ಹೈದರಾಬಾದ್: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಒಂದು ಲಕ್ಷದ ಗಡಿ ದಾಟಿದ್ದ ಬಂಗಾರ ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ 1,00,450 ರೂ. ಇತ್ತು. ಆದರೆ ಶನಿವಾರ 1,050 ರೂ. ಇಳಿದು 99,400 ರೂ. ತಲುಪಿದೆ.
ಇನ್ನು, ಶುಕ್ರವಾರ ಒಂದು ಕಿಲೋ ಬೆಳ್ಳಿಯ ಬೆಲೆ 1,08,130 ರೂ. ಇದ್ದದ್ದು, ಶನಿವಾರ 55 ರೂ. ಇಳಿದು 1,08,075 ರೂ. ಇದೆ.
ಬೆಂಗಳೂರಿನಲ್ಲಿ ಎಷ್ಟಿದೆ ಬೆಲೆ:
- ಬೆಂಗಳೂರಿನಲ್ಲಿ 99.9ಫ್ಯೂರಿಟಿಯ 10 ಗ್ರಾಂ ಚಿನ್ನದ ನಾಣ್ಯದ ಬೆಲೆ 99166 ರೂ. ಇದೆ. ಇನ್ನು 1 ಕೆಜಿ ಬೆಳ್ಳಿ ಬೆಲೆ, ಶನಿವಾರ 1,08487 ರೂ. ಇದೆ.
- 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ಶನಿವಾರ 1630 ರೂ ಕಡಿಮೆ ಆಗಿ 97970 ರೂ. ಇದೆ.
- 22 ಕ್ಯಾರೆಟ್ ನ 10 ಗ್ರಾಂ ಆಭರಣ ಚಿನ್ನದ ಬೆಲೆ 1500 ಕಡಿಮೆ ಆಗಿ 89, 800 ರೂಗೆ ಮಾರಾಟ ಆಗುತ್ತಿದೆ.
ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 99,400 ರೂ. ಇದ್ದರೆ, ಒಂದು ಕಿಲೋ ಬೆಳ್ಳಿಯ ಬೆಲೆ 1,08,075 ರೂ. ತಲುಪಿತು.
ಗಮನಿಸಿ: ಮೇಲಿನ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಇದ್ದಂತವು. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ಎಂಬುದನ್ನು ಗ್ರಾಹಕರು ದಯವಿಟ್ಟು ಗಮನದಲ್ಲಿಟ್ಟುಕೊಳ್ಳಬೇಕು.
ಸ್ಪಾಟ್ ಚಿನ್ನದ ಬೆಲೆ? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಕಡಿಮೆಯಾಗಿದೆ. ಶುಕ್ರವಾರ ಒಂದು ಔನ್ಸ್ ಚಿನ್ನದ ಬೆಲೆ $ 3,370 ಆಗಿತ್ತು. ಆದರೆ, ಶನಿವಾರದ ವೇಳೆಗೆ ಅದು $ 60 ರಷ್ಟು ಕಡಿಮೆಯಾಗಿ $ 3,310 ಕ್ಕೆ ತಲುಪಿದೆ. ಪ್ರಸ್ತುತ ಒಂದು ಔನ್ಸ್ ಬೆಳ್ಳಿಯ ಬೆಲೆ 36.00. ಡಾಲರ್.
ಇದನ್ನು ಓದಿ:ಟ್ರಂಪ್ ಅವರ ಬ್ಯೂಟಿಫುಲ್ ವಿಧೇಯಕದಿಂದ ಭಾರತಕ್ಕೆ ಶತಕೋಟಿ ಡಾಲರ್ ನಷ್ಟ ಸಾಧ್ಯತೆ: ಏನಿದು ಮಸೂದೆ?