ಇದು ಪವರ್ ಆಫ್ ಕಾಂಪೌಂಡ್ ಮ್ಯಾಜಿಕ್: ಷೇರು ಮಾರುಕಟ್ಟೆಯಲ್ಲಿ ಯಾವಾಗ ಏನಾಗುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಅದರ ಬಾಟಮ್ ಯಾವುದು ಮತ್ತು ಟಾಪ್ ಯಾವುದು ಎಂದು ಯಾರಿಗೂ ಹೇಳಲು ಸಾಧ್ಯವೇ ಇಲ್ಲ. ಆದರೆ, ವ್ಯಕ್ತಿಯೊಬ್ಬರು ತಾವು ಮಾಡಿದ ಹೂಡಿಕೆ ಮೂಲಕ ಮ್ಯಾಜಿಕ್ ಸೃಷ್ಟಿಸಿದ್ದಾರೆ. ಇದನ್ನು ಪವರ್ ಆಫ್ ಕಾಂಪೌಂಡ್ನ ಮ್ಯಾಜಿಕ್ ಎಂದೇ ಬಣ್ಣಿಸಲಾಗುತ್ತಿದೆ. ಅಂದರೆ ಬಡ್ಡಿ, ಚಕ್ರಬಡ್ಡಿಯ ಮಾಯಾ ಜಾಲ ಎಂದೂ ಕರೆಯಲಾಗುತ್ತದೆ. ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಸಣ್ಣ ಸಣ್ಣ ಹೂಡಿಕೆಯನ್ನು ದೀರ್ಘಕಾಲ ಮಾಡಿದರೆ ಏನೆಲ್ಲ ಲಾಭ ಎಂಬುದಕ್ಕೆ ಈ ಘಟನೆ ಪಕ್ಕಾ ಉದಾಹರಣೆ ಆಗಿದೆ.
ಇತ್ತೀಚೆಗೆ ವ್ಯಕ್ತಿಯೊಬ್ಬರಿಗೆ ಅದೃಷ್ಟ ಎಂಬುದು ಮನೆ ಬಾಗಿಲು ತಟ್ಟಿ ಅವರನ್ನು ಸ್ವಾಗತಿಸಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 80 ಕೋಟಿ ರೂ. ಹಾಗಾದರೆ ಆ ಅದೃಷ್ಟಶಾಲಿ ವ್ಯಕ್ತಿ ಯಾರು ನಾವು ಹೇಳಲು ಹೊರಟಿರುವ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
Guy on Reddit discovered JSW shares bought by his dad in the 1990s for ₹1L.
— Sourav Dutta (@Dutta_Souravd) June 7, 2025
Worth ₹80Cr today.
Power of buy right sell after 30yrs. pic.twitter.com/mZTpGt4LII
ಸೌರವ್ ದತ್ತಾ ಎಂಬ ವ್ಯಕ್ತಿ ತನ್ನ 'ಎಕ್ಸ್' ಖಾತೆಯಲ್ಲಿ ಮಾಡಿದ ಪೋಸ್ಟ್ ಈಗ ವೈರಲ್ ಆಗಿದೆ. ಅದರಲ್ಲಿರುವ ವಿವರಗಳ ಪ್ರಕಾರ, ವ್ಯಕ್ತಿಯೊಬ್ಬರು 1990 ರಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್ ಕಂಪನಿಯಲ್ಲಿ ರೂ.1 ಲಕ್ಷಕ್ಕೆ ಷೇರುಗಳನ್ನು ಖರೀದಿಸಿದ್ದರು. ಆ ಸಮಯದಲ್ಲಿ ಷೇರುಗಳನ್ನು ಪ್ರಮಾಣಪತ್ರಗಳ ರೂಪದಲ್ಲಿ ನೀಡಲಾಗುತ್ತಿತ್ತು. ಅವರು ಆ ದಾಖಲೆಗಳನ್ನು ಎಲ್ಲೋ ಸುರಕ್ಷಿತವಾಗಿ ಇಟ್ಟುಕೊಂಡಿದ್ದರು. ನಂತರ ಅವುಗಳನ್ನು ಮರೆತುಬಿಟ್ಟಿದ್ದರು ಕೂಡಾ. ಸುಮಾರು 35 ವರ್ಷಗಳ ನಂತರ ಅವರ ಮಗ ಆ ದಾಖಲೆಗಳನ್ನು ಗುರುತಿಸಿ ಅವುಗಳ ಬಗ್ಗೆ ವಿಚಾರಿಸಿದ್ದಾರೆ. ಈಗ ಆ ಷೇರುಗಳ ಮೌಲ್ಯವು ಊಹಿಸಲಾಗದ ರೀತಿಯಲ್ಲಿ ಹೆಚ್ಚಾಗಿದೆ.
ಆ ಷೇರುಗಳ ಮೌಲ್ಯವು ಒಂದಲ್ಲ ಎರಡಲ್ಲ ಬರೋಬ್ಬರಿ ಅನಾಮತ್ತಾಗಿ 80 ಕೋಟಿ ರೂ.ಗಳಿಗೆ ಹೆಚ್ಚಾಗಿದೆ. ಈ ವಿಚಾರ ತಿಳಿದು ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅವರ ಜೀವನವು ಒಂದೇ ಕ್ಷಣದಲ್ಲಿ ಬದಲಾಗಿದೆ. ದೀರ್ಘಾವಧಿಯ ಹೂಡಿಕೆಗಳು ತರಬಹುದಾದ ಉತ್ತಮ ಫಲಿತಾಂಶಗಳಿಗೆ ಇದು ಉತ್ತಮ ಉದಾಹರಣೆಯೂ ಆಗಿದೆ.
ನಿಮ್ಮ ಬಳಿ ಹಳೆಯ ಷೇರು ಪ್ರಮಾಣಪತ್ರಗಳು ಇದ್ದರೆ ಅವುಗಳನ್ನು ನಗದು ಮಾಡಲು ನೀವು ಹೊಸ ಡಿಮ್ಯಾಟ್ ಖಾತೆಯನ್ನು ತೆರೆಯಬೇಕಾಗುತ್ತದೆ. ನಂತರ ನೀವು ಆ ಷೇರು ಪ್ರಮಾಣಪತ್ರಗಳ ನಿಮ್ಮ ಮಾಲೀಕತ್ವವನ್ನು ಪರಿಶೀಲಿಸಬೇಕಾಗುತ್ತದೆ. ಆಗ ಮಾತ್ರ ಹಣ ನಿಮಗೆ ಬರುತ್ತದೆ.
ಸ್ಟಾಕ್ ಮಾರ್ಕೆಟ್ ಮ್ಯಾಜಿಕ್: ನೀವು ದೀರ್ಘಕಾಲದವರೆಗೆ ಸರಿಯಾದ ಷೇರುಗಳಲ್ಲಿ ಹೂಡಿಕೆ ಮಾಡಿದರೆ ಅದು ಕಾಲಾನಂತರದಲ್ಲಿ ನಿಮಗೆ ಉತ್ತಮ ಲಾಭವನ್ನು ನೀಡುತ್ತದೆ. ನನ್ನ ಆ ಷೇರುಗಳ ಮೌಲ್ಯವು ಕ್ರಮೇಣ ಸ್ಟಾಕ್ ವಿಭಜನೆಗಳು, ಬೋನಸ್‌ಗಳು ಮತ್ತು ಲಾಭಾಂಶಗಳ ರೂಪದಲ್ಲಿ ಹೆಚ್ಚಾಗುತ್ತಾ ಸಾಗುತ್ತದೆ. ಇದೆಲ್ಲವೂ ಮ್ಯಾಜಿಕ್‌ನಂತೆ ನಡೆಯುತ್ತದೆ ಎಂದು ಎಕ್ಸ್ ಹ್ಯಾಂಡಲ್ ನ ಬಳಕೆದಾರರೊಬ್ಬರು ಹೀಗಂತಾ ಬರೆದುಕೊಂಡಿದ್ದಾರೆ.
'ದೀರ್ಘಾವಧಿಯ ಹೂಡಿಕೆಗಳಿಂದಾಗಿ ಈಗ ಅವರ ಜೀವನ ಸಂಪೂರ್ಣವಾಗಿ ಬದಲಾಗಿದೆ. ಅವರು ಈಗ ತಮ್ಮ ಜೀವನದುದ್ದಕ್ಕೂ ಸಂತೋಷದಿಂದ ಬದುಕಬಹುದು ಎಂದು ಮತ್ತೊಬ್ಬ ನೆಟಿಜನ್ ಬರೆದುಕೊಂಡಿದ್ದಾರೆ . ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಪ್ರಸ್ತುತ ಷೇರು ಬೆಲೆ ಸುಮಾರು ರೂ. 1004.9. ಈ ಕಂಪನಿಯ ಮಾರುಕಟ್ಟೆ ಬಂಡವಾಳೀಕರಣ 2 ಲಕ್ಷದ 37 ಸಾವಿರ ಕೋಟಿ.
ದಯವಿಟ್ಟು ಗಮನಿಸಿ: ಷೇರು ಮಾರುಕಟ್ಟೆ ಹೂಡಿಕೆ ತುಂಬಾ ಅಪಾಯಕಾರಿ. ಇದು ಲಾಭಗಳನ್ನು ಮಾತ್ರವಲ್ಲದೇ ಭಾರಿ ನಷ್ಟಗಳನ್ನು ಸಹ ಒಳಗೊಂಡಿರುತ್ತದೆ. ಆದ್ದರಿಂದ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ನಿಮ್ಮ ವೈಯಕ್ತಿಕ ಹಣಕಾಸು ತಜ್ಞರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ, ನಷ್ಟದ ಅಪಾಯವಿದೆ. ಜಾಗರೂಕರಾಗಿರಿ!
ಇದನ್ನು ಓದಿ:ದೇಶಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಟಿವಿಎಸ್ ಅಪಾಚೆ ನ್ಯೂ ಮಾಡೆಲ್: ಕೈಗೆಟುಕುವ ಬೆಲೆ, ಅದ್ಭುತ ಫೀಚರ್ಸ್!
ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ: 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ?