ನವದೆಹಲಿ: ಅಮೆರಿಕದಲ್ಲಿ ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಎಲೋನ್ ಮಸ್ಕ್ ಭೇಟಿಯಾದ ಬೆನ್ನಲ್ಲೇ ಇದೀಗ ಭಾರತದ ಮಾರುಕಟ್ಟೆಗೆ ಟೆಸ್ಲಾ ದಾಪುಗಾಲಿಡಲು ಸಜ್ಜಾಗಿದೆ. ಇದರ ಪೂರ್ವಸಿದ್ಧತಾ ಹಂತವಾಗಿ ಭಾರತದಲ್ಲಿ ನೇಮಕಾತಿ ಆರಂಭಿಸಲು ಮುಂದಾಗಿದೆ.
ಇದರೊಂದಿಗೆ ಅಮೆರಿಕದ ದೈತ್ಯ ಎಲೆಕ್ಟ್ರಿಕಲ್ ಕಾರು ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊಂದಿರುವವರಿಗೆ ಟೆಸ್ಲಾ ಸುವರ್ಣಾವಕಾಶ ನೀಡಿದೆ. ಮುಂಬೈನಲ್ಲಿ ಹಲವು ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಒಟ್ಟು 13 ಸ್ಥಾನಗಳ ಭರ್ತಿಗೆ ಪ್ರಕಟಣೆ ಹೊರಡಿಸಿದೆ. ಅಷ್ಟೇ ಅಲ್ಲದೆ, ಈ ಕುರಿತು ಲಿಂಕ್ಡ್ಇನ್ನಲ್ಲಿಯೂ ಮಾಹಿತಿ ನೀಡಿದೆ.
It was an honor to meet https://t.co/WqELdGiurP
— Elon Musk (@elonmusk) February 14, 2025
ಈ ಹುದ್ದೆಗಳಿಗೆ ಟೆಸ್ಲಾ ನೇಮಕಾತಿ:
ವಾಹನ ಸೇವಾ ವರ್ಗದಲ್ಲಿ ಒಟ್ಟು 4 ಹುದ್ದೆಗಳಿವೆ: ಸರ್ವಿಸ್ ಅಡ್ವೈಸರ್, ಪಾರ್ಟ್ಸ್ ಅಡ್ವೈಸರ್, ಸರ್ವೀಸ್ ಟೆಕ್ನಿಷಿಯನ್ ಮತ್ತು ಸರ್ವೀಸ್ ಮ್ಯಾನೇಜರ್.
ಸೇಲ್ಸ್ ಮತ್ತು ಕಸ್ಟಮರ್ ಸಪೋರ್ಟ್- ಟೆಸ್ಲಾ ಅಡ್ವೈಸರ್, ಸ್ಟೋರ್ ಮ್ಯಾನೇಜರ್
ಬ್ಯುಸಿನೆಸ್ ಸಪೋರ್ಟ್- ಬ್ಯುಸಿನೆಸ್ ಆಪರೇಷನ್ಸ್ ಅನಾಲಿಸ್ಟ್, ಡೆಲಿವರಿ ಆಪರೇಷನ್ ಸ್ಪೆಷಲಿಸ್ಟ್, ಆರ್ಡರ್ ಆಪರೇಷನ್ ಸ್ಪೆಷಾಲಿಸ್ಟ್
ಸೇಲ್ಸ್ ಆ್ಯಂಡ್ ಕಸ್ಟಮರ್ ಸಪೋರ್ಟ್- ಕಸ್ಟಮರ್ ಸಪೋರ್ಟ್ ಸೂಪರ್ವೈಸರ್, ಕಸ್ಟಮರ್ ಸಪೋರ್ಟ್ ಸ್ಪೆಷಲಿಸ್ಟ್, ಇನ್ಸೈಡ್ ಸೇಲ್ಸ್ ಅಡ್ವೈಸರ್ ಮತ್ತು ಕನ್ಸೂಮರ್ ಎಂಗೇಜ್ಮೆಂಟ್ ಮ್ಯಾನೇಜರ್.
ಈ ಹುದ್ದೆಗಳಿಗೆ ಕಠಿಣ ಪರಿಶ್ರಮಿಗಳು, ಜಗತ್ತನ್ನು ಬದಲಾಯಿಸುವ ಅದಮ್ಯ ಉತ್ಸಾಹಿಗಳು, ದೈನಂದಿನ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲವರು, ಆದಾಯದ ಜೊತೆ ಖರೀದಿ ಆದೇಶದ ದೃಢೀಕರಣ ಕುರಿತು ಕಾರ್ಯನಿರ್ವಹಿಸುವರನ್ನು ಎದುರು ನೋಡುತ್ತಿರುವುದಾಗಿ ಟೆಸ್ಲಾ ಹೇಳಿದೆ.
ಭಾರತ ಸದ್ಯ 40,000 ಡಾಲರ್ಗಿಂತ ಹೆಚ್ಚಿನ ಬೆಲೆಯ ಹೈ ಎಂಡ್ ಕಾರುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ.110ರಿಂದ ಶೇ.70ರಷ್ಟು ಇಳಿಸಿರುವ ಹೊತ್ತಿನಲ್ಲಿ ಈ ನೇಮಕಾತಿ ಕುರಿತು ಟೆಸ್ಲಾ ಪ್ರಕಟಿಸಿದೆ. ಭಾರತದ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಟೆಸ್ಲಾ ಕಾರುಗಳನ್ನು ಅಭಿವೃದ್ಧಿಪಡಿಸುವ ಮಸ್ಕ್ ಯೋಚನೆಗೆ ಕಾಲ ಕೂಡಿ ಬಂದಿರುವುದನ್ನು ಈ ನೇಮಕಾತಿ ಸುಳಿವು ನೀಡಿದೆ.
ಭಾರತದ ಮಾರುಕಟ್ಟೆಗೆ ಟೆಸ್ಲಾ: ಭಾರತದಲ್ಲಿ ಟೆಸ್ಲಾ ಪ್ರವೇಶದ ಕುರಿತು ಮಾರುಕಟ್ಟೆಯಲ್ಲೂ ಕಾತುರತೆ ಇದೆ. ಕಳೆದ ಏಪ್ರಿಲ್ನಲ್ಲಿಯೇ ಏಲೋನ್ ಮಸ್ಕ್ ಈ ಕುರಿತು ಚರ್ಚೆಗೆ ಭಾರತಕ್ಕೆ ಆಗಮಿಸಬೇಕಿತ್ತು. ಆದರೆ, ಟೆಸ್ಲಾದ ಕೆಲವು ಕಾರ್ಯದ ಹಿನ್ನೆಲೆಯಲ್ಲಿ ಕಡೇಯ ಕ್ಷಣದಲ್ಲಿ ಭೇಟಿಯನ್ನು ಮುಂದೂಡಲಾಯಿತು. ಆದರೆ, ಮಸ್ಕ್ ಅವರು ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರಗಳು ಮಾರಾಟವನ್ನು ಎದುರು ನೋಡುತ್ತಿದ್ದು, ಅದರ ಯೋಜನೆಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದ್ದು ಭಾರೀ ನಿರೀಕ್ಷೆ ಮೂಡಿಸಿತ್ತು.
ಟೆಸ್ಲಾದಂತಹ ಪ್ರಮುಖ ಜಾಗತಿಕ ಆಟಗಾರರನ್ನು ಆಕರ್ಷಿಸುವ ಗುರಿಯೊಂದಿಗೆ ಹೊಸ ಎಲೆಕ್ಟ್ರಿಕ್ ವಾಹನ ಪಾಲಿಸಿ ಅಡಿಯಲ್ಲಿ ಆಮದು ಸುಂಕದ ರಿಯಾಯಿತಿಗಳನ್ನು ನೀಡಲಾಗುವುದು ಎಂದು ಭಾರತ ಸರ್ಕಾರ ಘೋಷಿಸಿದ್ದು, ಇದೀಗ ಅವರು ತಮ್ಮ ಭೇಟಿಗೆ ಯೋಜನೆ ರೂಪಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ: ಎಲೋನ್ ಮಸ್ಕ್ ಜತೆ ಮೋದಿ ಮಹತ್ವದ ಚರ್ಚೆ: ಭಾರತದಲ್ಲೂ ಸುಧಾರಣೆಗೆ ಮುಂದಾಗ್ತಾರಾ ಪ್ರಧಾನಿ
ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಸುನೀತಾ, ಬುಚ್: ಅವರಿಬ್ಬರನ್ನು ಆದಷ್ಟು ಬೇಗ ಕರೆತರುವಂತೆ ಮಸ್ಕ್ ಸಹಾಯ ಕೋರಿದ ಟ್ರಂಪ್