ಬೆಂಗಳೂರು/ ಹೈದರಾಬಾದ್: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ರೂ. ಬುಧವಾರ 91,360 ಇತ್ತು. ಆದರೆ ಗುರುವಾರದ ವೇಳೆಗೆ ಸುಮಾರು ರೂ. 1,390 ಏರಿಕೆ ಆಗುವ ಮೂಲಕ ಬಂಗಾರ ಮತ್ತೆ 92,750. ರೂಗೆ ತಲುಪಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. ಬುಧವಾರ 91,938 ರೂ ಆಗಿತ್ತು. ಅದು ಇಂದು 2,708 ರೂಗಳಷ್ಟು ಏರಿಕೆ ಕಾಣುವ ಮೂಲಕ ಗುರುವಾರ 94,646ಕ್ಕೆ ಏರಿಕೆ ಕಂಡಿದೆ.
ಕಳೆದ ಕೆಲ ದಿನಗಳಿಂದ ತುಸು ಕೆಳಗ್ಗೆ ಬರುತ್ತಿದೆ ಎನ್ನುವಾಗಲೇ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಹಾಗೂ ಟ್ರಂಪ್ ಟಾರಿಫ್ ಘೋಷಣೆ ಹಿನ್ನೆಲೆ ಚಿನ್ನ ಬೆಳ್ಳಿ ದರ ಮತ್ತೆ ಏರುಮುಖವಾಗುತ್ತಿದೆ.
ಬೆಂಗಳೂರಿನಲ್ಲಿ ಬಂಗಾರದ ದರ:
- ಬೆಂಗಳೂರಿನಲ್ಲಿ 99.9 ಪ್ಯೂರಿಟಿಯ 10 ಗ್ರಾಂ ಚಿನ್ನದ ನಾಣ್ಯದ ದರ 94,500 ರೂ ಇದೆ. ಇನ್ನು ಬೆಳ್ಳಿ ಕೆಜಿ 95,200 ರೂ. ಇದೆ.
- 22 ಕ್ಯಾರೆಟ್ನ ಒಂದು ಗ್ರಾಂ ಬಂಗಾರ ಸುಮಾರು 270 ರೂ ಏರಿಕೆ ಆಗುವ ಮೂಲಕ 8560 ರೂಗೆ ಮಾರಾಟವಾಗುತ್ತಿದೆ. ಅದೇ 10 ಗ್ರಾಂ ಬಂಗಾರಕ್ಕೆ ಸುಮಾರು 2700 ರೂಗಿಂತ ಹೆಚ್ಚಾಗಿದೆ. ಅಂದರೆ ಸುಮಾರು 85,600 ರೂ. ಇದೆ.
- 18 ಕ್ಯಾರೆಟ್ನ 1 ಗ್ರಾಂ ಬಂಗಾರಕ್ಕೆ ಇಂದಿನ ದರ 7004 ರೂ ಇದ್ದು ಸುಮಾರು 221 ರೂಪಾಯಿ ಏರಿಕೆ ಆಗಿದೆ. ಅದೇ 10 ಗ್ರಾಂಗೆ 70040 ರೂ ದರ ಇದೆ.
ಇನ್ನು ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ರೂ. 92,750 ರೂ. ಇದ್ದರೆ, ಒಂದು ಕಿಲೋ ಬೆಳ್ಳಿಯ ಬೆಲೆ ರೂ. 94,646. ಇದೆ.
ಗಮನಿಸಿ: (ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಪ್ರಾರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಏರಿಳಿತಗೊಳ್ಳುತ್ತವೆ. ಇದನ್ನು ಓದುಗರು/ ಗ್ರಾಹಕರು ಗಮನಿಸಬೇಕಾಗಿದೆ.)
ಸ್ಪಾಟ್ ಚಿನ್ನದ ಬೆಲೆ?: ಸ್ಪಾಟ್ ಚಿನ್ನದ ಬೆಲೆ ಏಪ್ರಿಲ್ 10, 2025: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಗಣನೀಯವಾಗಿ ಹೆಚ್ಚಿವೆ. ಒಂದು ಔನ್ಸ್ ಚಿನ್ನದ ಬೆಲೆ ಬುಧವಾರ $3,007, ಆದರೆ ಗುರುವಾರ $3,128 ಗೆ $121 ಏರಿಕೆಯಾಗಿದೆ. ಪ್ರತಿ ಔನ್ಸ್ ಬೆಳ್ಳಿಯ ಪ್ರಸ್ತುತ ಬೆಲೆ $ 31.08 ಆಗಿದೆ.
ಇದನ್ನು ಓದಿ: ಇಂದು ಮಹಾವೀರ ಜಯಂತಿ: ಷೇರು ಮಾರುಕಟ್ಟೆ ವ್ಯವಹಾರ ಇದೆಯೋ ಇಲ್ಲವೋ ; ಇಲ್ಲಿದೆ ಅದೆಲ್ಲದರ ಫುಲ್ ಡೀಟೇಲ್ಸ್