ETV Bharat / entertainment

ಬಾಲಿವುಡ್​ ನೆಲದಲ್ಲಿ ಸ್ಯಾಂಡಲ್​​​ವುಡ್​ ಘಟಾನುಘಟಿಗಳು: ಮುಂಬೈ ತಲುಪಿದ ಶಿವಣ್ಣ, ಉಪ್ಪಿ, ಅರ್ಜುನ್​ ಜನ್ಯ - 45 MOVIE

ನಟರಾದ ಶಿವ ರಾಜ್‌ಕುಮಾರ್, ಉಪೇಂದ್ರ, ನಿರ್ದೇಶಕ ಅರ್ಜುನ್ ಜನ್ಯ ಮತ್ತು ನಿರ್ಮಾಪಕ ಎಂ.ರಮೇಶ್ ರೆಡ್ಡಿ ಮುಂಬೈ ತಲುಪಿದ್ದಾರೆ. ಗೀತಾ ಶಿವರಾಜ್​ಕುಮಾರ್​, ಆ್ಯಂಕರ್​ ಅನುಶ್ರೀ ಕೂಡಾ ಜೊತೆಗಿದ್ದರು.

45 film team
ಮುಂಬೈನಲ್ಲಿ '45' ಚಿತ್ರತಂಡ (Photo: ANI)
author img

By ETV Bharat Entertainment Team

Published : April 15, 2025 at 1:06 PM IST

2 Min Read

'45' ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ಈ ಸಾಲಿನ ಪ್ರೇಕ್ಷಕರ ದಿ ಮೋಸ್ಟ್​ ಎಕ್ಸ್​​ಪೆಕ್ಟೆಡ್​ ಸಿನಿಮಾ ಲಿಸ್ಟ್​​ನಲ್ಲಿರುವ ಪ್ರಾಜೆಕ್ಟ್​ ಇದು. ಚಂದನವನದ ಘಟಾನುಘಟಿಗಳು ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಂಡಿರೋದು ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಕನ್ನಡ ಚಿತ್ರರಂಗದ ಬಹುಬೇಡಿಕೆ ನಟರು ತೆರೆಹಂಚಿಕೊಂಡಿರುವ ಹಿನ್ನೆಲೆ, ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳಲಾಗಿದೆ.

ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​, ರಿಯಲ್​ ಸ್ಟಾರ್​ ಉಪೇಂದ್ರ ಹಾಗೂ ಪ್ರತಿಭಾನ್ವಿತ ನಟ ​ರಾಜ್​ ಬಿ ಶೆಟ್ಟಿ ಈ '45' ಚಿತ್ರದಲ್ಲಿ ತೆರೆಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಟೀಸರ್​​ ಅನಾವರಣಗೊಂಡಿದೆ. ಟೀಸರೇ ಹಿಂಗೆ, ಇನ್ನೂ ಸ್ಯಾಂಡಲ್​ವುಡ್​ ಸೂಪರ್​ ಸ್ಟಾರ್​ಗಳ ಸಿನಿಮಾ ಹೇಂಗಿರಬಹುದು? ಎಂದು ಸಿನಿಪ್ರಿಯರು ಹಾಗೂ ಖ್ಯಾತ ಕಲಾವಿದರ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರ ವಿಶ್ವಾದ್ಯಂತ ಆಗಸ್ಟ್​ 15ರಂದು ಬಹಳ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಇಂದು ಚಿತ್ರತಂಡ ಪ್ರಚಾರಕ್ಕಾಗಿ ಮುಂಬೈ ತಲುಪಿದ್ದಾರೆ.

ಮುಂಬೈನಲ್ಲಿ '45' ಚಿತ್ರತಂಡ (Video: ANI)

ಒಂದೇ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆ ತಾರೆಯರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಹಿನ್ನೆಲೆ, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೂ ಸಖತ್​​ ಸದ್ದು ಮಾಡುತ್ತಾ ಬಂದಿದೆ. ಗ್ಲಿಂಪ್ಸ್​​ಗಾಗಿ ಫ್ಯಾನ್ಸ್​ ಕಾಯುತ್ತಿದ್ದ ಸಂದರ್ಭ ಚಿತ್ರತಂಡ ಟೀಸರ್​ ಅನಾವರಣಗೊಳಿಸಿ, ಅಭಿಮಾನಿಗಳ ಉತ್ಸಾಹವನ್ನು ದುಪ್ಪಟ್ಟುಗೊಳಿಸಿತ್ತು. ಇದೀಗ ಚಿತ್ರತಂಡ ಪ್ರಚಾರ ಕೈಗೊಂಡಿದೆ.

ಪ್ಯಾನ್ ಇಂಡಿಯಾ ಸಿನಿಮಾವನ್ನು ಪ್ರಚಾರ ಮಾಡೋ ಸಲುವಾಗಿ ಸೂಪರ್​ ಸ್ಟಾರ್​ಗಳಾದ ಶಿವ ರಾಜ್‌ಕುಮಾರ್, ಉಪೇಂದ್ರ, ನಿರ್ದೇಶಕ ಅರ್ಜುನ್ ಜನ್ಯ ಮತ್ತು ನಿರ್ಮಾಪಕ ಎಂ ರಮೇಶ್ ರೆಡ್ಡಿ ಮುಂಬೈ ತಲುಪಿದ್ದಾರೆ. ಗೀತಾ ಶಿವರಾಜ್​ಕುಮಾರ್​, ಆ್ಯಂಕರ್​ ಅನುಶ್ರೀ ಕೂಡಾ ಜೊತೆಗಿದ್ದರು. ಹಿಂದಿ ಟೀಸರ್ ಬಿಡುಗಡೆಗಾಗಿ ಮುಂಬೈಗೆ ತೆರಳಿದ್ದಾರೆ. ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಹಿನ್ನೆಲೆ, ಬಾಲಿವುಡ್​ ನೆಲದಲ್ಲೂ ತಮ್ಮ ಸಿನಿಮಾವನ್ನು ಪ್ರಚಾರ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: 300 ಪ್ರಪೋಸಲ್​​​​​​ ಒಪ್ಪದ ಸನ್ನಿಧಿಯೀಗ 'ಅಗ್ನಿಸಾಕ್ಷಿ'ಯಲ್ಲಿ ನವಪಯಣಕ್ಕೆ ರೆಡಿ: ವೈಷ್ಣವಿ ಗೌಡ ನಿಶ್ಚಿತಾರ್ಥದ ಫೋಟೋಗಳಿಲ್ಲಿವೆ

ಮುಂಬೈ ಏರ್​​ಪೋರ್ಟ್​​ ಬಳಿ ಪಾಪರಾಜಿಗಳು (ಛಾಯಾಗ್ರಾಹಕರು) ಸೆಲೆಬ್ರಿಟಿಗಳ ಫೋಟೋ ವಿಡಿಯೋಗಳನ್ನು ಸೆರೆಹಿಡಿಯೋದು ಸಾಮಾನ್ಯ. ಅದರಂತೆ, ದಕ್ಷಿಣ ಚಿತ್ರರಂಗದ ಖ್ಯಾತನಾಮರ ಫೋಟೋ ವಿಡಿಯೋಗಳು ಇಂಟರ್​ನೆಟ್​ನಲ್ಲಿ ವೈರಲ್​​ ಆಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: 'ಕೆಜಿಎಫ್ ಚಾಪ್ಟರ್​​ 3 - ಸಿ ಯು ಸೂನ್'​​: ರಾಕಿ ಫ್ಯಾನ್ಸ್​​ಗೆ ಭರ್ಜರಿ ಸರ್ಪೈಸ್​​​; ಬರಲಿದೆ ಬ್ಲಾಕ್​ಬಸ್ಟರ್ ಸಿನಿಮಾದ ಮತ್ತೊಂದು ಭಾಗ

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಆ್ಯಕ್ಷನ್​ ಕಟ್​ ಹೇಳಿರುವ ಚೊಚ್ಚಲ ಚಿತ್ರವಿದು. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರಕ್ಕೆ ರಮೇಶ್​​ ರೆಡ್ಡಿ ಬಂಡವಾಳ ಹೂಡಿದ್ದಾರೆ. ಅರ್ಜುನ್​ ಜನ್ಯ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ಆಗಸ್ಟ್​ 15ರಂದು ಸಿನಿಮಾ ವಿಶ್ವಾದ್ಯಂತ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.