ಬೆಂಗಳೂರು: ದೇಶದಲ್ಲಿ ಚಿನ್ನದ ಬೆಲೆ ಕ್ರಮೇಣ ಕುಸಿಯುತ್ತಿದ್ದು, ಸೋಮವಾರ 98,820 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಸೋಮವಾರ ವೇಳೆಗೆ 220 ರೂ. ಇಳಿಕೆಯಾಗಿ, 98,600ಕ್ಕೆ ತಲುಪಿದೆ. ಸೋಮವಾರ ಒಂದು ಕೆ.ಜಿ ಬೆಳ್ಳಿಯ ಬೆಲೆ 1,07,800 ರೂ. ನಷ್ಟಿತ್ತು. ಆದರೆ ಮಂಗಳವಾರದ ವೇಳೆಗೆ ರೂ. 1,400ರಷ್ಟು ಏರಿಕೆಯಾಗಿ, 1,09,200 ರೂ.ಗೆ ತಲುಪಿದೆ.
24 ಕ್ಯಾರೆಟ್ ಚಿನ್ನಾಭರಣದ ಇಂದಿನ ಮಾರುಕಟ್ಟೆ ಬೆಲೆ 10 ಗ್ರಾಂಗೆ 97,580 ರೂ. ಇದೆ. ನಿನ್ನೆಯಿಂದ ಇಂದಿಗೆ 110 ರೂ. ಇಳಿಕೆಯಾಗಿದೆ. 22 ಕ್ಯಾರೆಟ್ನ ಚಿನ್ನಾಭರಣದ ಇಂದಿನ ಬೆಲೆ 10 ಗ್ರಾಂಗೆ 89,450 ರೂ. ಇದೆ. ನಿನ್ನೆಯಿಂದ ಇಂದಿಗೆ 100 ರೂ. ಕಡಿಮೆಯಾಗಿದೆ. 18 ಕ್ಯಾರೆಟ್ ಚಿನ್ನಾಭರಣದ ಇಂದಿನ ಬೆಲೆ 10 ಗ್ರಾಂ ಗೆ 73,190 ರೂ. ಇದೆ. ಸೋಮವಾರದಿಂದ ಇಂದಿಗೆ 80ರೂ. ಇಳಿಕೆಯಾಗಿದೆ.
ದೇಶದ ವಿವಿಧ ನಗರಗಳಲ್ಲಿ ಚಿನ್ನಾಭರಣಗಳ ಇಂದಿನ ಮಾರುಕಟ್ಟೆ ಬೆಲೆ ಈ ಕೆಳಗಿನಂತಿವೆ..
ನಗರ | 24 ಕ್ಯಾರೆಟ್ ದರ (10 ಗ್ರಾಂ) | 22 ಕ್ಯಾರೆಟ್ ದರ (10 ಗ್ರಾಂ) | 18 ಕ್ಯಾರೆಟ್ ದರ (10 ಗ್ರಾಂ) | ಬೆಳ್ಳಿ ದರ (10 ಗ್ರಾಂ) |
ಬೆಂಗಳೂರು | 97,580 ರೂ. | 89,450 ರೂ. | 73,190 ರೂ. | 1,090 ರೂ. |
ಹೈದರಾಬಾದ್ | 97,580 ರೂ. | 89,450 ರೂ. | 73,190 ರೂ. | 1,190 ರೂ. |
ಚೆನ್ನೈ | 97,580 ರೂ. | 89,450 ರೂ. | 73,600 ರೂ. | 1,190 ರೂ. |
ಮುಂಬೈ | 97,580 ರೂ. | 89,450 ರೂ. | 73,190 ರೂ. | 1,090 ರೂ. |
ದೆಹಲಿ | 97,730 ರೂ. | 89,600 ರೂ. | 73,310 ರೂ. | 1,090 ರೂ. |
ಕೇರಳ | 97,580 ರೂ. | 89,450 ರೂ. | 73,190 ರೂ. | 1,190 ರೂ. |
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದ ಬೆಲೆಗಳಾಗಿವೆ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಯಾಗುತ್ತಿರುತ್ತವೆ.
ಸ್ಪಾಟ್ ಗೋಲ್ಡ್ ಬೆಲೆ?: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಬಹುತೇಕ ಸ್ಥಿರವಾಗಿವೆ. ಸೋಮವಾರ, ಒಂದು ಔನ್ಸ್ ಚಿನ್ನದ ಬೆಲೆ $3,309 ರಷ್ಟಿತ್ತು, ಆದರೆ ಮಂಗಳವಾರ ಅದು $3308 ತಲುಪಿದೆ. ಪ್ರಸ್ತುತ ಒಂದು ಔನ್ಸ್ ಬೆಳ್ಳಿಯ ಬೆಲೆ $36.56.
ಸ್ಟಾಕ್ ಮಾರುಕಟ್ಟೆ: ಮಂಗಳವಾರ ಲಾಭದೊಂದಿಗೆ ಪ್ರಾರಂಭವಾದ ಷೇರು ಮಾರುಕಟ್ಟೆಗಳು ತಕ್ಷಣವೇ ನಷ್ಟಕ್ಕೆ ಇಳಿದಿವೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಪ್ರಸ್ತುತ 33 ಅಂಕಗಳ ಕುಸಿತದೊಂದಿಗೆ 82,419 ಕ್ಕೆ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 11 ಅಂಕಗಳ ಕುಸಿತದೊಂದಿಗೆ 25,111 ಕ್ಕೆ ವಹಿವಾಟು ನಡೆಸುತ್ತಿದೆ.
ಲಾಭ ಪಡೆದವರು: ಇಂಡಸ್‌ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಎಚ್‌ಸಿಎಲ್ ಟೆಕ್, ಎನ್‌ಟಿಪಿಸಿ, ಇನ್ಫೋಸಿಸ್, ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ಟಿಸಿಎಸ್
ನಷ್ಟ ಅನುಭವಿಸಿದವರು: ಏಷ್ಯನ್ ಪೇಂಟ್ಸ್, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ ಬ್ಯಾಂಕ್, ಟೈಟಾನ್, ಹಿಂದೂಸ್ತಾನ್ ಯೂನಿಲಿವರ್, ಪವರ್‌ಗ್ರಿಡ್, ಸನ್ ಫಾರ್ಮಾ
ರೂಪಾಯಿ ಮೌಲ್ಯ: ಇಂದು, ರೂಪಾಯಿ ಮೌಲ್ಯ 5 ಪೈಸೆ ಹೆಚ್ಚಾಗಿದೆ. ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿಯ ಪ್ರಸ್ತುತ ವಿನಿಮಯ ದರ ರೂ.85.61.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ: ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 102.92 ರೂ. ಡೀಸೆಲ್ ಬೆಲೆ 90.99 ರೂ. ನವದೆಹಲಿಯಲ್ಲಿ, ಒಂದು ಲೀಟರ್ ಪೆಟ್ರೋಲ್ ಬೆಲೆ 94.77 ರೂ. ಡೀಸೆಲ್ ಬೆಲೆ 87.67 ರೂ. ಹೈದರಾಬಾದ್ನಲ್ಲಿ, ಒಂದು ಲೀಟರ್ ಪೆಟ್ರೋಲ್ ಬೆಲೆ 107.46.76 ರೂ. ಆಗಿದ್ದರೆ, ಡೀಸೆಲ್ ಬೆಲೆ 95.70 ರೂ. ಆಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ: 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ?