ETV Bharat / education-and-career

ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಸ್ಟ್ರಿಂಜರ್​​ ಹುದ್ದೆಗಳು; 29 ಜಿಲ್ಲೆಗಳಲ್ಲೂ ನೇಮಕಾತಿ - PRASAR BHARATI RECRUITMENT

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎರಡು ವರ್ಷದ ಅವಧಿಗೆ ಅರೆಕಾಲಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

prasar Bharati Recruitment notification for Stringers post in Karnataka
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : April 17, 2025 at 3:36 PM IST

1 Min Read

ಬೆಂಗಳೂರು: ದೂರದರ್ಶನದಲ್ಲಿ ಖಾಲಿ ಇರುವ ಸ್ಟ್ರಿಂಜರ್​ (ಅರೆಕಾಲಿಕ ವರದಿಗಾರ) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯದ 29 ಜಿಲ್ಲೆಗಳಿಂದಲೂ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಾರ ಭಾರತಿ ನಿಯಮಾವಳಿಯಂತೆ 2 ವರ್ಷದ ಅವಧಿಗೆ ನೇಮಕಾತಿ ಮಾಡಲಾಗುತ್ತದೆ.

ಗೌರವಧನ: ಸೂಚಿತ ಸ್ಥಳೀಯ ಸುದ್ದಿ ಪ್ರಸಾರಕ್ಕೆ 1,500, 2ನೇ ಸುದ್ದಿಗೆ 1,000 ಮತ್ತು ಹೊರ ಕೇಂದ್ರದ ಕವರೇಜ್​ಗೆ 1,800 ರೂ ನೀಡಲಾಗುತ್ತದೆ. ಬೆಂಗಳೂರು ಕೇಂದ್ರದಲ್ಲಿ ವರ್ಷಕ್ಕೆ 5 ಲಕ್ಷ ರೂ ಹಾಗೂ ಜಿಲ್ಲಾ ಕೇಂದ್ರದಲ್ಲಿ 4 ಲಕ್ಷ ರೂ. ಒಳಗೆ ಗೌರವಧನ ಮಿತಿ ಮೀರದಂತೆ ಪಾವತಿ ನಿಗದಿಸಲಾಗಿದೆ.

ಅರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕ್ಯಾಮೆರಾ ಮತ್ತು ಅಗತ್ಯ ತಂತ್ರಜ್ಞಾನವನ್ನು ಹೊಂದಿರಬೇಕು. ಎಚ್​ಡಿ/4ಕೆ/ಯುಎಚ್​ಡಿ/ಎನ್​ಎಕ್ಸ್​ ಫಾರ್ಮೆಟ್​​ ವಿಡಿಯೋ ಕ್ಯಾಮೆರಾ ಹೊಂದಿರುವ ಜೊತೆಗೆ ಸುದ್ದಿ ಕಳುಹಿಸಲು ಬೇಕಾದ ಎಲ್ಲಾ ಸೌಲಭ್ಯ ಹೊಂದಿರಬೇಕು.

ವಿದ್ಯಾರ್ಹತೆ: ಪತ್ರಿಕೋದ್ಯಮದ ಅನುಭವ ಹೊಂದಿರಬೇಕು. ಸುದ್ದಿ ನೀಡುವ ಜೊತೆಗೆ ಉತ್ತಮ ಕ್ಯಾಮರಾ ಕೌಶಲ್ಯ ಹೊಂದಿರಬೇಕು.

prasar Bharati Recruitment notification for Stringers post in Karnataka
ಅಧಿಸೂಚನೆ (ಪ್ರಸಾರ ಭಾರತಿ)

ಆಯ್ಕೆ: ಅಭ್ಯರ್ಥಿಗಳನ್ನು ಶಾರ್ಟ್​ ಲಿಸ್ಟ್​ ಮಾಡಿ, ಬಳಿಕ ಟೆಸ್ಟ್​​ ಕವರೇಜ್​ ನಡೆಸಲಾಗುವುದು. ಬಳಿಕ ಸಂದರ್ಶನ ಮಾಡಲಾಗುವುದು. ಇದರ ಜೊತೆಗೆ ಸಾಧನ ಮತ್ತು ದಾಖಲಾತಿ ಪರಿಶೀಲನೆ ಮಾಡಿ, ಅಂತಿಮ ಪಟ್ಟಿ ಹೊರಡಿಸಲಾಗುವುದು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಯಲ್ಲಿ ಯಾವ ಜಿಲ್ಲೆಗಳಿಗೆ ತಾವು ಹುದ್ದೆ ನಿರ್ವಹಣೆಗೆ ಇಚ್ಛಿಸುವುದಾಗಿ ಸ್ಪಷ್ಟವಾಗಿ ನಮೂದಿಸಬೇಕು.

ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಅಂತಿಮ ದಿನಾಂಕಕ್ಕೆ ಮುನ್ನ ಸಲ್ಲಿಸಬೇಕು. ನಿರ್ದೇಶಕರು, ಪ್ರಾದೇಶಿಯ ಸುದ್ದಿ ಘಟಕ, ದೂರದರ್ಶನ ಕೇಂದ್ರ, ಜೆ.ಸಿ.ನಗರ, ಬೆಂಗಳೂರು, 56006.

1,180 ರೂ ಡಿಡಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿರುವ ವಿಳಾಸಕ್ಕೆ ಪಾವತಿಸಿ, ಅರ್ಜಿ ಸಲ್ಲಿಸಬೇಕಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 16.

ಈ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ prasarbharati.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಬಿಎಂಆರ್​ಸಿಎಲ್​ನಲ್ಲಿ ಸಿವಿಲ್​ ಇಂಜಿನಿಯರಿಂಗ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

ಇದನ್ನೂ ಓದಿ: ಅಗ್ನಿವೀರ್​ ನೇಮಕಾತಿ: ರಾಜ್ಯದ ಈ ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.