ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ '45' ತನ್ನ ಪ್ರಚಾರ ಪ್ರಾರಂಭಿಸಿದೆ. ಚಂದನವನದ ಬಹುಬೇಡಿಕೆ ನಟರು ಒಂದೇ ಚಿತ್ರದಲ್ಲಿ ಬಣ್ಣ ಹಚ್ಚಿರೋ ಹಿನ್ನೆಲೆ, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳಲಾಗಿದೆ. ಚಿತ್ರತಂಡ ಬೆಂಗಳೂರು, ಹೈದರಾಬಾದ್, ಮುಂಬೈನಂತಹ ದೊಡ್ಡ ನಗರಗಳಲ್ಲಿ ಪ್ರಚಾರ ಕೈಗೊಳ್ಳುತ್ತಿದೆ.
ಶಿವಣ್ಣನಿಗೆ ಉಪ್ಪಿ ಆ್ಯಕ್ಷನ್ ಕಟ್? ಓಂ ಚಿತ್ರದ ಮೂಲಕ ಶಿವರಾಜ್ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಿದ್ರಿ, ಮತ್ತೊಮ್ಮೆ ಅವಕಾಶ ಸಿಕ್ಕರೆ ಬಳಸಿಕೊಳ್ಳುತ್ತೀರಾ? ಎಂಬ ಪ್ರಶ್ನೆ ನಟ ಉಪೇಂದ್ರ ಅವರಿಗೆ ಎದುರಾಯಿತು. ಬಹಳ ಖುಷಿಯಿಂದ ಪ್ರತಿಕ್ರಿಯಿಸಿದ ಉಪ್ಪಿ, ಖಂಡಿತವಾಗಿಯೂ ಎಂದು ಉತ್ತರಿಸಿದರು. ಯಾವಾಗಲೂ ಅದಕ್ಕೆ ಎದುರು ನೋಡುತ್ತಿದ್ದೇನೆ. ಒಳ್ಳೆ ಸ್ಟೋರಿ ಸಿಗಬೇಕು. ಆ ಕೂಡಲೇ ನಾನು ಶಿವಣ್ಣನನ್ನು ಸಂಪರ್ಕಿಸುತ್ತೇನೆ ಎಂದು ತಿಳಿಸಿದರು.
ರಾಮ್ ಚರಣ್ ಅಮೇಜಿಂಗ್ ಪರ್ಸನ್: ಆರೋಗ್ಯದ ಬಗ್ಗೆ ಪ್ರಶ್ನೆಗಳು ಎದುರಾದಾಗ, ಬಹಳ ಚೆನ್ನಾಗಿದ್ದೇನೆ. ಇತ್ತಿಚೆಗಷ್ಟೇ ಶೂಟಿಂಗ್ ಕೂಡಾ ನಡೆಸಿದ್ದೇನೆ. ಎರಡು ದಿನಗಳ ಚಿತ್ರೀಕರಣವಿತ್ತು. ಬಹಳ ಉತ್ತಮವಾಗಿ ನಡೆದಿದೆ ಎಂದು ಮಾಹಿತಿ ನೀಡಿದರು.
ಸಂಪೂರ್ಣ ಚಿತ್ರತಂಡ ಅಮೇಜಿಂಗ್. ಡೈರೆಕ್ಟರ್ ತುಂಬಾ ಚೆನ್ನಾಗಿ ಸಹಕರಿಸಿದರು. ರಾಮ್ ಚರಣ್ ಅಮೇಜಿಂಗ್ ಪರ್ಸನ್. ಅವರ ವರ್ತನೆ, ವ್ಯಕ್ತಿತ್ವ ಬಹಳ ಒಳ್ಳೆದಿದೆ. ನನಗವರು ಬಹಳ ಇಷ್ಟ ಆದ್ರು ಎಂದು ತಿಳಿಸಿದರು. ಪೆದ್ದಿ ಟೀಸರ್ ಮೈಂಡ್ ಬ್ಲೋಯಿಂಗ್ ಆಗಿ ಮೂಡಿಬಂದಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮೈಸೂರು: ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ನಟ ಪ್ರಭುದೇವ ಭಾಗಿ
ನಮ್ಮ 45 ಚಿತ್ರವನ್ನು ಜನರು ಬಹಳ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ. ನಾವು ನಿರ್ವಹಿಸಿದ ಪಾತ್ರಗಳು ಜನರನ್ನು ತಲುಪಲಿ. ಅಲ್ಲಿ ಮನರಂಜನೆ, ಟೆನ್ಷನ್, ಭಯ ಸೇರಿ ನಾನಾ ಭಾವನೆಗಳಿವೆ. ಹೆಚ್ಚಿನವರು ಇಷ್ಟ ಪಡಲಿದ್ದಾರೆ ಎಂದು ತಿಳಿಸಿದರು.
ಶಿವಣ್ಣನ ಪಾತ್ರ ಬಹಳ ವಿಶೇಷವಾಗಿದೆ: 45 ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ, ಸಿನಿಮಾದ ಪಾತ್ರಗಳು ಬಹಳ ಮಹತ್ವದ್ದಾಗಿದೆ. ಶಿವಣ್ಣನ ಕ್ಯಾರೆಕ್ಟರ್ ಬಹಳ ಸ್ಪೆಷಲ್ ಆಗಿ ಮೂಡಿ ಬಂದಿದೆ. ಭಾರತದಾದ್ಯಂತದ ಅಭಿಮಾನಿಗಳು ಕ್ಲೈಮ್ಯಾಕ್ಸ್ ನಲ್ಲಿ ಶಿವಣ್ಣನನ್ನು ನೋಡಿ ಸರ್ಪೈಸ್ ಆಗಲಿದ್ದಾರೆ. ಅವರು ಕಿಮೋ ಚಿಕಿತ್ಸೆ ನಡುವೆಯೂ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಇನ್ನು, ಉಪ್ಪಿ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಆಶೀರ್ವಾದ ಅಂತಲೇ ಹೇಳಬಹುದು. ಯಾವುದೇ ಪಾತ್ರವಿರಲಿ, ಮ್ಯಾಜಿಕ್ ಮಾಡಿಬಿಡುತ್ತಾರೆ. '45' ಅನ್ನೋದು ದಿನಗಳ ಸಂಖ್ಯೆ. ಆ ದಿನಗಳಲ್ಲಿ ಏನಾಗಲಿದೆ ಅನ್ನೋದನ್ನು ಸಿನಿಮಾ ತಿಳಿಸಲಿದೆ ಎಂದರು.
ಇದನ್ನೂ ಓದಿ: ಸೆಟ್ಟೇರಿತು ಅಭಿನಯ ಚಕ್ರವರ್ತಿಯ 'ಬಿಲ್ಲ ರಂಗ ಭಾಷಾ': ಸುದೀಪ್ ಫಸ್ಟ್ ಲುಕ್ ರಿಲೀಸ್
ಚಿತ್ರವನ್ನು ಉಮಾ ರಮೇಶ್ ರೆಡ್ಡಿ ನಿರ್ಮಿಸಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಗೀತವನ್ನೂ ನಿರ್ವಹಿಸಿದ್ದಾರೆ. ಸಿನಿಮಾ ವಿಶ್ವದಾದ್ಯಂತ ಆಗಸ್ಟ್ 15ರಂದು ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.