ETV Bharat / business

ಸಾಲಗಾರರಿಗೆ ಗುಡ್​ ನ್ಯೂಸ್​, ಬಡ್ಡಿ ದರದಲ್ಲಿಲ್ಲ ಯಾವುದೇ ಬದಲಾವಣೆ: ರೆಪೋ ರೇಟ್​​​​​​ ಏರಿಕೆ ಮಾಡದಿರಲು RBI ನಿರ್ಧಾರ - REPO RATE UNCHANGED

author img

By ETV Bharat Karnataka Team

Published : Aug 8, 2024, 11:16 AM IST

Updated : Aug 8, 2024, 11:58 AM IST

ಬಡ್ಡಿದರದಲ್ಲಿ ಈ ಬಾರಿಯೂ ಆರ್​ಬಿಐ ಯಾವುದೇ ಬದಲಾವಣೆ ಮಾಡಿಲ್ಲ. ಆರ್ಥಿಕ ದೃಷ್ಟಿಕೋನದ ವಿವರವಾದ ಮೌಲ್ಯಮಾಪನದ ನಂತರ, ನಾಲ್ವರು ಸದಸ್ಯರು ರೆಪೋ ದರವನ್ನು ಶೇಕಡಾ 6.5ರ ಮಟ್ಟದಲ್ಲೇ ಇರಿಸಲು ನಿರ್ಧರಿಸಿದ್ದರಿಂದಾಗಿ ಆರ್​ಬಿಐ ಈ ನಿರ್ಧಾರ ಕೈಗೊಂಡಿದೆ.

RBI Keeps Benchmark Interest Rate Unchanged at 6.5 per cent for 9th Time in a Row
ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರ್​ಬಿಐ ನಿರ್ಧಾರ: ಗೃಹ ಸಾಲದ ಬಡ್ಡಿಯಲ್ಲಿ ಆಗಲ್ಲ ಏರಿಕೆ (ANI)

ಮುಂಬೈ: ಭಾರತೀಯ ರಿಸರ್ವ್​ ಬ್ಯಾಂಕ್​ ಸತತ 9ನೇ ಬಾರಿಯೂ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದೆ ಇರುವಂತೆ ಶೇಕಡಾ 6.5ರಲ್ಲೇ ಮುಂದುವರಿಸಿದೆ. ತನ್ನ ಆರ್ಥಿಕ ನೀತಿಗಳ ಸಭೆ ಬಳಿಕ ಇಂದು ಸುದ್ದಿಗೋಷ್ಠಿ ನಡೆಸಿದ ಆರ್​ಬಿಐ ಗವರ್ನರ್​​ ಶಕ್ತಿಕಾಂತ್​ ದಾಸ್​, ಬಡ್ಡಿದರವನ್ನು ಯಥಾಸ್ಥಿತಿಯಲ್ಲೇ ಮುಂದುವರೆಸುವುದಾಗಿ ಘೋಷಿಸಿದ್ದಾರೆ.

ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ನಡುವೆ ಆರ್​ಬಿಐ ತನ್ನ ಎಚ್ಚರಿಕೆ ಹೆಜ್ಜೆಯನ್ನು ಮುಂದುವರೆಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಶೇಕಡಾ 6.5 ಕ್ಕೆ ಬದಲಾಯಿಸದೆ ಇರಿಸಲು ತೀರ್ಮಾನಿಸಿದೆ. ವಿಕಸಿಸುತ್ತಿರುವ ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಮತ್ತು ಒಟ್ಟಾರೆ ಆರ್ಥಿಕ ದೃಷ್ಟಿಕೋನದ ವಿವರವಾದ ಮೌಲ್ಯಮಾಪನದ ನಂತರ, ನಾಲ್ವರು ಸದಸ್ಯರು ರೆಪೋ ದರವನ್ನು ಶೇಕಡಾ 6.5ರ ಮಟ್ಟದಲ್ಲೇ ಇರಿಸಲು ನಿರ್ಧರಿಸಿದ್ದರಿಂದಾಗಿ ಆರ್​ಬಿಐ ಈ ನಿಲುವಿಗೆ ಬಂದಿದೆ.

"ಸ್ಥಾಯಿ ಠೇವಣಿ ಸೌಲಭ್ಯದ ದರವು ಶೇ 6.25, ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ದರ ಹಾಗೂ ಬ್ಯಾಂಕ್ ದರವನ್ನು ಶೇ 6.75ರಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ದಾಸ್​ ಇದೇ ವೇಳೆ ಪ್ರಕಟಿಸಿದರು. ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಡುವ ದೃಷ್ಟಿಕೋನದಿಂದ ರೆಪೋ ದರವನ್ನು ಸ್ಥಿರವಾಗಿಡುವ ನಿರ್ಧಾರಕ್ಕೆ ಬರಲಾಗಿದೆ. ಆಹಾರ ಹಣದುಬ್ಬರ ಮತ್ತು ಇತರ ಆರ್ಥಿಕ ಅಂಶಗಳಿಂದಾಗಿ ಹಣದುಬ್ಬರವನ್ನು ಶೇಕಡಾ 4ರೊಳಗೆ ತರುವ ಗುರಿಯ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ ತನ್ನ ಗುರಿ ತಲುಪಲು ಕೇಂದ್ರೀಯ ಬ್ಯಾಂಕ್‌ ಸವಾಲುಗಳನ್ನು ಎದುರಿಸುತ್ತಿದೆ.

ಹಣದುಬ್ಬರದ ಒತ್ತಡಗಳನ್ನು ನಿಭಾಯಿಸಬೇಕಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದು ಆರ್‌ಬಿಐಗೆ ಅನಿವಾರ್ಯವಾಗಿದ್ದು, ಜಾಗರೂಕ ಹೆಜ್ಜೆ ಇಡಬೇಕಾಗಿದೆ. ದೇಶದ ಆರ್ಥಿಕ ಚೇತರಿಕೆ ಹಾಗೂ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಆರ್​ಬಿಐ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಗವರ್ನರ್ ದಾಸ್ ಒತ್ತಿ ಹೇಳಿದರು. ಎಂಪಿಸಿಯ ನಿರ್ಧಾರವು ಸಮತೋಲಿತವಾಗಿದ್ದು, ಈಗಿನ ಬೆಳವಣಿಗೆ ದರವನ್ನು ಕುಂಠಿತಗೊಳಿಸದೇ ಹಣದುಬ್ಬರವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ಆರ್ಥಿಕತೆ ಬೆಳವಣಿಗೆ ಹೊಂದುತ್ತಿದೆ ಎಂದು ಸಂತೃಪ್ತಿಯಿಂದ ಇರಲು ಯಾವುದೇ ಅವಕಾಶ ನೀಡಬಾರದು ಎಂದು ಎಚ್ಚರಿಸಿರುವ ಗವರ್ನರ್​, ಕೋರ್ ಹಣದುಬ್ಬರವು ಗಣನೀಯವಾಗಿ ಕುಸಿದಿದೆ. ಆದರೆ ನಿರಂತರ ಆಹಾರ ಬೆಲೆ ಏರಿಕೆಗಳು ಮೊದಲ ತ್ರೈಮಾಸಿಕದಲ್ಲಿ ಹಣದುಬ್ಬರವನ್ನು ನಿಧಾನಗೊಳಿಸಿವೆ ಎಂದು ಹೇಳಿದ್ದಾರೆ. ಮೂರು ದಿನಗಳ ಹಣಕಾಸು ನೀತಿ ಸಮಿತಿ ಎಂಪಿಸಿ ಸಭೆಯ ಮುಕ್ತಾಯದ ನಂತರ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು.

ಇದನ್ನು ಓದಿ: ಕ್ಯಾಶ್​ ಆನ್ ಡೆಲಿವರಿಗೆ ಚಿಲ್ಲರೆ ಸಮಸ್ಯೆಯೇ? ಜೊಮ್ಯಾಟೊ ತಂದಿದೆ ಹೊಸ ಪರಿಹಾರ! - Zomato Money

Last Updated : Aug 8, 2024, 11:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.