ಹೈದರಾಬಾದ್: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರುತ್ತಿದೆ. ಮಂಗಳವಾರ 10 ಗ್ರಾಂ ಚಿನ್ನದ ಬೆಲೆ 1,00,230 ರೂ. ಇತ್ತು. ಬುಧವಾರ 70 ರೂ. ಹೆಚ್ಚಾಗಿ 1,00,300 ರೂ.ಗೆ ತಲುಪಿದೆ.
ಮತ್ತೊಂದು ಕಡೆ ಮಂಗಳವಾರ ಒಂದು ಕಿಲೋ ಬೆಳ್ಳಿ ಬೆಲೆ 1,02,597 ರೂ. ಇದ್ದದ್ದು, ಬುಧವಾರ 1,393 ರೂ. ಹೆಚ್ಚಾಗಿ 1,03,990 ರೂ. ತಲುಪಿದೆ.
ಬೆಂಗಳೂರಿನಲ್ಲಿ ಎಷ್ಟಿದೆ ಬೆಲೆ?:
- ಬೆಂಗಳೂರಿನಲ್ಲಿ 99.9 ಫೂರಿಟಿಯ 10 ಗ್ರಾಂ ಚಿನ್ನದ ನಾಣ್ಯದ ಬೆಲೆ 1 ಲಕ್ಷ ರೂ ಗೆ ಏರಿಕೆ ಆಗಿದೆ.
- 24 ಕ್ಯಾರೆಟ್ ನ 10 ಗ್ರಾಂ ಬಂಗಾರದ ಬೆಲೆಯಲ್ಲಿ ಬುಧವಾರ 110 ರೂ ಏರಿಕೆ ಆಗಿ 99170 ರೂ ಆಗಿದೆ.
- 22 ಕ್ಯಾರೆಟ್ ನ ಆಭರಣ ಚಿನ್ನದ ಬೆಲೆ 100 ಏರಿಕೆ ಕಾಣುವ ಮೂಲಕ ಇಂದು 90900 ರೂ ತಲುಪಿದೆ.
- 18K Gold 10 ಗ್ರಾಂಗೆ 80 ಏರಿಕೆ ಕಾಣುವ ಮೂಲಕ 74380 ರೂ ಇದೆ.
ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 1,00,300 ರೂ. ತಲುಪಿದೆ. ಒಂದು ಕಿಲೋ ಬೆಳ್ಳಿಯ ಬೆಲೆ 1,03,990 ರೂ. ಆಗಿದೆ,
ಗಮನಿಸಿ: ಮೇಲಿನ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಇದ್ದ ಬೆಲೆಯಾಗಿದೆ , ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಬದಲಾವಣೆ ಆಗುತ್ತದೆ ಎಂಬುದನ್ನು ಗಮನಿಸಬೇಕಾಗಿದೆ.
ಸ್ಪಾಟ್ ಚಿನ್ನದ ಬೆಲೆ?: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರಗಳು ಸ್ವಲ್ಪ ಕಡಿಮೆಯಾಗಿದೆ. ಮಂಗಳವಾರ, ಒಂದು ಔನ್ಸ್ ಚಿನ್ನದ ಬೆಲೆ $ 3,362 ಆಗಿತ್ತು. ಆದರೆ, ಬುಧವಾರ ಅದು $ 2 ರಷ್ಟು ಕಡಿಮೆಯಾಗಿ $ 3,360 ಕ್ಕೆ ತಲುಪಿದೆ. ಪ್ರಸ್ತುತ ಒಂದು ಔನ್ಸ್ ಬೆಳ್ಳಿಯ ಬೆಲೆ $ 34.50.
ಯಾಕಾಗಿ ಈ ಏರಿಕೆ: ರಷ್ಯಾ-ಉಕ್ರೇನ್ ನಡುವೆ ಯುದ್ಧ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ. ಮತ್ತೊಂದು ಕಡೆ ಮಧ್ಯಪ್ರಾಚ್ಯದಲ್ಲಿನ ಸಂಘರ್ಷಗಳು ಸಹ ಚಿನ್ನದ ಬೆಲೆಗಳು ಹೆಚ್ಚಲು ಕಾರಣ ಎಂದು ಚೀನಿವಾರು ಪೇಟೆಯ ತಜ್ಞರು ಹೇಳಿದ್ದಾರೆ.