ETV Bharat / education-and-career

ಜೆಇಇ - ನೀಟ್ ಬರೆದಿದ್ದು ಲಕ್ಷಾಂತರ ಅಭ್ಯರ್ಥಿಗಳು: ಆದರೆ ಅರ್ಹರಾಗುವುದು ಎಷ್ಟು ಮಂದಿ, ಎಷ್ಟು ಸೀಟುಗಳು ಲಭ್ಯ?; ಇಲ್ಲಿದೆ ಮಾಹಿತಿ! - NEET UG AND JEE EXAM

ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಬರೆದರೂ ಐಐಟಿಯಲ್ಲಿ ಕೇವಲ ಶೇ 1.20 ರಿಂದ ಶೇ 1.65 ರಷ್ಟು ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದುಕೊಳ್ಳುತ್ತಾರೆ.

know-why-only-few-get-iit-and-government-mbbs-seats-out-of-lakh-students-registered-for-exam
ಪ್ರಾತಿನಿಧಿಕ ಚಿತ್ರ (ETV Bharat)
author img

By ETV Bharat Karnataka Team

Published : May 23, 2025 at 1:44 PM IST

3 Min Read

ಕೋಟಾ, ರಾಜಸ್ಥಾನ: ದೇಶದ ಪ್ರಮುಖ ವೈದ್ಯಕೀಯ ಮತ್ತು ಎಂಜಿನಿಯರಿಂಗ್​ ಪರೀಕ್ಷೆಗಳಾದ ಐಐಟಿ ಜೆಇಇ ಮತ್ತು ನೀಟ್​ ಪರೀಕ್ಷೆ ಮುಗಿದಿದೆ. ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣದ ಆಸಕ್ತಿ ಹೊಂದಿರುವ ಲಕ್ಷಾಂತ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಫಲಿತಾಂಶಕ್ಕಾಗಿ ಲಕ್ಷಾಂತರ ಅಭ್ಯರ್ಥಿಗಳು ಕಾದು ಕುಳಿತಿದ್ದು, ತಾತ್ಕಾಲಿಕ ಕೀ ಉತ್ತರದ ಪಟ್ಟಿಯನ್ನು ಎದುರು ನೋಡುತ್ತಿದ್ದಾರೆ. ಆದರೆ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಕೆಲವೇ ಶೇಕಡಾ ಅಭ್ಯರ್ಥಿಗಳು ಮಾತ್ರ ಐಐಟಿ ಅಥವಾ ಸರ್ಕಾರಿ ಎಂಬಿಬಿಎಸ್ ಸೀಟುಗಳನ್ನು ಪಡೆಯುವಲ್ಲಿ ಸಫಲರಾಗುತ್ತಾರೆ.

ಈ ಪರೀಕ್ಷೆಗಳ ಕಳೆದ ಐದು ವರ್ಷಗಳ ಯಶಸ್ಸಿನ ಶೇಕಡಾವಾರು ಪ್ರಮಾಣವನ್ನು ಈಟಿವಿ ಭಾರತ್​​ ಅಂದಾಜಿಸಿದೆ. ಅದರ ಅನುಸಾರವಾಗಿ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗುವ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಕೇವಲ ಶೇ 1.20 ರಿಂದ ಶೇ 1.65 ರಷ್ಟು ಅಭ್ಯರ್ಥಿಗಳು ಮಾತ್ರ ಐಐಟಿ ಸೀಟುಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಬಹಿರಂಗಗೊಂಡಿದೆ.

ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG ಯಲ್ಲಿ ಕೂಡ ಲಕ್ಷಾಂತರ ಅಭ್ಯರ್ಥಿಗಳಲ್ಲಿ, ಕೇವಲ 5 ರಿಂದ 6ರಷ್ಟು ಅಭ್ಯರ್ಥಿಗಳು ಮಾತ್ರ ಸೀಟು ಪಡೆಯುತ್ತಾರೆ. ನಾವು ಸರ್ಕಾರಿ ಎಂಬಿಬಿಎಸ್ ಸೀಟುಗಳ ಅಂಕಿ ಅಂಶವು ಶೇ 2.50 ರಿಂದ 3.25ರಷ್ಟಿದೆ.

ತಜ್ಞರು ಹೇಳುವುದೇನು?: ಕಳೆದ 5 ವರ್ಷಗಳಲ್ಲಿ ನೀಟ್ ಯುಜಿ ಮೂಲಕ ಎಂಬಿಬಿಎಸ್ ಸೀಟುಗಳನ್ನು ಪಡೆಯುವ ಅಭ್ಯರ್ಥಿಗಳ ಪ್ರಮಾಣ ಸುಮಾರು ಶೇ 5.25 ರಷ್ಟಿದ್ದರೆ, ಸರ್ಕಾರಿ ಸೀಟುಗಳನ್ನು ಪಡೆಯುವ ಅಭ್ಯರ್ಥಿಗಳ ಪ್ರಮಾಣ ಶೇ 2.75 ರಷ್ಟಿದೆ ಎಂದು ಶಿಕ್ಷಣ ತಜ್ಞ ದೇವ್ ಶರ್ಮಾ ತಿಳಿಸಿದ್ದಾರೆ. ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರೂ ಕೆಲವೇ ಸಾವಿರ ಜನರು ಮಾತ್ರ ಸರ್ಕಾರಿ ಸೀಟುಗಳನ್ನು ಪಡೆಯುತ್ತಾರೆ.

2021ರಲ್ಲಿ ನೀಟ್​ ಪರೀಕ್ಷೆಯಲ್ಲಿ ಸೀಟ್​ ಪಡೆದವರ ಪ್ರಮಾಣ ಶೇ 6ರಷ್ಟು ಮಾತ್ರ: 2024 ರಲ್ಲಿ, ನೀಟ್ ಯುಜಿ ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿ ಶೇ 4.9 ರಷ್ಟು ಮಾತ್ರ ಎಂಬಿಬಿಎಸ್ ಸೀಟುಗಳನ್ನು ಪಡೆದಿದ್ದಾರೆ ಎಂದು ಎಂಬಿಬಿಎಸ್​ ಅಭ್ಯರ್ಥಿ ದೇವ್​ ಶರ್ಮಾ ತಿಳಿಸಿದ್ದಾರೆ. ಈ ಸಮಯದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಸಂಖ್ಯೆ 24.06ಲಕ್ಷ. ಇನ್ನು 2021ರಲ್ಲಿ 16.14ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಸರ್ಕಾರಿ ಸೀಟ್​ ಪಡೆದವರು 98145. ಈ ವರ್ಷ ಶೇಕಡಾ 6.08 ರಷ್ಟು ಅಭ್ಯರ್ಥಿಗಳು ಎಂಬಿಬಿಎಸ್ ಸೀಟುಗಳನ್ನು ಪಡೆದಿದ್ದಾರೆ ಎಂದರು.

2024ರಲ್ಲಿ ಐಐಟಿಯಲ್ಲಿ ಶೇ. 1.20 ರಷ್ಟು ಅಭ್ಯರ್ಥಿಗಳಿಗೆ ಸೀಟ್​: 2024ರ ಜೆಇಇ ಅಡ್ವಾನ್ಸ್ಡ್​​ನಲ್ಲಿ 1.20 ಅಭ್ಯರ್ಥಿಗಳು ಸೀಟ ಪಡೆದಿದ್ದು, ಈ ಬಾರಿ ಈ ಸಂಖ್ಯೆ ಇನ್ನು ಕಡಿಮೆಯಾಗಬಹುದು ಎಂದು ದೇವ್​ ಶರ್ಮಾ ತಿಳಿಸಿದ್ದಾರೆ. 2022 ರಲ್ಲಿ, 10.26 ಲಕ್ಷ ಅಭ್ಯರ್ಥಿಗಳು ಜೆಇಇ ಮುಖ್ಯ ಪರೀಕ್ಷೆಗೆ ನೋಂದಾಯಿಸಿದ್ದು, 2.50 ಲಕ್ಷ ಅಭ್ಯರ್ಥಿಗಳು ಅಡ್ವಾನ್ಸ್ಡ್ ಪರೀಕ್ಷೆಗೆ ಅರ್ಹತೆ ಪಡೆದಿದರು. ಈ ಪೈಕಿ 16,635 ಅಭ್ಯರ್ಥಿಗಳು ಐಐಟಿ ಸೀಟುಗಳನ್ನು ಪಡೆದರು. ಈ ವರ್ಷ ಜೆಇಇ ಮುಖ್ಯ ಪರೀಕ್ಷೆಯಿಂದ ಐಐಟಿ ಸೀಟುಗಳನ್ನು ತಲುಪಿದ ಅಭ್ಯರ್ಥಿಗಳ ಶೇಕಡಾವಾರು ಪ್ರಮಾಣ 1.62 ಆಗಿತ್ತು.

ಇದನ್ನೂ ಓದಿ: ನೀಟ್​ ಆಕಾಂಕ್ಷಿಗಳಿಗೆ ಶುಭ ಸುದ್ದಿ: ಈ ವರ್ಷದಿಂದ 1.2 ಲಕ್ಷ ಎಂಬಿಬಿಎಸ್​ ಸೀಟುಗಳು ಲಭ್ಯತೆ ಸಾಧ್ಯತೆ

55 ಲಕ್ಷ ಸರ್ಕಾರಿ ಎಂಬಿಬಿಎಸ್​ ಸೀಟು: ಈ ವರ್ಷ ಅಂದರೆ 2025ರಲ್ಲಿ ನೀಟ್​ ಯುಜಿಗೆ 23 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಕೇವಲ 1.20 ಲಕ್ಷ ಎಂಬಿಬಿಎಸ್​ ಸೀಟುಗಳಲ್ಲಿ ಮಾತ್ರ ಪ್ರವೇಶ ಪಡೆಯಲಿದ್ದಾರೆ. ಇದರಲ್ಲಿ 62 ಸಾವಿರ ಸರ್ಕಾರಿ ಸೀಟು. ಇನ್ನು ಉಳಿದವು ಮ್ಯಾನೇಜ್ಮೆಂಟ್​, ಎನ್​ಆರ್​ಐ ಕೋಟಾ ಆಗಿದ್ದು, ದುಬಾರಿ ಶುಲ್ಕವಿದೆ. ಉಳಿದ 58 ಸಾವಿರ ಸೀಟು ಮ್ಯಾನೇಜ್​ಮೆಂಟ್​ ಆಗಿದ್ದು, ಇಲ್ಲಿ ಶುಲ್ಕ 50 ಲಕ್ಷ ರೂ.ಗಳಿಂದ 1.25 ಕೋಟಿ ರೂ.ಗಳವರೆಗೆ ಇರುತ್ತದೆ.

18 ಸಾವಿರ ಐಐಟಿ ಸೀಟು: 2025ರಲ್ಲಿ ಜೆಇಇ ಪರೀಕ್ಷೆಗೆ 15,39,848 ನೋಂದಾಯಿಸಿಕೊಂಡಿದ್ದು, ಅರ್ಹತೆ ಪಡೆಯುವವರ ಸಂಖ್ಯೆ 2,50,236 ಎಂದು ಪರಿಗಣಿಸಲಾಗಿದೆ. ಈ ಪೈಕಿ ಸುಮಾರು 1.90 ಲಕ್ಷ ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್‌ಗೆ ನೋಂದಾಯಿಸಿಕೊಂಡಿದ್ದರು, ಅದರಲ್ಲಿ ಸುಮಾರು 1.85 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ ಸುಮಾರು 45 ರಿಂದ 50 ಸಾವಿರ ಅಭ್ಯರ್ಥಿಗಳನ್ನು ಕೌನ್ಸೆಲಿಂಗ್‌ಗೆ ಅರ್ಹರಾಗಿದ್ದಾರೆ. ಇವರು ದೇಶದ 23 ಐಐಟಿಗಳಲ್ಲಿ ಸುಮಾರು 18 ಸಾವಿರ ಸೀಟುಗಳಿಗೆ ಪ್ರವೇಶ ಪಡೆಯುತ್ತಾರೆ. ಈ ಬಾರಿ ಶೇ. 1.20 ರಷ್ಟು ಅಭ್ಯರ್ಥಿಗಳು ಯಶಸ್ವಿಯಾಗಲಿದ್ದಾರೆ.

ಇದನ್ನೂ ಓದಿ: ಒಂದೆಡೆ ನೀಟ್​ ಪರೀಕ್ಷೆ ಬರೆದ 73 ವರ್ಷದ ಅಜ್ಜಿ; ಮತ್ತೊಂದೆಡೆ, ಒಂದೇ ಕನಸಿನ ಬೆನ್ನೇರಿರುವ ತಾಯಿ-ಮಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.