ETV Bharat / business

ಆಗಸ್ಟ್ 6 ರಿಂದ ಆರ್​ಬಿಐ ಎಂಪಿಸಿ ಸಭೆ: ಬಡ್ಡಿದರ ಶೇ 6.5ರಲ್ಲಿಯೇ ಮುಂದುವರಿಕೆ ಸಾಧ್ಯತೆ - RBI Interest Rate

author img

By PTI

Published : Aug 4, 2024, 4:18 PM IST

ಈ ಬಾರಿಯ ಎಂಪಿಸಿ ಸಭೆ ಆಗಸ್ಟ್​ 6 ರಿಂದ 8ರವರೆಗೆ ನಡೆಯಲಿದ್ದು, ಆರ್​ಬಿಐ ರೆಪೊ ದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಆರ್​ಬಿಐ
ಆರ್​ಬಿಐ (IANS)

ಮುಂಬೈ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಗುರುವಾರದಂದು ತನ್ನ ಪ್ರಮುಖ ಬಡ್ಡಿದರವನ್ನು ಶೇಕಡಾ 6.5ರಲ್ಲಿಯೇ ಮುಂದುವರಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಬಡ್ಡಿದರ ಹೆಚ್ಚಳದ ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ಆರ್​ಬಿಐ ಮತ್ತಷ್ಟು ಸ್ಥೂಲ ಆರ್ಥಿಕ ದತ್ತಾಂಶಕ್ಕಾಗಿ ಕಾಯುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸ್ತುತ ಯುಎಸ್ ಫೆಡರಲ್ ರಿಸರ್ವ್ ಕೂಡ ಸದ್ಯಕ್ಕೆ ತನ್ನ ಬಡ್ಡಿದರದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ನಿರ್ಧರಿಸಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ವಿತ್ತೀಯ ನೀತಿಯನ್ನು ಇನ್ನಷ್ಟು ಸರಳಗೊಳಿಸಬಹುದು ಎಂಬ ಮಾಹಿತಿಗಳು ಲಭ್ಯವಾಗಿವೆ.

ನಿರಂತರ ಹಣದುಬ್ಬರದ ಒತ್ತಡಗಳ ಮಧ್ಯೆ, ಫೆಬ್ರವರಿ 2023 ರಿಂದ ಬದಲಾಗದೆ ಉಳಿದಿರುವ ಬಡ್ಡಿದರಗಳನ್ನು ಬದಲಾಯಿಸುವ ಮೊದಲು ಆರ್​ಬಿಐ ಯುಎಸ್ ಹಣಕಾಸು ನೀತಿಯ ಪಥವನ್ನು ಸೂಕ್ಷ್ಮವಾಗಿ ಗಮನಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ 6.5 ರಷ್ಟು (ರೆಪೊ ದರ) ಹೆಚ್ಚಿನ ಬಡ್ಡಿದರವಿದ್ದರೂ ಆರ್ಥಿಕ ಬೆಳವಣಿಗೆಯು ಹೆಚ್ಚುತ್ತಿರುವುದರಿಂದ ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ಬಡ್ಡಿದರ ಕಡಿತಕ್ಕೆ ಮುಂದಾಗದಿರಬಹುದು.

ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಎಂಪಿಸಿ ಸಭೆ ಆಗಸ್ಟ್ 6 ರಿಂದ 8 ರವರೆಗೆ ನಡೆಯಲಿದೆ. ದರ ನಿಗದಿ ಸಮಿತಿಯ ನಿರ್ಧಾರವನ್ನು ದಾಸ್ ಆಗಸ್ಟ್ 8 ರಂದು (ಗುರುವಾರ) ಪ್ರಕಟಿಸಲಿದ್ದಾರೆ.

ಆರ್​ಬಿಐ ಈ ಹಿಂದೆ ಕೊನೆಯ ಬಾರಿಗೆ ಫೆಬ್ರವರಿ 2023 ರಲ್ಲಿ ರೆಪೊ ದರವನ್ನು ಶೇಕಡಾ 6.5 ಕ್ಕೆ ಹೆಚ್ಚಿಸಿತ್ತು. ಅಂದಿನಿಂದ ಈ ಹಿಂದೆ ನಡೆದ ಎಲ್ಲಾ ಏಳು ದ್ವೈಮಾಸಿಕ ಹಣಕಾಸು ನೀತಿ ಸಭೆಗಳಲ್ಲಿ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದೆ.

"ಮುಂಬರುವ ಸಾಲ ನೀತಿಯಲ್ಲಿ ಆರ್​ಬಿಐ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಹಣದುಬ್ಬರವು ಇಂದಿಗೂ ಶೇಕಡಾ 5.1 ರಷ್ಟಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಇದು ಸಂಖ್ಯಾತ್ಮಕವಾಗಿ ಕಡಿಮೆಯಾಗಲಿದೆ" ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಹೇಳಿದ್ದಾರೆ.

ಆರ್ಥಿಕ ಬೆಳವಣಿಗೆಯ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಹಣದುಬ್ಬರದ ಗುರಿಯನ್ನು ಶೇಕಡಾ 4 ರ ಮಟ್ಟದಲ್ಲಿರಿಸಲು ನೀತಿ ರೆಪೊ ದರ ನಿರ್ಧರಿಸುವ ಜವಾಬ್ದಾರಿಯನ್ನು ಎಂಪಿಸಿಗೆ ವಹಿಸಲಾಗಿದೆ. ಈ ಸಮಿತಿಯು ಆರ್​ಬಿಐನ ಮೂವರು ಬಾಹ್ಯ ಸದಸ್ಯರು ಮತ್ತು ಮೂವರು ಅಧಿಕಾರಿಗಳನ್ನು ಒಳಗೊಂಡಿದೆ. ಶಶಾಂಕ ಭಿಡೆ, ಅಶಿಮಾ ಗೋಯಲ್ ಮತ್ತು ಜಯಂತ್ ಆರ್ ವರ್ಮಾ ಇವರು ಎಂಪಿಸಿಯ ಬಾಹ್ಯ ಸದಸ್ಯರಾಗಿದ್ದಾರೆ.

ಇದನ್ನೂ ಓದಿ : ಸ್ಮಾರ್ಟ್​ಫೋನ್​ ಮಾರಾಟ ಶೇ 8ರಷ್ಟು ಹೆಚ್ಚಳ: ಅಗ್ರಸ್ಥಾನದಲ್ಲಿ ಸ್ಯಾಮ್​ಸಂಗ್​ - Global Smartphone Market

ETV Bharat Logo

Copyright © 2024 Ushodaya Enterprises Pvt. Ltd., All Rights Reserved.