ETV Bharat / business

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ಬಂಗಾರ; 1 ಲಕ್ಷ ರೂಪಾಯಿ ಗಡಿ ದಾಟಿತು ಚಿನ್ನ! - GOLD FUTURES EXTEND BULL RUN

ಸುರಕ್ಷಿತ ಹೂಡಿಕೆಯಾಗಿರುವ ಚಿನ್ನವು ಜಾಗತಿಕ ಮಾರುಕಟ್ಟೆ ಅನಿಶ್ಚಿತತೆಯಿಂದ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದೆ.

gold-futures-extend-bull-run-for-4th-day-jump-rs-1899-to-near-rs-1-lakh
ಪ್ರಾತಿನಿಧಿಕ ಚಿತ್ರ (ETV Bharat)
author img

By PTI

Published : April 22, 2025 at 12:41 PM IST

2 Min Read

ನವದೆಹಲಿ: ಸತತ ನಾಲ್ಕು ದಿನಗಳಿಂದ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಇದೀಗ ಸಾರ್ವಕಾಲಿಕ ಗರಿಷ್ಠ ಬೆಲೆಗೆ ತಲುಪಿದೆ. ಮಂಗಳವಾರ 1,899ರೂ. ಏರಿಕೆ ಕಾಣುವ ಮೂಲಕ 10 ಗ್ರಾಂ ಚಿನ್ನದ ಬೆಲೆ 99,178 ಆಗುವ ಮೂಲಕ ಚಿನ್ನ ಸುರಕ್ಷಿತ ಹೂಡಿಕೆಯಾಗಿದೆ.

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್​ನಲ್ಲಿ, ಜೂನ್‌ನಲ್ಲಿ ಹೆಚ್ಚು ವಹಿವಾಟು ನಡೆದ ಚಿನ್ನದ ವಿತರಣಾ ಒಪ್ಪಂದಗಳು ಆರಂಭಿಕ ವಹಿವಾಟಿನಲ್ಲಿ 10 ಗ್ರಾಂಗಳಿಗೆ 1,899 ರೂ. ಅಥವಾ ಶೇ 2ರಷ್ಟು ಏರಿಕೆ ಕಂಡಿದ್ದು ಸದ್ಯ 99,178 ರೂ.ಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.

ಜೂನ್​ ವಹಿವಾಟಿನ ಒಪ್ಪಂದದಲ್ಲಿ 10 ಗ್ರಾಂ ಚಿನ್ನ 98,880 ರೂ.ಗಳಲ್ಲಿ ವಹಿವಾಟು ನಡೆಸಿತು. ಆಗಸ್ಟ್​​ನ ಒಪ್ಪಂದದಲ್ಲಿ 1,848 ಅಥವಾ 1.89ರಷ್ಟು ಏರಿಕೆ ಕಂಡಿದ್ದು, 10 ಗ್ರಾಂ ಬಂಗಾರದ ಬಲೆ 99,800 ರೂಗೆ ಬಂದಿದೆ.

ಜೊತೆಗೆ ಅಕ್ಟೋಬರ್​ ಒಪ್ಪಂದದಲ್ಲಿ ಎಂಸಿಎಕ್ಸ್​​ನಲ್ಲಿ ಇದೇ ಮೊದಲ ಬಾರಿಗೆ ₹1 ಲಕ್ಷದ ಗಡಿ ದಾಟಿದೆ. 2000 ಅಥವಾ ಶೇ 2ರಷ್ಟು ಏರಿಕೆ ಕಾಣುವ ಮೂಲಕ ಅಧಿಕ ಮೌಲ್ಯಕ್ಕೆ ಅಂದರೆ 10ಗ್ರಾಂ ಚಿನ್ನದ ದರ 1,00,484 ರೂ. ಆಗಿದೆ.

ಹಳದಿ ಲೋಹದ ಬೆಲೆ ಈ ರೀತಿ ಏರಿಕೆ ಕಾಣಲು ಕಾರಣ ಅಮೆರಿಕದ ಹಣಕಾಸು ನೀತಿಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಡರಲ್ ರಿಸರ್ವ್ ಯೋಜನೆ ಪರಿಶೀಲಿಸಿ ಅನಾವರಣಗೊಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಬಂಗಾರದ ಬೆಲೆ ಗಮನಾರ್ಹ ಏರಿಕೆ ಕಂಡಿದ್ದು, ಔನ್ಸ್​​ಗೆ 3,504.12 ಅಮೆರಿಕನ್​ ಡಾಲರ್​ ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಗರಿಷ್ಠ ಏರಿಕೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಚಿನ್ನದ ಬೆಲೆ ಔನ್ಸ್​​ಗೆ 3,500 ರೂ. ದಾಟಿದ್ದು, ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮತ್ತು ಅಮೆರಿಕ ಚೀನಾದ ನಡುವಿನ ವ್ಯಾಪಾರ ಯುದ್ಧದ ನಡುವೆ ದೇಶಿಯ ಮಾರುಕಟ್ಟೆಯಲ್ಲಿ 97,000 ಮಟ್ಟಕ್ಕೆ ಏರಿಕೆ ಕಂಡಿದೆ ಎಂದು ಮೆಹ್ತಾ ಈಕ್ವಿಟಿಸ್​​ ಲಿಮಿಟೆಡ್​​ನ ರಾಹುಲ್​ ಕಲಂತ್ರಿ ತಿಳಿಸಿದ್ದಾರೆ.

ಫೆಡರಲ್​ ರಿಸರ್ವ್​​ ಬಡ್ಡಿ ದರವನ್ನು ಕಡಿತಗೊಳಿಸುವುದಾಗಿ ಟ್ರಂಪ್​ ಸೋಮವಾರ ಪುನರುಚ್ಚರಿಸಿದ್ದಾರೆ. ತಕ್ಷಣಕ್ಕೆ ಬಡ್ಡಿದರಗಳನ್ನು ಕಡಿತಗೊಳಿಸದಿದ್ದರೆ ಅಮೆರಿಕದ ಆರ್ಥಿಕತೆ ನಿಧಾನವಾಗಬಹುದು ಎಂದು ಕೂಡ ಟ್ರಂಪ್​ ತಿಳಿಸಿದ್ದರು.

ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ನಡುವೆ ಬಂಗಾರದ ಬೆಲೆಯಲ್ಲಿ ಏರಿಳಿತ ಕಂಡಿದೆ. ಡಾಲರ್​ ಸೂಚ್ಯಂಕಗಳು ಕೂಡ 3 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಚಿನ್ನ- ಬೆಳ್ಳಿ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ: ಲಕ್ಷದ ಹತ್ತಿರ ಬಂದೇ ಬಿಟ್ಟಿತು ಹಳದಿ ಲೋಹದ ದರ; ಬೆಂಗಳೂರಲ್ಲಿ ಇಷ್ಟಿದೆ ಬೆಲೆ!

ಇದನ್ನೂ ಓದಿ: ಮಾರುಕಟ್ಟೆಯಲ್ಲಿವೆ ಒರಿಜಿನಲ್​ನಂತೆಯೇ ಕಾಣುವ ನಕಲಿ ನೋಟುಗಳು: ಫೇಕ್​ ಪತ್ತೆಗೆ ಈ ವ್ಯತ್ಯಾಸ ಗಮನಿಸಿದ್ರೆ ಸಾಕು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.