ಮುಂಬೈ: 2025ರ ಜುಲೈ 9ರವರೆಗೆ 90 ದಿನಗಳ ಕಾಲ ಭಾರತದ ಮೇಲೆ ಹೆಚ್ಚುವರಿ ಸುಂಕಗಳನ್ನು ಸ್ಥಗಿತಗೊಳಿಸುವುದಾಗಿ ಯುಎಸ್ ಘೋಷಿಸಿದ ಬೆನ್ನಲ್ಲೇ ಶುಕ್ರವಾರದ ಆರಂಭಿಕ ಮುಂಬೈ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಏರಿಕೆ ಕಂಡಿವೆ.
ಆರಂಭಿಕ ವಹಿವಾಟಿನಲ್ಲಿ 30-ಷೇರುಗಳ ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 1,210.68 ಪಾಯಿಂಟ್‌ಗಳ ಜಿಗಿತ ಕಂಡು 75,057.83ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 388.35 ಪಾಯಿಂಟ್‌ಗಳ ಜಿಗಿತ ಕಂಡು 22,787.50ಕ್ಕೆ ಏರಿಕೆ ಆಗಿದೆ.
ಇದರಿಂದ, ಟಾಟಾ ಮೋಟಾರ್ಸ್, ಸನ್ ಫಾರ್ಮಾ, ಟಾಟಾ ಸ್ಟೀಲ್, ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರಾ, ಬಜಾಜ್ ಫಿನ್‌ಸರ್ವ್, ಅದಾನಿ ಪೋರ್ಟ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅತಿ ಹೆಚ್ಚು ಲಾಭದಲ್ಲಿವೆ. ಏಷ್ಯನ್ ಪೇಂಟ್ಸ್ ಮತ್ತು ನೆಸ್ಲೆ ಮಾತ್ರ ನಷ್ಟ ಅನುಭವಿಸಿವೆ.
ಅಲ್ಲದೆ, ದೇಶೀಯ ಷೇರು ಮಾರುಕಟ್ಟೆಗಳಲ್ಲಿ ಉತ್ತಮ ಆರಂಭಿಕ ವಹಿವಾಟು ಹಾಗೂ ತೈಲ ಬೆಲೆಗಳ ಕುಸಿತದ ನಡುವೆ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು 51 ಪೈಸೆಗಳಷ್ಟು ಏರಿಕೆಯಾಗಿ 86.17ಕ್ಕೆ ತಲುಪಿತ್ತು.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜುಲೈ 9ರವರೆಗೆ (90 ದಿನಗಳವರೆಗೆ) ಭಾರತದ ಮೇಲಿನ ಶೇಕಡಾ 26ರಷ್ಟು ಹೆಚ್ಚುವರಿ ಸುಂಕಗಳನ್ನು ರದ್ದು ಮಾಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ಕಂಡುಬಂದಿದೆ. ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ದೇಶೀಯ ಮಾರುಕಟ್ಟೆಯು US ಡಾಲರ್‌ಗೆ ಪ್ರತಿಯಾಗಿ 86.22 ರೂ.ಗಳೊಂದಿಗೆ ಪ್ರಾರಂಭವಾಯಿತು. ಈ ಹಿಂದಿನ ಅವಧಿಗಿಂತ 46 ಪೈಸೆಯಷ್ಟು ಏರಿಕೆಯೊಂದಿಗೆ 86.17 ಕ್ಕೆ ತಲುಪಿತು. ಬುಧವಾರ ಡಾಲರ್ ಎದುರುವ ರೂಪಾಯಿ ಮೌಲ್ಯ 86.68ರಷ್ಟಕ್ಕೆ ತಲುಪಿತ್ತು. ಮಹಾವೀರ ಜಯಂತಿ ನಿಮಿತ್ತ ಗುರುವಾರ ಇಕ್ವಿಟಿ, ಫಾರೆಕ್ಸ್, ಕಮಾಡಿಟಿ ಮಾರುಕಟ್ಟೆಗಳು ಬಂದ್ ಆಗಿದ್ದವು.
"ಡಾಲರ್ ಎದುರು ರೂಪಾಯಿ ಮೌಲ್ಯವು ಸೆಪ್ಟೆಂಬರ್ನ ಕನಿಷ್ಠ 100.20 ಕ್ಕಿಂತ ಕೆಳಮಟ್ಟದಿಂದ 86ಕ್ಕೆ ಏರಿಕೆ ಆಗುವ ನಿರೀಕ್ಷೆಯಿದೆ. ಇದರಿಂದಾಗಿ ರಫ್ತುದಾರರಿಗೆ ತಮ್ಮ ರಫ್ತು ಹಿಡುವಳಿಗಳನ್ನು ಸರಿದೂಗಿಸಲು ಅವಕಾಶ ಸಿಕ್ಕಂತಾಗಿದೆ'' ಎಂದು ಎಫ್‌ವಿಸ್ ಟ್ರೆಶರೀಸ್‌ನ ಮಾಜಿ ನಿರ್ದೇಶಕ ಅನಿಲ್‌ಕುಮಾರ್ ಬನ್ಸಾಲಿ ಅಭಿಪ್ರಾಯಪಟ್ಟಿದ್ಧಾರೆ.
ಏಪ್ರಿಲ್ 2 ರಂದು, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕಕ್ಕೆ ಸರಕುಗಳನ್ನು ರಫ್ತು ಮಾಡುವ ಸುಮಾರು 60 ದೇಶಗಳ ಮೇಲೆ ಸಾರ್ವತ್ರಿಕ ಸುಂಕ ವಿಧಿಸಿದ್ದರು. ಜೊತೆಗೆ, ಭಾರತದಂತಹ ದೇಶಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿದರು. ಇದು ವಿಶ್ವದ ಅತಿದೊಡ್ಡ ಆರ್ಥಿಕತೆಯಲ್ಲಿ ಸೀಗಡಿಯಿಂದ ಉಕ್ಕಿನವರೆಗಿನ ಉತ್ಪನ್ನಗಳ ಮಾರಾಟದ ಮೇಲೆ ಪರಿಣಾಮ ಬೀರಿತ್ತು.
ಇದರಿಂದ, ಏಷ್ಯನ್ ಮಾರುಕಟ್ಟೆಗಳಲ್ಲಿ, ಟೋಕಿಯೊದ ನಿಕ್ಕಿ 225 ಸೂಚ್ಯಂಕ ಮತ್ತು ದಕ್ಷಿಣ ಕೊರಿಯಾದ ಕೊಸ್ಪಿ ಕಡಿಮೆ ವಹಿವಾಟು ನಡೆಸುತ್ತಿದ್ದರೆ, ಶಾಂಘೈ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸ್ವಲ್ಪ ಚೇತರಿಕೆ ಕಂಡಿದ್ದವು. ಟೋಕಿಯೊದ ನಿಕ್ಕಿ 225 ಸೂಚ್ಯಂಕವು ಶೇಕಡಾ 4 ರಷ್ಟು ಕುಸಿತ ಅನುಭವಿಸಿತ್ತು.
ಅಲ್ಲದೆ, ಒಂದು ದಿನದ ನಂತರ US ಮಾರುಕಟ್ಟೆಗಳು ಗುರುವಾರ ಗಮನಾರ್ಹ ಕುಸಿತದೊಂದಿಗೆ ಕೊನೆಗೊಂಡಿತು. ನಾಸ್ಡಾಕ್ ಕಾಂಪೊಸಿಟ್ ಶೇಕಡಾ 4.31ರಷ್ಟು ಕುಸಿದರೆ, ಎಸ್&ಪಿ 500 ಶೇಕಡಾ 3.46ರಷ್ಟು ಹಾಗೂ ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ ಶೇಕಡಾ 2.50ರಷ್ಟು ಕುಸಿದಿತ್ತು.
ಇದನ್ನೂ ಓದಿ: ಭಾರತದ ಮೇಲೆ ಹೇರಿದ್ದ ಶೇ.26ರಷ್ಟು ಸುಂಕ ಜುಲೈ 9ರವರೆಗೆ ತಡೆಹಿಡಿದ ಅಮೆರಿಕ