ETV Bharat / business

ಕೇಂದ್ರ ತೆರಿಗೆಯಲ್ಲಿನ ರಾಜ್ಯಗಳ ಪಾಲನ್ನು ಶೇಕಡಾ 50 ಕ್ಕೆ ಹೆಚ್ಚಿಸಿ: ಕೇರಳ ಸಿಎಂ ಒತ್ತಾಯ - Union taxes

ಕೇಂದ್ರ ತೆರಿಗೆಗಳ ನಿವ್ವಳ ಆದಾಯದಲ್ಲಿ ರಾಜ್ಯಗಳ ಪಾಲನ್ನು ಶೇಕಡಾ 50 ಕ್ಕೆ ಹೆಚ್ಚಿಸಬೇಕು ಎಂದು ಸಿಎಂ ವಿಜಯನ್ ಒತ್ತಾಯಿಸಿದ್ದಾರೆ.

author img

By ANI

Published : Sep 12, 2024, 2:42 PM IST

ಸಿಎಂ ಪಿಣರಾಯಿ ವಿಜಯನ್
ಸಿಎಂ ಪಿಣರಾಯಿ ವಿಜಯನ್ (ANI)

ತಿರುವನಂತಪುರಂ: ರಾಜ್ಯಗಳಿಗೆ ನೀಡಲಾಗುವ ತೆರಿಗೆಗಳ ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದು, ಕೇಂದ್ರ ತೆರಿಗೆಗಳ ನಿವ್ವಳ ಆದಾಯದಲ್ಲಿ ರಾಜ್ಯಗಳ ಪಾಲನ್ನು ಶೇಕಡಾ 50 ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

16 ನೇ ಹಣಕಾಸು ಆಯೋಗದ ಶಿಫಾರಸುಗಳಿಗೆ ಮುಂಚಿತವಾಗಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಪ್ರತಿಪಕ್ಷ ಆಡಳಿತದ ರಾಜ್ಯಗಳ ಹಣಕಾಸು ಸಚಿವರೊಂದಿಗೆ ಗುರುವಾರ ನಡೆದ ಉನ್ನತ ಮಟ್ಟದ ಸಮಾವೇಶದಲ್ಲಿ ಪಿಣರಾಯಿ ವಿಜಯನ್ ಈ ಬೇಡಿಕೆಯನ್ನು ಮಂಡಿಸಿದ್ದಾರೆ.

ಸಭೆಯಲ್ಲಿ ತೆಲಂಗಾಣ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಭಟ್ಟಿ ವಿಕ್ರಮಾರ್ಕ ಮಲ್ಲು, ಕರ್ನಾಟಕ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಮತ್ತು ತಮಿಳುನಾಡು ಹಣಕಾಸು ಸಚಿವ ತಂಗಂ ತೆನ್ನರಸು ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

"ಕೇಂದ್ರ ಮತ್ತು ರಾಜ್ಯಗಳ ತೆರಿಗೆ ವಿಧಿಸುವ ಅಧಿಕಾರಗಳು ಮತ್ತು ವೆಚ್ಚದ ಬಾಧ್ಯತೆಗಳ ನಡುವಿನ ದೊಡ್ಡ ಮಟ್ಟದ ಹಣಕಾಸು ಅಸಮತೋಲನವಿರುವುದನ್ನು ಪರಿಗಣಿಸಿ ರಾಜ್ಯಗಳಿಗೆ ವಿತರಿಸಬೇಕಾದ ತೆರಿಗೆಗಳ ಹಿಂದಿನ ಪಾಲನ್ನು ನಿವ್ವಳ ಆದಾಯದ ಶೇಕಡಾ 50 ಕ್ಕೆ ಹೆಚ್ಚಿಸಬೇಕಾಗಿದೆ ಎಂದು ಕೇರಳವು 15 ನೇ ಹಣಕಾಸು ಆಯೋಗಕ್ಕೆ ಸಲ್ಲಿಸಿದ ಜ್ಞಾಪಕ ಪತ್ರದಲ್ಲಿ ಒತ್ತಾಯಿಸಿದೆ" ಎಂದು ಸಿಎಂ ವಿಜಯನ್ ಹೇಳಿದರು. ಈ ವಿಷಯದಲ್ಲಿ ವಿವಿಧ ರಾಜ್ಯಗಳು ಒಗ್ಗಟ್ಟಾಗಿ ಪ್ರಯತ್ನಿಸಿದರೆ 16 ನೇ ಹಣಕಾಸು ಆಯೋಗದ ಮನವೊಲಿಸಬಹುದು ಎಂದು ಅವರು ತಿಳಿಸಿದರು.

14 ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ, ಪ್ರಸ್ತುತ ಕೇಂದ್ರ ತೆರಿಗೆಗಳಲ್ಲಿ ಶೇಕಡಾ 41 ರಷ್ಟು ಪಾಲನ್ನು ವಿವಿಧ ರಾಜ್ಯಗಳ ನಡುವೆ ಹಂಚಲಾಗುತ್ತದೆ. ಜನಸಂಖ್ಯೆ, ಜನಸಂಖ್ಯಾಶಾಸ್ತ್ರ, ಆದಾಯದ ಅಂತರ, ವಿಸ್ತೀರ್ಣ ಮತ್ತು ರಾಜ್ಯದ ಅರಣ್ಯ ಪ್ರದೇಶವನ್ನು ಒಳಗೊಂಡಿರುವ ವಿವಿಧ ಮಾನದಂಡಗಳ ಮೇಲೆ ರಾಜ್ಯಗಳ ಪಾಲನ್ನು ಲೆಕ್ಕಹಾಕಲಾಗುತ್ತದೆ.

ಕಡಿಮೆ ಆದಾಯ ಹೊಂದಿರುವ ರಾಜ್ಯಗಳಿಗೆ ಕೇಂದ್ರದಿಂದ ಬೆಂಬಲ ಮತ್ತಷ್ಟು ಹೆಚ್ಚಾಗಬೇಕು. ಆರೋಗ್ಯ, ಶಿಕ್ಷಣ ಮತ್ತು ಜನಸಂಖ್ಯಾ ಸೂಚಕಗಳನ್ನು ಸುಧಾರಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ರಾಜ್ಯಗಳಿಗೆ ಕಡಿಮೆ ತೆರಿಗೆಗಳ ಪಾಲು ನೀಡುವ ಮೂಲಕ ಅವುಗಳನ್ನು ಶಿಕ್ಷಿಸಬಾರದು ಎಂದು ಅವರು ನುಡಿದರು.

2026 ರ ಏಪ್ರಿಲ್ 1 ರಿಂದ ಪ್ರಾರಂಭವಾಗುವ ಐದು ವರ್ಷಗಳ ಹಂಚಿಕೆ ಅವಧಿಯನ್ನು ಒಳಗೊಂಡಂತೆ ರಾಜ್ಯಗಳಿಗೆ ತೆರಿಗೆಗಳ ವಿಕೇಂದ್ರೀಕರಣದ ಶಿಫಾರಸುಗಳಿಗಾಗಿ ತನ್ನ ಕೆಲಸ ಪ್ರಾರಂಭಿಸಿರುವ 16 ನೇ ಹಣಕಾಸು ಆಯೋಗದ ಮುಂದೆ ಕೆಲ ರಾಜ್ಯಗಳು ಎದುರಿಸುತ್ತಿರುವ ತೆರಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಈ ಸಭೆ ನಡೆಯಿತು.

ಇದನ್ನೂ ಓದಿ : 12,461 ಕೋಟಿ ರೂ.ಗಳ ಪರಿಷ್ಕೃತ ಜಲವಿದ್ಯುತ್ ಯೋಜನೆಗೆ ಸಂಪುಟ ಅನುಮೋದನೆ - Hydro Power Projects

ETV Bharat Logo

Copyright © 2024 Ushodaya Enterprises Pvt. Ltd., All Rights Reserved.