ETV Bharat / entertainment

300 ಪ್ರಪೋಸಲ್​​​​​​ ಒಪ್ಪದ ಸನ್ನಿಧಿಯೀಗ 'ಅಗ್ನಿಸಾಕ್ಷಿ'ಯಲ್ಲಿ ನವಪಯಣಕ್ಕೆ ರೆಡಿ: ವೈಷ್ಣವಿ ಗೌಡ ನಿಶ್ಚಿತಾರ್ಥದ ಫೋಟೋಗಳಿಲ್ಲಿವೆ - VAISHNAVI GOWDA

ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸುಂದರ ಫೋಟೋಗಳನ್ನು ಹಂಚಿಕೊಂಡ ಅವರು 'ಡೆಸ್ಟಿನಿ ಪರಿಪೂರ್ಣ ಪ್ರೇಮಕಥೆಯನ್ನು ಬರೆದಿದೆ' ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರ.

vaishnavi gowda
ನಟಿ ವೈಷ್ಣವಿ ಗೌಡ (Photo: ETV Bharat)
author img

By ETV Bharat Entertainment Team

Published : April 15, 2025 at 10:29 AM IST

2 Min Read

'ಅಗ್ನಿಸಾಕ್ಷಿ' ಧಾರಾವಾಹಿ ನಾಯಕಿ 'ಸನ್ನಿಧಿ' ಖ್ಯಾತಿಯ ವೈಷ್ಣವಿ ಗೌಡ ನವಪಯಣ ಆರಂಭಿಸಲು ಸಜ್ಜಾಗಿದ್ದಾರೆ. ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಜನಪ್ರಿಯತೆ ಹೊಂದಿರುವ ನಟಿ ಮದುವೆಯ ಮೊದಲ ಹೆಜ್ಜೆ ಎನ್ನುವಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಏಪ್ರಿಲ್​​ 15, ಸೋಮವಾರ ರಾತ್ರಿ ಕಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಸಮಾರಂಭ ಜರುಗಿದ್ದು, ಫೋಟೋ ವಿಡಿಯೋಗಳು ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​​ಗಳಲ್ಲಿ ವೈರಲ್​ ಆಗುತ್ತಿವೆ. ಅಭಿಮಾನಿಗಳು ಅಭಿನಂದನೆಗಳ ಮಳೆ ಹರಿಸಿದ್ದಾರೆ.

ಸೆಲೆಬ್ರಿಟಿಗಳೆಂದ ಮೇಲೆ ಮಾಧ್ಯಮ, ಪಾಪರಾಜಿ, ಸೋಷಿಯಲ್​ ಮೀಡಿಯಾಗಳ ಗಮನ ಸಹಜವಾಗೇ ಅವರ ಮೇಲಿರುತ್ತದೆ. ಅಭಿಮಾನಿಗಳು ಮತ್ತು ನೆಟ್ಟಿಗರೂ ಕೂಡಾ ಅವರ ವೃತ್ತಿಜೀವನದ ಜೊತೆ ಜೊತೆಗೆ ವೈಯಕ್ತಿಕ ಜವನದ ಬಗ್ಗೆ ತಿಳಿದುಕೊಳ್ಳಲು ಆಸಕ್ತರಾಗಿರುತ್ತಾರೆ. ಪ್ರೀತಿ ಪ್ರೇಮ, ಮದುವೆ ವಿಷಯಗಳ ಆರಂಭ, ಪಾರ್ಟಿ, ಫ್ರೆಂಡ್ಸ್​ ಹೀಗೆ ಅವರಿಗೆ ಸಂಬಂಧಪಟ್ಟ ಬಹುತೇಕ ವಿಷಯಗಳು ಸೋಷಿಯಲ್​ ಮೀಡಿಯಾಗಳಲ್ಲಿ ಕ್ಷಣಮಾತ್ರದಲ್ಲಿ ವೈರಲ್​​ ಆಗುತ್ತವೆ. ಅಂಥದರಲ್ಲಿ ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಸಮಾರಂಭ ಎಲ್ಲರಿಗೂ ಸರ್ಪೈಸ್​​​ ಆಗಿದೆ.

Amulya Instagram Story
ನಟಿ ಅಮೂಲ್ಯ ಇನ್​ಸ್ಟಾಗ್ರಾಮ್​ ಸ್ಟೋರಿ (Photo: Actress Amulya Instagram)

ಅಭಿಮಾನಿಗಳಿಗೆ ಸಂತಸದ ಜೊತೆ ಸರ್ಪೈಸ್​​​: ನಟಿ ಎಂಗೇಜ್​ಮೆಂಟ್​ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಸಣ್ಣ ಸುಳಿವೂ ಇರಲಿಲ್ಲ. ಮದುವೆ ಬಗ್ಗೆ ಯಾವುದೇ ಅಂತೆಕಂತೆಗಳಿರಲಿಲ್ಲ. ಲವ್, ರಿಲೇಶನ್​ಶಿಪ್​, ಡೇಟಿಂಗ್​ ರೂಮರ್ಸ್​ ಇಲ್ವೇ ಇಲ್ಲ. ಇದ್ದಕ್ಕಿದ್ದಂತೆ ಆನ್​ಲೈನ್​​ನಲ್ಲಿ ಫೋಟೋ ವಿಡಿಯೋಗಳು ವೈರಲ್​​ ಆಗಿವೆ. ಇದನ್ನು ಕಂಡ ಅಭಿಮಾನಿಗಳು ಸಂತಸದ ಜೊತೆ ಸರ್ಪೈಸ್​​​ ಆಗಿದ್ದಾರೆ.

ಆಪ್ತ ಗೆಳತಿ ನಟಿ ಅಮೂಲ್ಯ ಸಾಥ್: ವೈಷ್ಣವಿ ಹಾಗೂ ಅಮೂಲ್ಯ ಬಹಳ ಸಮಯದಿಂದ ಆಪ್ತ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಗೆಳತಿಯ ವಿಶೇಷ ದಿನಕ್ಕೆ ಅಮೂಲ್ಯ ಕುಟುಂಬ ಸಾಕ್ಷಿಯಾಗಿದೆ.

ಉದ್ಯಮಿ ಜೊತೆ ನಟಿಯ ನಿಶ್ಚಿತಾರ್ಥ: ಕಳೆದ ಸಂಜೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಅನುಕೂಲ್​​ ಮಿಶ್ರಾ ಎಂಬ ಉದ್ಯಮಿ ಜೊತೆ ಎಂಗೇಜ್​​ಮೆಂಟ್​ ಮಾಡಿಕೊಂಡಿದ್ದಾರೆ. ಇದು ಆಪ್ತರಿಗಷ್ಟೇ ಸೀಮಿತವಾಗಿದ್ದ ಸಮಾರಂಭ ಎಂಬಂತೆ ತೋರಿದೆ. ನಟಿ ಮಿನುಗುವ ಗೌನ್​​ನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಉಂಗುರ ಬದಲಾಯಿಸಿಕೊಂಡ ಕ್ಷಣ ಜೋಡಿಯ ಮೊಗ ಬಹಳ ಪ್ರೀತಿ, ಖುಷಿಯಿಂದ ಕಂಗೊಳಿಸಿದೆ.

ಇದನ್ನೂ ಓದಿ: 'ಕೆಜಿಎಫ್​​ 2'ಗೆ 3 ವರ್ಷ: 'ಟಾಕ್ಸಿಕ್'​​ ಚಿತ್ರೀಕರಣ ಜೋರು; ಮುಂಬೈನಲ್ಲಿ ಯಶ್ ರಾಧಿಕಾ ದಂಪತಿ- ವಿಡಿಯೋ ನೋಡಿ

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್​ ಸೀಸನ್​​ 8ಕ್ಕೆ ಎಂಟ್ರಿ ಕೊಟ್ಟಿದ್ದರು. ಅವರ ವಿನಮ್ರ ವ್ಯಕ್ತಿತ್ವ ಬಹುತೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಕೋವಿಡ್​ ಹಿನ್ನೆಲೆ, ಕಾರ್ಯಕ್ರಮ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಒಂದಿಷ್ಟು ಗ್ಯಾಪ್​​​ ಬಳಿಕ ಶೋ ಪುನರಾರಂಭಗೊಂಡಾಗ ನಿರೂಪಕ ಕಿಚ್ಚ ಸುದೀಪ್​ ಮದುವೆ ವಿಚಾರವನ್ನೆತ್ತಿದ್ದರು. ಈ ಗ್ಯಾಪ್​ನಲ್ಲಿ ಬಂದ ಪ್ರಪೋಸಲ್​ ಎಷ್ಟು ಎಂದು ಸುದೀಪ್​ ಕೇಳಿದ್ದ ಪ್ರಶ್ನೆಗೆ ಅಂದಾಜು 300 ಇರಬಹುದು ಎಂದು ಉತ್ತರಿಸಿದ್ದರು. ಜೊತೆಗೆ, ನಾನು ನನ್ನ ಮನದ ಮಾತು ಕೇಳುವವಳು. ಯಾವುದೂ ಕನೆಕ್ಟ್​ ಆಗಲಿಲ್ಲ ಎಂದು ಉತ್ತರಿಸಿದ್ದರು. ಇದೀಗ ಅಕಾಯ್​ ಜೊತೆ ದಾಂಪತ್ಯ ಜೀವನ ಆರಂಭಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ವಿಡಿಯೋ: ತಿರುಪತಿಗೆ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ; ಸಿಂಗಾಪುರ ಅಗ್ನಿ ಅವಘಡದಲ್ಲಿ ಸಿಲುಕಿದ್ದ ಪುತ್ರ ಭಾರತಕ್ಕೆ ವಾಪಸ್

ಇನ್ನೂ, ಬಿಗ್​ ಬಾಸ್​ ಎಪಿಸೋಡ್​​ ಒಂದರಲ್ಲಿ ಸಹಸ್ಪರ್ಧಿಯೊಂದಿಗೆ ಮದುವೆ ಬಗ್ಗೆ ಮಾತನಾಡಿದ್ದರು. ವೈವಾಹಿಕ ಜೀವನವನ್ನು ಅನುಭವಿಸಲು ಎದುರು ನೋಡುತ್ತಿದ್ದೇನೆ. ಸೂಕ್ತ ಬಾಳಸಂಗಾತಿಗಾಗಿ ಕಾಯುತ್ತಿದ್ದೇನೆ ಎಂಬರ್ಥದಲ್ಲಿ ಮಾತನಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.