ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದ ಭಾರತದಲ್ಲಿ ಕಚ್ಚಾ ತೈಲದಲ್ಲಿ ಏರಿಕೆಯಾಗಿದೆ. ಜುಲೈ ತಿಂಗಳಿನಲ್ಲಿ, ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್(MCX) ನಲ್ಲಿ ಕಚ್ಚಾ ತೈಲ 57 ರೂಪಾಯಿ ಅಥವಾ 0.99% ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 5,788 ರೂಪಾಯಿಗೆ ತಲುಪಿದೆ.
ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಕುಸಿತ: ಭಾರತದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದರೂ, ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಸ್ವಲ್ಪ ಕುಸಿದಿದೆ. ನ್ಯೂಯಾರ್ಕ್ ಎಕ್ಸ್ಚೇಂಜ್ನಲ್ಲಿ ವೆಸ್ಟ್ ಟೆಕ್ಸಾಸ್ ಇಂಟರ್ ಮಿಡಿಯೇಟ್ (ಡಬ್ಲ್ಯೂಟಿಐ) ಕಚ್ಚಾ ತೈಲ ಬೆಲೆ 0.70ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 67.67 ಡಾಲರ್ಗೆ ಮತ್ತು ಬ್ರೆಂಟ್ ಕಚ್ಚಾ ತೈಲ ಬೆಲೆ 0.77 ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 69.23 ಡಾಲರ್ಗೆ ತಲುಪಿದೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಗಳು ಮತ್ತು ಅಮೆರಿಕ, ಚೀನಾದಲ್ಲಿನ ಮಿಶ್ರ ಆರ್ಥಿಕ ಸಂಕೇತಗಳಿಂದಾಗಿ ಜಾಗತಿಕ ಕಚ್ಚಾ ತೈಲದ ಕುಸಿತಕ್ಕೆ ಕಾರಣವಾಗಿದೆ.
ಇಂಧನ ಕ್ಷೇತ್ರದ ತಜ್ಞ ಡಾ. ಸುಧೀರ್ ಬಿಷ್ತ್ ಅವರು ಈಟಿವಿ ಭಾರತ್ ಜೊತೆ ಮಾತನಾಡಿ, ಭಾರತವು ಹೆಚ್ಚಿನ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ, ಜಾಗತಿಕ ಕಚ್ಚಾ ತೈಲ ಬೆಲೆಗಳಿಂದ ಭಿನ್ನವಾಗಿರಲು ಸಾಧ್ಯವಿಲ್ಲ. ನಿನ್ನೆ ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯು ಖಂಡಿತವಾಗಿಯೂ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಸೃಷ್ಟಿಸಲಿದೆ ಮತ್ತು ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಿಸುತ್ತದೆ ಎಂದರು.
ಪೆಟ್ರೋಲ್. ಡೀಸೆಲ್ ಬೆಲೆಗಳನ್ನು ಮಾರುಕಟ್ಟೆ ಶಕ್ತಿಗಳಿಂದ ನಿಯಂತ್ರಿಸಲ್ಪಟ್ಟಿದ್ದರೆ HPCL, BPCL ಮತ್ತು ಇಂಡಿಯನ್ ಆಯಿಲ್ ಇಂಧನ ಬೆಲೆ ಏರಿಕೆ ಮಾಡುತ್ತಿದ್ದವು. ಆದರೆ, ಅದು ಆಗಲ್ಲ. ಬಿಹಾರ ಚುನಾವಣೆಗಳು ಬರಲಿದೆ, ಆದ್ದರಿಂದ OMCಗಳು ಹೆಚ್ಚಿದ ಕಚ್ಚಾ ತೈಲ ವೆಚ್ಚದ ಹೊರೆ ಭರಿಸಬೇಕಾಗುತ್ತದೆ. ಇದು ಲಾಭದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಜೂನ್ 2022 ರಲ್ಲಿ, ಭಾರತೀಯ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 121.28 ಡಾಲರ್ ಇತ್ತು. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸುಮಾರು 96.72 ಲೀಟರ್ಗೆ ರೂ ಮತ್ತು USD-INR 78 ರಷ್ಟಿತ್ತು. ಇಂದು, ಕಚ್ಚಾ ತೈಲ ಬ್ಯಾರಲ್‌ಗೆ 67.44 ಡಾಲರ್ಗೆ ಇಳಿದಿದೆ. ಆದರೆ, ರೂಪಾಯಿ 85.66ಕ್ಕೆ ದುರ್ಬಲವಾಗಿದೆ ಎಂದರು.
ಇರಾನ್‌ನ ಕಚ್ಚಾ ತೈಲ ಉತ್ಪಾದನೆಯು ಜಾಗತಿಕ ತೈಲ ಪೂರೈಕೆಯ ಸರಿಸುಮಾರು 3.3% ರಷ್ಟಿದೆ. ಇದು ದಿನಕ್ಕೆ ಸುಮಾರು 3.4 ಮಿಲಿಯನ್ ಬ್ಯಾರೆಲ್‌ಗಳಿಗೆ (bpd) ಸಮನಾಗಿರುತ್ತದೆ. ಇರಾನ್ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ನಾಲ್ಕನೇ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದೆ. ಇರಾನ್ ಮೇಲಿನ ಐಡಿಎಫ್ ದಾಳಿಯಿಂದ ಬ್ರೆಂಟ್ ತೈಲ ಬ್ಯಾರೆಲ್‌ಗೆ 78 ಡಾಲರ್ ದಾಟಿಸಿದೆ. ಕಚ್ಚಾ ತೈಲ ಬೆಲೆಗಳು ಏರುತ್ತಿರುವುದು ಕಚ್ಚಾ ತೈಲದ ನಿವ್ವಳ ಆಮದುದಾರ ರಾಷ್ಟ್ರಗಳ ಮೇಲೆ ಹಣದುಬ್ಬರದ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಕಚ್ಚಾ ತೈಲದ ನಿವ್ವಳ ಆಮದುದಾರರಾಗಿರುವ ದೇಶಗಳಿಗೆ, ಕಚ್ಚಾ ತೈಲದ ಏರಿಕೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕರೆನ್ಸಿಯ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಟೆಹ್ರಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ; ಇರಾನ್ ಸೇನಾ ಮುಖ್ಯಸ್ಥ ಸಾವು
ಇದನ್ನೂ ಓದಿ: ಮಧ್ಯಪ್ರಾಚ್ಯ ಅಪಾಯಕಾರಿ ಎಂದು ಸಿಬ್ಬಂದಿ ಸ್ಥಳಾಂತರಕ್ಕೆ ಮುಂದಾದ ಟ್ರಂಪ್