ETV Bharat / entertainment

ಇದು ಎ, ಬಿ ಅಲ್ಲ, 'ಸಿ'ನಿಮಾ!: ಹೊಸಬರ ತಂಡಕ್ಕೆ ಲೂಸ್ ಮಾದ ಯೋಗಿ ಬೆಂಬಲ - Actor Yogesh

author img

By ETV Bharat Entertainment Team

Published : Aug 8, 2024, 3:43 PM IST

ಸಬರ ತಂಡವೊಂದು 'ಸಿ' ಎನ್ನುವ ಒಂದೇ ಅಕ್ಷರದ ಶೀರ್ಷಿಕೆ ಹಿಡಿದು ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಈಗಾಗಲೇ ಟೀಸರ್ ಮತ್ತು ಕಂದಾ ಕಂದಾ ಎನ್ನುವ ಹಾಡಿನ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ ಚಿತ್ರತಂಡಕ್ಕೆ ನಟ ಲೂಸ್ ಮಾದ ಯೋಗಿ ಮತ್ತು ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರ ಬೆಂಬಲ ಸಿಕ್ಕಿದೆ.‌

Yogesh supports 'C' film team
ಹೊಸ ಚಿತ್ರತಂಡಕ್ಕೆ ಯೋಗಿ ಸಾಥ್ (ETV Bharat)
ಹೊಸ ಚಿತ್ರತಂಡಕ್ಕೆ ಯೋಗಿ ಸಾಥ್ (ETV Bharat)

ಸ್ಯಾಂಡಲ್​ವುಡ್​ನ ರಿಯಲ್​ ಸ್ಟಾರ್ ಉಪೇಂದ್ರ ಅವರ 'ಎ' ಎಂಬಂತಹ ಒಂದೇ ಅಕ್ಷರದ ಸಿನಿಮಾಗಳು ತೀರಾ ಅಪರೂಪ. ಇದೀಗ ಹೊಸಬರ ತಂಡವೊಂದು 'ಸಿ' ಎನ್ನುವ ಒಂದೇ ಅಕ್ಷರದ ಶೀರ್ಷಿಕೆಯೊಂದಿಗೆ ಚಿತ್ರಮಂದಿರಕ್ಕೆ ಬರಲು ಸಿದ್ಧತೆ ನಡೆಸಿದೆ. ಒಂದೇ ಅಕ್ಷರದ ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ ಈ ಸಿನಿಮಾ ಈಗಾಗಲೇ ಟೀಸರ್ ಮತ್ತು ಕಂದಾ ಕಂದಾ ಎಂಬ ಹಾಡಿನ ಮೂಲಕ ಅಭಿಮಾನಿಗಳ ಗಮನ ಸೆಳೆದಿದೆ. ಹೊಸಬರ 'ಸಿ' ಚಿತ್ರಕ್ಕೆ ನಟ ಲೂಸ್ ಮಾದ ಯೋಗಿ ಮತ್ತು ಖ್ಯಾತ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರ ಬೆಂಬಲ ದೊರೆತಿದೆ.‌

ಸದ್ಯ ಸಿನಿಮಾದ 'ಇದು ಎ ಅಲ್ಲ ಬಿ ಅಲ್ಲ ಸಿ...' ಎನ್ನುವ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಎ.ಬಿ.ಮುರಳಿಧರನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡನ್ನು ಶಶಾಂಕ್ ಶೇಷಗಿರಿ, ಸುರಭಿ ಭಾರದ್ವಜ್ ಹಾಗೂ ಜ್ಞಾನ ಹಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಈ ಹಾಡನ್ನು ನಟ ಯೋಗಿ ರಿಲೀಸ್ ಮಾಡಿದರು. ಇತ್ತೀಚೆಗಷ್ಟೇ ಹಾಡು ಅನಾವರಣಗೊಳಿಸಿದ ಯೋಗಿ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದರು. ಯೋಗಿ ಹೊಸ ಚಿತ್ರತಂಡದ ಬೆನ್ನಿಗೆ ನಿಂತಿರುವುದು 'ಸಿ' ಟೀಮ್​ಗೆ ಖುಷಿ ತಂದಿದೆ. ಇನ್ನು ವಿ.ನಾಗೇಂದ್ರ ಪ್ರಸಾದ್ ಕೂಡ 'ಸಿ'ನಿಮಾದ ಹಾಡನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇಡೀ ಸಿನಿಮಾಗೆ ಒಳ್ಳೆಯದಾಗಲಿ, ಕನ್ನಡ ಚಿತ್ರರಂಗ ಬೆಳೆಯಲಿ ಎಂದು ಹಾರೈಸಿದ್ದಾರೆ.

'ಸಿ' ಕಣ್ಣು ಕಾಣದ ಮಗಳು ಹಾಗೂ ಅಪ್ಪನ ನಡುವಿನ ಬಾಂಧವ್ಯದ ಕಥೆ. ಕಣ್ಣು ಕಾಣದ ಮಗಳ ಆಸೆಯನ್ನು ನೆರವೇರಿಸಲು ತಂದೆ ಎಷ್ಟೆಲ್ಲಾ ಕಷ್ಟ ಪಡುತ್ತಾರೆ ಎಂಬ ಅಂಶಗಳನ್ನು ಒಳಗೊಂಡಿದೆ. ಮಗಳಿಗಾಗಿ ಅಪ್ಪನ ಹೋರಾಟದ ಕಥೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಿರಣ್ ಸುಬ್ರಮಣಿ. ಕಿರಣ್ ನಿರ್ದೇಶನದ ಜೊತೆಗೆ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ನಾಗ ಚೈತನ್ಯ ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ: ಫೋಟೋ ಹಂಚಿಕೊಂಡ ತಂದೆ ನಾಗಾರ್ಜುನ - Naga Chaitanya Sobhita Engaged

ನಿರ್ದೇಶಕ, ನಾಯಕ ಕಿರಣ್ ಅವರಿಗೆ ಇದು ಚೊಚ್ಚಲ ಚಿತ್ರ. ಹಾಗಂತ ಸಿನಿಮಾರಂಗವೇನೂ ಇವರಿಗೆ ಹೊಸದೇನಲ್ಲ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇದೀಗ 'ಸಿ' ಸಿನಿಮಾ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.

ಇದನ್ನೂ ಓದಿ: 'ದರ್ಶನ್​​​ಗೆ ಮನೆಯೂಟ ನೀಡುವ ಅಗತ್ಯವಿಲ್ಲ': ಕಾರಾಗೃಹ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ - Home Food for Darshan

ಆಗಸ್ಟ್‌ 23ಕ್ಕೆ 'ಸಿ'ನಿಮಾ: ಸಿನಿಮಾ ತಂದೆ-ಮಗಳ ಬಾಂಧವ್ಯದ ಜೊತೆಗೆ ಮೆಡಿಕಲ್ ಮಾಫಿಯಾದ ಕಥೆಯನ್ನೂ ಒಳಗೊಂಡಿದೆ. ಎಜಿಎಸ್ ಪ್ರೊಡಕ್ಷನ್ ಅಡಿ ನಿರ್ದೇಶಕ, ನಾಯಕ ಕಿರಣ್ ಅವರ ತಂದೆ ಸುಬ್ರಮಣಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಟೀಸರ್ ಮೂಲಕ ಗಮನ ಸೆಳೆಯುತ್ತಿರುವ 'ಸಿ'ನಿಮಾ ಆಗಸ್ಟ್‌ 23ಕ್ಕೆ ತೆರೆಕಾಣುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.