ETV Bharat / business

ಷೇರು ಮಾರುಕಟ್ಟೆಗೆ ಶುಭ ಶುಕ್ರವಾರ: ಸೆನ್ಸೆಕ್ಸ್​ 819 ಅಂಕ ಏರಿಕೆ, 24,367ಕ್ಕೆ ತಲುಪಿದ ನಿಫ್ಟಿ - Stock Market Updates

author img

By ETV Bharat Karnataka Team

Published : Aug 9, 2024, 5:43 PM IST

ಭಾರತದ ಷೇರು ಮಾರುಕಟ್ಟೆಗಳು ಶುಕ್ರವಾರದಂದು ಏರಿಕೆಯೊಂದಿಗೆ ಕೊನೆಗೊಂಡಿವೆ.

ಮುಂಬೈ ಷೇರು ಮಾರುಕಟ್ಟೆ
ಮುಂಬೈ ಷೇರು ಮಾರುಕಟ್ಟೆ (IANS)

ಮುಂಬೈ: ಭಾರತೀಯ ಈಕ್ವಿಟಿ ಮಾರುಕಟ್ಟೆಗಳು ಶುಕ್ರವಾರ ಏರಿಕೆಯೊಂದಿಗೆ ಕೊನೆಗೊಂಡಿವೆ. ಬಿಎಸ್ಇ ಸೆನ್ಸೆಕ್ಸ್ ಶುಕ್ರವಾರ 819.69 ಪಾಯಿಂಟ್ಸ್ ಅಥವಾ ಶೇಕಡಾ 1.04ರಷ್ಟು ಏರಿಕೆ ಕಂಡು 79,705.91ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 250.50 ಪಾಯಿಂಟ್ಸ್ ಅಥವಾ 1.04 ಶೇಕಡಾ ಏರಿಕೆ ಕಂಡು 24,367.50ಕ್ಕೆ ತಲುಪಿದೆ. ಎಲ್ಲಾ ಸೂಚ್ಯಂಕಗಳು ಇಂದು ಏರಿಕೆಯೊಂದಿಗೆ ಕೊನೆಗೊಂಡಿವೆ.

ಸೆನ್ಸೆಕ್ಸ್‌ನ 30 ಕಂಪನಿಗಳ ಪೈಕಿ ಬಹುತೇಕ ಎಲ್ಲ ಕಂಪನಿಗಳು ಶೇ 2.74ರಷ್ಟು ಏರಿಕೆ ಕಂಡಿವೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಸನ್ ಫಾರ್ಮಾಸ್ಯುಟಿಕಲ್ಸ್ ಮಾತ್ರ ಕ್ರಮವಾಗಿ ಶೇಕಡಾ 0.01 ಮತ್ತು ಶೇಕಡಾ 0.2ರಷ್ಟು ಕುಸಿದವು.

ಟೆಕ್ ಮಹೀಂದ್ರಾ ಶೇ 2.74, ಟಾಟಾ ಮೋಟಾರ್ಸ್ ಶೇ 2.51, ಮಹೀಂದ್ರಾ ಅಂಡ್ ಮಹೀಂದ್ರಾ ಶೇ 2.46, ಜೆಎಸ್ ಡಬ್ಲ್ಯೂ ಸ್ಟೀಲ್ ಶೇ 2.09 ಮತ್ತು ಎಚ್ ಸಿಎಲ್ ಟೆಕ್ನಾಲಜೀಸ್ ಶೇ 2.08ರಷ್ಟು ಏರಿಕೆ ಕಂಡಿವೆ. ಬಿಎಸ್ಇಯಲ್ಲಿ ಒಟ್ಟು 2,330 ಷೇರುಗಳು ಏರಿಕೆಯಾದರೆ, 1,579 ಷೇರುಗಳು ಕುಸಿದವು ಮತ್ತು 97 ಷೇರುಗಳು ಬದಲಾಗದೆ ಉಳಿದವು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಗುರುವಾರ 2,626.73 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಟೋಕಿಯೊ, ಸಿಯೋಲ್ ಮತ್ತು ಹಾಂಗ್ ಕಾಂಗ್ ಏರಿಕೆ ಕಂಡರೆ, ಶಾಂಘೈ ಇಳಿಕೆಯಲ್ಲಿ ವಹಿವಾಟು ನಡೆಸಿತು. ಯುರೋಪಿಯನ್ ಮಾರುಕಟ್ಟೆಗಳು ಇಳಿಕೆಯೊಂದಿಗೆ ವಹಿವಾಟು ನಡೆಸುತ್ತಿದ್ದವು. ಯುಎಸ್ ಮಾರುಕಟ್ಟೆಗಳು ಗುರುವಾರ ಗಮನಾರ್ಹವಾಗಿ ಏರಿಕೆ ಕಂಡವು.

ತೈಲ ಬೆಲೆ ಹೆಚ್ಚಳ: ಜಾಗತಿಕ ತೈಲ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.03ರಷ್ಟು ಏರಿಕೆಯಾಗಿ ಬ್ಯಾರೆಲ್​ಗೆ 79.18 ಡಾಲರ್‌ಗೆ ತಲುಪಿದೆ.

ರೂಪಾಯಿ 2 ಪೈಸೆ ಏರಿಕೆ: ದೇಶೀಯ ಮಾರುಕಟ್ಟೆಗಳಲ್ಲಿನ ಲಾಭದ ಬೆಂಬಲದೊಂದಿಗೆ ರೂಪಾಯಿ ಶುಕ್ರವಾರ ಯುಎಸ್ ಡಾಲರ್ ವಿರುದ್ಧ 2 ಪೈಸೆ ಏರಿಕೆಯಾಗಿ 83.95 ಕ್ಕೆ (ತಾತ್ಕಾಲಿಕ) ರಲ್ಲಿ ಕೊನೆಗೊಂಡಿದೆ. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿಯು 83.95 ರಲ್ಲಿ ಪ್ರಾರಂಭವಾಯಿತು ಮತ್ತು ವಹಿವಾಟಿನ ಒಂದು ಹಂತದಲ್ಲಿ ಡಾಲರ್ ವಿರುದ್ಧ 83.96 ರ ಕನಿಷ್ಠ ಮತ್ತು 83.88ರ ಗರಿಷ್ಠ ಮಟ್ಟವನ್ನು ಮುಟ್ಟಿತು. ಇದು ಅಂತಿಮವಾಗಿ ಅಮೇರಿಕನ್ ಕರೆನ್ಸಿಯ ವಿರುದ್ಧ 83.95 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 2 ಪೈಸೆ ಹೆಚ್ಚಾಗಿದೆ.

ಇದನ್ನೂ ಓದಿ: 2 ದಿನ ಅಲ್ಲ ಇನ್ಮುಂದೆ ಕೆಲವೇ ಗಂಟೆಗಳಲ್ಲಿ ಚೆಕ್ ಪಟಾಪಟ್ ಕ್ಲಿಯರೆನ್ಸ್​​​: ಆರ್​ಬಿಐ ಮಹತ್ವದ ಘೋಷಣೆ - CLEARING TIME FOR CHEQUES

ETV Bharat Logo

Copyright © 2024 Ushodaya Enterprises Pvt. Ltd., All Rights Reserved.