ETV Bharat / business

ಕ್ಯಾನ್ಸರ್​ ರೋಗಿಗಳಿಗೆ ಗುಡ್​​ನ್ಯೂಸ್​: ಔಷಧಗಳ ಮೇಲಿನ ಜಿಎಸ್​​ಟಿ ದರ ಶೇಕಡಾ 12 ರಿಂದ 5ಕ್ಕೆ ಇಳಿಕೆ - GST Council meeting

ಕ್ಯಾನ್ಸರ್​​ ಔಷಧಿಗಳ ಮೇಲಿನ ಜಿಎಸ್​ಟಿ ದರವನ್ನು ಭಾರೀ ಪ್ರಮಾಣದಲ್ಲಿ ಕಡಿತ ಮಾಡುವ ಮೂಲಕ ಸೋಮವಾರ ನಡೆದ ಜಿಎಸ್​​ಟಿ ಮಂಡಳಿ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

author img

By ETV Bharat Karnataka Team

Published : Sep 9, 2024, 10:47 PM IST

ಜಿಎಸ್​​ಟಿ ಮಂಡಳಿ ಸಭೆ
ಜಿಎಸ್​​ಟಿ ಮಂಡಳಿ ಸಭೆ (ANI)

ನವದೆಹಲಿ: ಪ್ರಾಣಾಂತಕ ಕಾಯಿಲೆಯಾದ ಕ್ಯಾನ್ಸರ್​​ನ ಔಷಧಿಗಳು ದುಬಾರಿಯಾಗಿದ್ದು, ಬಡವರಿಗೆ ಹೊರೆಯಾಗಿದ್ದವು. ಔಷಧಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ಇಳಿಕೆ ಮಾಡಲು ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಕ್ಯಾನ್ಸರ್​​ನ ಮೂರು ಔಷಧಗಳ ಮೇಲಿನ ಜಿಎಸ್​​ಟಿಯನ್ನು ಶೇಕಡಾ 12 ರಿಂದ ಶೇಕಡಾ 5 ಕ್ಕೆ ಇಳಿಸಲು ನಿರ್ಧರಿಸಿದೆ.

ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ 54ನೇ ಜಿಎಸ್​ಟಿ ಮಂಡಳಿ​​ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದ್ದು, ಹಣಕಾಸು ರಾಜ್ಯ ಸಚಿವ ಪಂಕಜ್​ ಚೌಧರಿ, ರಾಜ್ಯಗಳ ಹಣಕಾಸು ಸಚಿವರು ಭಾಗಿಯಾಗಿದ್ದರು.

ಪ್ರಮುಖ ಕ್ಯಾನ್ಸರ್ ಔಷಧಿಗಳಾದ ಟ್ರಾಸ್ಟುಜುಮಾಬ್ ಡೆರಕ್ಸುಟೆಕನ್, ಒಸಿಮೆರ್ಟಿನಿಬ್ ಮತ್ತು ದುರ್ವಾಲುಮಾಬ್ ಮೇಲಿನ ಜಿಎಸ್​​ಟಿ ದರಗಳನ್ನು ಪ್ರತಿಶತ 12 ರಿಂದ 5 ಕ್ಕೆ ಇಳಿಸಲು ಜಿಎಸ್​​ಟಿ ಮಂಡಳಿಯು ಶಿಫಾರಸು ಮಾಡಿದೆ. ಮಂಡಳಿಯ ಈ ನಿರ್ಧಾರವು ಕ್ಯಾನ್ಸರ್​ ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​​ ಸಭೆಯ ಬಳಿಕ ತಿಳಿಸಿದರು.

ಇದರ ಜೊತೆಗೆ ಆಯ್ದ ತಿಂಡಿಗಳ ಜಿಎಸ್​ಟಿ ದರವನ್ನು ಶೇಕಡಾ 18 ರಿಂದ ಶೇಕಡಾ 12 ಕ್ಕೆ ಇಳಿಸಲಾಗಿದೆ. ಹುರಿದ ಅಥವಾ ಬೇಯಿಸದ ತಿಂಡಿ ಉಂಡೆಗಳ ಮೇಲಿನ 5 ಪ್ರತಿಶತ ಜಿಎಸ್​​ಟಿ ದರವು ಮುಂದುವರಿಯುತ್ತದೆ. ಇದರ ಜೊತೆಗೆ 9401 ಅಡಿ ವರ್ಗೀಕರಿಸಬಹುದಾದ ಕಾರ್ ಸೀಟುಗಳ ಮೇಲಿನ ಜಿಎಸ್​ಟಿಯನ್ನು ಶೇಕಡಾ 18 ರಿಂದ 28 ಕ್ಕೆ ಹೆಚ್ಚಿಸಲಾಗುವುದು. 28 ಪ್ರತಿಶತ ದರವು ಬೈಕ್​ ಸೀಟುಗಳಿಗೆ ಅನ್ವಯಿಸುತ್ತದೆ. ಇದನ್ನು ಕಾರುಗಳ ಸೀಟುಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದರು.

ಧಾರ್ಮಿಕ ಕ್ಷೇತ್ರಗಳಿಗೆ ಹೆಲಿಕಾಪ್ಟರ್‌ಗಳ ಮೂಲಕ ಪ್ರಯಾಣಿಕರ ಸಾಗಿಸುವ ಸೇವೆಗಳ ಜಿಎಸ್​ಟಿಯನ್ನು ಶೇಕಡಾ 5 ಕ್ಕೆ ಇಳಿಸಲಾಗಿದೆ. ಈಗಿರುವ ಶೇಕಡಾ 18 ರಷ್ಟು ದರವನ್ನು ಕಡಿಮೆ ಮಾಡಲಾಗಿದೆ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಸ್ಪಷ್ಟಪಡಿಸಿದ್ದಾರೆ.

ಬಜೆಟ್​ನಲ್ಲಿ ಕಸ್ಟಮ್ಸ್​ ಸುಂಕ ವಿನಾಯಿತಿ: 2024-25 ನೇ ಸಾಲಿನಲ್ಲಿ ಮಂಡಿಸಲಾದ ಬಜೆಟ್​​ನಲ್ಲೂ ಕೇಂದ್ರ ಸರ್ಕಾರ ಕ್ಯಾನ್ಸರ್​ ಔಷಧಿಗಳಿಗೆ ಕಸ್ಟಮ್ಸ್​ ಸುಂಕದ ವಿನಾಯಿತಿ ನೀಡಿತ್ತು. ಇದೀಗ ಜಿಎಸ್​​ಟಿ ದರವನ್ನೂ ತಗ್ಗಿಸಿ ಮಹತ್ವದ ನಿರ್ಧಾರ ಮಾಡಿದೆ.

ಇದನ್ನೂ ಓದಿ: ಸೆಪ್ಟೆಂಬರ್​ 9ರಂದು ಜಿಎಸ್​ಟಿ ಕೌನ್ಸಿಲ್ ಸಭೆ: ದರ ತರ್ಕಬದ್ಧಗೊಳಿಸುವಿಕೆಯ ಬಗ್ಗೆ ಚರ್ಚೆ - GST COUNCIL

ETV Bharat Logo

Copyright © 2024 Ushodaya Enterprises Pvt. Ltd., All Rights Reserved.