ಪೆರಂಬಲೂರ್: ತಮಿಳುನಾಡಿನ ಪೆರಂಬಲೂರಿನ ಮುತ್ತು ನಗರ್ನ ನಿವಾಸಿ ರಾಜನ್ ಗುರುರಾಜನ್ (50) ಪತ್ರಕರ್ತರಾಗಿದ್ದು, ಪೆರಂಬಲೂರ್ ಲಯನ್ಸ್ ಅಸೋಸಿಯೇಷನ್ನಲ್ಲಿ ಸಹಾಯಕರೂ ಆಗಿದ್ದಾರೆ. ಕಳೆದ ಜನವರಿ 26ರಂದು ಇವರು ಒಲಾ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ 1,34,270 ರೂ ಪಾವತಿ ಮಾಡಿ, ಒಂದು ಎಲೆಕ್ಟ್ರಿಕಲ್ ಸ್ಕೂಟರ್ ಬುಕ್ ಮಾಡಿದ್ದರು.
ಎರಡು ತಿಂಗಳ ಬಳಿಕ ಒಲಾದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಮನೆಗೆ ತಲುಪಿಸಲಾಗಿತ್ತು. ಈ ವೇಳೆ ಒಂದು ವರ್ಷ ಬಳಕೆಯಲ್ಲಿದ್ದ ಸ್ಕೂಟರ್‌ನಲ್ಲಿನ ಸಾಫ್ಟ್‌ವೇರ್ ಅನ್ನು ಜನವರಿ 2024 ರಲ್ಲಿ ಓಲಾ ಆವೃತ್ತಿ 4.0 ಗೆ ನವೀಕರಿಸಿ ನೀಡಿತ್ತು. ಇದಾದ ಬಳಿಕ ರಾಜನ್ ಗುರುರಾಜ್ ಅವರ ಇ ಸ್ಕೂಟರ್ನಲ್ಲಿ ಬ್ಯಾಟರಿ ಸಮಸ್ಯೆ ಕಂಡು ಬಂದಿದ್ದು, ಅದನ್ನು ಚಾಲನೆ ಮಾಡಲು ಕೂಡಾ ಸಾಧ್ಯವಾಗಿರಲಿಲ್ಲ.
ಸ್ಕೂಟರ್ನ ಕೆಟ್ಟ ಕಾರ್ಯಾಚರಣೆಯಿಂದಾಗಿ ಅವರು ಸ್ಕೂಟರ್ ದುರಸ್ತಿ ಮಾಡುವಂತೆ ಓಲಾ ತಿರುಚ್ಚಿ ಎಕ್ಸಿಪಿರಿಯನ್ಸ್ ಸೆಂಟರ್ಗೆ ದೂರು ನೀಡಿದ್ದರು. ಅಲ್ಲದೇ ವಾಟ್ಸ್ಆ್ಯಪ್ ಮತ್ತು ಇಮೇಲ್ ಮೂಲಕ ಕೃಷ್ಣಗಿರಿ ಓಲಾ ಮುಖ್ಯ ಕಚೇರಿ ಅವರನ್ನು ಸಂಪರ್ಕಸಿ, ದುರಸ್ತಿ ಮಾಡುವಂತೆ ತಿಳಿಸಿದರು.
ದೂರು ಸಲ್ಲಿಸಿದ 15 ದಿನದ ಬಳಿಕ, ಟೆಕ್ನಿಷಿಯನ್ ಸಿಬ್ಬಂದಿಯೊಬ್ಬರು ಆಗಮಿಸಿ, ಸ್ಕೂಟರ್ನ ಸ್ಥಿತಿಗತಿ ಪರಿಶೀಲನೆ ನಡೆಸಿದರು. ಈ ವೇಳೆ, ಬ್ಯಾಟರಿ ಹಾನಿಯಾಗಿರುವುದು ಪತ್ತೆ ಮಾಡಿ, ಎರಡು ವಾರದಲ್ಲಿ ಸರಿಪಡಿಸುವುದಾಗಿ ಹೇಳಿ ತೆರಳಿದ್ದಾರೆ. ಆದರೆ, ಎರಡು ವಾರ ಕಳೆದರೂ ಓಲಾ ಸಮಸ್ಯೆ ನಿವಾರಣೆ ಮಾಡಿಲ್ಲ. ಜೊತೆಗೆ ಖರೀದಿಸಿದ ಇ ಸ್ಕೂಟರ್ 45 ದಿನಕ್ಕಿಂತ ಹೆಚ್ಚು ದಿನ ಕಾರ್ಯಾಚರಣೆಗೆ ಬರಲಿಲ್ಲ.
ಇದರಿಂದ ಬೇಸತ್ತ ಅವರು, ಓಲಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ತಿರುಚ್ಚಿಯ ಓಲಾ ಎಕ್ಸಿಪಿರಿಯನ್ಸ್ ಸೆಂಟರ್ನ ಮುಖ್ಯಸ್ಥರ ಮೇಲೆ ದೂರು ದಾಖಲಿಸಿದ್ದಾರೆ. ರಾಜನ್ ಪರ ಫೆ 15ರಂದು ಪೆರಂಬಲೂರ್ ಜಿಲ್ಲಾ ಗ್ರಾಹಕರ ಕುಂದುಕೊರತೆ ಪರಿಹಾರ ಆಯೋಗದಲ್ಲಿ ವಕೀಲ ಶ್ರೀನಿವಾಸಮೂರ್ತಿ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಓಲಾ ಕಂಪನಿಯು ಅರ್ಜಿದಾರರ ಹಾನಿಗೊಳಗಾದ ಎಲೆಕ್ಟ್ರಿಕ್ ವಾಹನದ ಬ್ಯಾಟರಿಯನ್ನು 44 ದಿನಗಳ ನಂತರ ಹೊಸದಕ್ಕೆ ಬದಲಾಯಿಸಿದೆ.
ಇದೇ ವೇಳೆ, ಪೆರಂಬಲೂರ್ ಜಿಲ್ಲಾ ಗ್ರಾಹಕರ ಕುಂದುಕೊರತೆ ಪರಿಹಾರ ಆಯೋಗದ ನ್ಯಾಯಧೀಶರಾದ ಜವಾಹರ್ ಮತ್ತು ಅವರ ಸದಸ್ಯ ತಿಲಕ್ ಮತ್ತು ಮುತ್ತು ಕುಮಾರನ್, ಪ್ರಕರಣ ಆಲಿಸಿ, 60 ಸಾವಿರ ರೂ ಪರಿಹಾರ, 10 ಸಾವಿರ ವ್ಯಾಜ್ಯದ ಖರ್ಚನ್ನು ನೀಡುವಂತೆ ತೀರ್ಪು ನೀಡಿದೆ.
ಇದನ್ನೂ ಓದಿ: ಭಾರಿ ದುರಂತ: ಪ್ರಯಾಣಿಕ ವಿಮಾನ ಪತನ, ಎಲ್ಲ 61 ಮಂದಿ ಸಾವು