪ್ರಮುಖ ಪುನರಾಗಮನವಾಗಲಿದೆ ಎಂದು ನಂಬಲಾಗಿತ್ತು. ಅದರಂತೆ ಈ ಚಿತ್ರ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಆರಂಭ ಕಂಡಿದೆ. ಅದಾಗ್ಯೂ, ಆರಂಭಿಕ ಅಂದಾಜುಗಳಿಗಿಂತ ಕೊಂಚ ಕಡಿಮೆ ಎನ್ನಬಹುದು. ಏಕೆಂದರೆ ಕಲೆಕ್ಷನ್ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯಿಡಲಾಗಿತ್ತು.
30+ ಕೋಟಿ ರೂಪಾಯಿಯ ನಿರೀಕ್ಷೆಯಿತ್ತು: ಆರಂಭಿಕ ಅಂದಾಜಿನ ಪ್ರಕಾರ, 'ಗುಡ್ ಬ್ಯಾಡ್ ಅಗ್ಲಿ' ತನ್ನ ಮೊದಲ ದಿನದಂದು 28.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಈ ಅಂಕಿ-ಅಂಶ ಉತ್ತಮವಾಗಿದ್ದರೂ, ವಿಶ್ಲೇಷಕರು ನಿರೀಕ್ಷಿಸಿದ್ದು 30+ ಕೋಟಿ ರೂಪಾಯಿ. ವಿಶೇಷವಾಗಿ ತಮಿಳುನಾಡಿನಲ್ಲಿ, ಪ್ರೀ ಸೇಲ್ಸ್ ಉತ್ತಮವಾಗಿ ನಡೆದಿದೆ.
'ಗುಡ್ ಬ್ಯಾಡ್ ಅಗ್ಲಿ' ಇಂಡಿಯಾ ನೆಟ್ ಕಲೆಕ್ಷನ್:
ದಿನ | ಇಂಡಿಯಾ ನೆಟ್ ಕಲೆಕ್ಷನ್ |
ಮೊದಲ ದಿನ (ಗುರುವಾರ) | 28.50 ಕೋಟಿ ರೂಪಾಯಿ (ಆರಂಭಿಕ ಅಂದಾಜು). |
ಒಟ್ಟು ಕಲೆಕ್ಷನ್ | 28.50 ಕೋಟಿ ರೂಪಾಯಿ. |
ಅಜಿತ್ ಅವರ ಹಿಂದಿನ 5 ಸಿನಿಮಾಗಳ ಮೊದಲ ದಿನದ ಕಲೆಕ್ಷನ್: ಮೊದಲ ದಿನದ ಇಂಡಿಯಾ ನೆಟ್ ಕಲೆಕ್ಷನ್ನಲ್ಲಿ ಅಜಿತ್ ಕುಮಾರ್ ಅವರ ಕೊನೆಯ 5 ಚಿತ್ರಗಳ ಪೈಕಿ 'ಗುಡ್ ಬ್ಯಾಡ್ ಅಗ್ಲಿ' ಎರಡನೇ ಸ್ಥಾನದಲ್ಲಿದೆ.
No better sight than watching housefulls at theatres ❤️🔥#GoodBadUgly runnings successfully all over 💥💥
— Mythri Movie Makers (@MythriOfficial) April 10, 2025
Book your tickets now!#BlockbusterGBU pic.twitter.com/LtHypgtThD
- ವಲಿಮೈ (2022) - 31.70 ಕೋಟಿ ರೂಪಾಯಿ.
- ಗುಡ್ ಬ್ಯಾಡ್ ಅಗ್ಲಿ (2025) - 28.50 ಕೋಟಿ ರೂಪಾಯಿ.
- ವಿಡಾಮುಯರ್ಚಿ (2025) - 26.00 ಕೋಟಿ ರೂಪಾಯಿ.
- ತುನಿವು (2023) - 24.40 ಕೋಟಿ ರೂಪಾಯಿ.
- ನೆರ್ಕೊಂಡ ಪಾರ್ವೈ (2019) - 18.60 ಕೋಟಿ ರೂಪಾಯಿ.
ಇದನ್ನೂ ಓದಿ: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪುತ್ರನ ಆರೋಗ್ಯದಲ್ಲಿ ಚೇತರಿಕೆ: ಅಗ್ನಿ ಅವಘಡದ ಬಳಿಕ ಮಾಹಿತಿ ಹಂಚಿಕೊಂಡ ಚಿರಂಜೀವಿ
ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿ ಅಜಿತ್ ಕುಮಾರ್ ಜೊತೆಗೆ ತ್ರಿಶಾ ಕೃಷ್ಣನ್, ಅರ್ಜುನ್ ದಾಸ್, ಯೋಗಿ ಬಾಬು, ಜಾಕಿ ಶ್ರಾಫ್ ಸೇರಿದಂತೆ ಪ್ರತಿಭಾನ್ವಿತ ತಾರಾಗಣವನ್ನು ಕಾಣಬಹುದು. ಅಧಿಕ್ ರವಿಚಂದ್ರನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರತಂಡ ಮಾತ್ರವಲ್ಲದೇ ಪ್ರೇಕ್ಷಕರು ಉತ್ತಮ ಪ್ರಚಾರ ನಡೆಸುತ್ತಿದ್ದು, ಗುಡ್ ಬ್ಯಾಡ್ ಅಗ್ಲಿ ನಟನಿಗೆ ಸದ್ಯ ಅಗತ್ಯ ಇರುವ ಬ್ಲಾಕ್ಬಸ್ಟರ್ ಪಟ್ಟ ತಂದುಕೊಡುವ ಸಾಧ್ಯತೆಯಿದೆ.
ಇದನ್ನೂ ಓದಿ: ನಿವೇದಿತಾ ಗೌಡ, ಚಂದನ್ ಶೆಟ್ಟಿ ನಟನೆಯ 'ಮುದ್ದು ರಾಕ್ಷಸಿ' ಶೂಟಿಂಗ್ ಕಂಪ್ಲೀಟ್