ETV Bharat / business

ಅಮೆರಿಕದ ಸರಕುಗಳ ಮೇಲೆ 125ರಷ್ಟು ಪ್ರತಿಸುಂಕ: ನಾಳೆಯಿಂದಲೇ ಜಾರಿ, ನಾವು ಬಗ್ಗಲ್ಲ- ಜಗ್ಗಲ್ಲ ಎಂದ ಚೀನಾ - CHINA RAISES TARIFFS

ಚೀನಾ ವಸ್ತುಗಳ ಮೇಲೆ ಅಮೆರಿಕ ಶೇ 125ರಷ್ಟು ಸುಂಕ ವಿಧಿಸಿರುವುದಕ್ಕೆ ಪ್ರತಿಯಾಗಿ ಚೀನಾ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇ 84ರಿಂದ ಶೇ 125ಕ್ಕೆ ಏರಿಸುವುದಾಗಿ ಘೋಷಿಸಿದೆ.

China Announces Countermeasures Tariffs
ಅಮೆರಿಕದ ಸರಕುಗಳ ಮೇಲೆ 125ರಷ್ಟು ಪ್ರತಿಸುಂಕ: ನಾಳೆಯಿಂದಲೇ ಸುಂಕ ಜಾರಿ ಎಂದು ಚೀನಾ ಘೋಷಣೆ (ANI)
author img

By ETV Bharat Karnataka Team

Published : April 11, 2025 at 7:18 PM IST

2 Min Read

ಬೀಜಿಂಗ್, ಚೀನಾ: ಶನಿವಾರದಿಂದ ಚೀನಾ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇ 84 ರಿಂದ ಶೇ 125 ಕ್ಕೆ ಹೆಚ್ಚಿಸುವ ಮೂಲಕ ಪ್ರತೀಕಾರದ ಕ್ರಮಗಳನ್ನು ಘೋಷಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತರ ದೇಶಗಳ ಮೇಲೆ ಹೇರಿದ್ದ ಸುಂಕಗಳಿಗೆ 90 ದಿನಗಳ ವಿರಾಮ ಘೋಷಣೆ ಮಾಡಿದ್ದಾರೆ. ಆದರೆ ಚೀನಾ ಮೇಲಿನ ಸುಂಕ ಈಗಾಗಲೇ ಜಾರಿಯಲ್ಲಿದೆ. ಹೀಗಾಗಿ ಚೀನಾ ಕೂಡಾ ಅಮೆರಿಕದ ವಸ್ತುಗಳ ಮೇಲೆ ಶೇ 125 ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದೆ. ಈ ಘೋಷಣೆ ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ಚೀನಾ ಹೇಳಿದೆ. ಈ ಮೂಲಕ ಅಮೆರಿಕ ಮತ್ತು ಚೀನಾ ನಡುವೆ ವ್ಯಾಪಾರ ಯುದ್ಧ ಆರಂಭವಾಗಿದೆ.

ಟ್ರಂಪ್‌ ಅವರ ಕ್ರಮಗಳನ್ನು "ಆರ್ಥಿಕ ಬೆದರಿಸುವಿಕೆ" ಎಂದು ಕರೆದಿರುವ ಚೀನಾ ಇದಕ್ಕೆ ತಾನು ಹೆದರುವುದಿಲ್ಲ ಎಂದು ಹೇಳಿದ್ದು, ಚೀನಾ ತನ್ನದೇ ಆದ ಪ್ರತಿಕ್ರಮಗಳೊಂದಿಗೆ ಅಮೆರಿಕದ ಸುಂಕಗಳ ವಿರುದ್ಧ ಹೋರಾಡುವುದಾಗಿ ಪ್ರಕಟಿಸಿದೆ.

ಟ್ರಂಪ್​ ಅವರ ಟಾರಿಫ್​ ಘೋಷಣೆಯಿಂದ ವಿಶ್ವದ ಹಾಗೂ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲಗಳೇ ಸೃಷ್ಟಿಯಾಗಿದ್ದವು. ಆ ಬಳಿಕ ಯುಎಸ್​ ಅಧ್ಯಕ್ಷ ಟ್ರಂಪ್​​​​​​​​​ ಗುರುವಾರ ಚೀನಾ ಹೊರತುಪಡಿಸಿ ಎಲ್ಲ ರಾಷ್ಟ್ರಗಳ ಮೇಲೆ ಹಾಕಿದ್ದ ರೆಸಿಪ್ರೋಕಲ್​ ತೆರಿಗೆಯನ್ನು 3 ತಿಂಗಳ ಕಾಲ ತಡೆ ಹಿಡಿಯುವುದಾಗಿ ಘೋಷಿಸಿದ್ದರು. ಇದು ಅಲ್ಲಿನ ಷೇರು ಮಾರುಕಟ್ಟೆಗಳ ಐತಿಹಾಸಿಕ ಏರಿಕೆಗೆ ಕಾರಣವಾಗಿತ್ತು.

ಅಮೆರಿಕದ ಯಾವುದೇ ಕ್ರಮ ಎದುರಿಸಲು ನಾವು ಸಿದ್ಧ ಎಂದು ಘೋಷಿಸಿದ ಚೀನಾ: ಇನ್ನೊಂದು ಕಡೆ ಅಮೆರಿಕ ಚೀನಾದ ಮೇಲೆ ಅಸಹಜವಾಗಿ ಹೆಚ್ಚಿನ ಸುಂಕಗಳನ್ನು ಹೆಚ್ಚಿಸುವುದು ಸಂಖ್ಯೆಗಳ ಆಟವಾಗಿ ಮಾರ್ಪಟ್ಟಿದೆ. ಇದು ಪ್ರಾಯೋಗಿಕ ಆರ್ಥಿಕ ಪ್ರಾಮುಖ್ಯತೆಯನ್ನು ಹೊಂದಿಲ್ಲ ಹಾಗೂ ವಿಶ್ವ ಆರ್ಥಿಕತೆಯ ಇತಿಹಾಸದಲ್ಲಿ ಒಂದು ಜೋಕ್ ಆಗುತ್ತದೆ ಎಂದು ಚೀನಾ ಹಣಕಾಸು ಸಚಿವಾಲಯದ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದಾಗ್ಯೂ ಚೀನಾದ ಹಿತಾಸಕ್ತಿಗಳ ವಿರುದ್ಧ ಅಮೆರಿಕ ತನ್ನ ಕ್ರಮಗಳನ್ನು ಮುಂದುವರೆಸಿದರೆ, ಅದನ್ನು ಚೀನಾ ದೃಢವಾಗಿ ಎದುರಿಸುತ್ತದೆ ಮತ್ತು ಕೊನೆಯವರೆಗೂ ಹೋರಾಡುತ್ತದೆ ಎಂದು ಚೀನಾ ವಕ್ತಾರರು ಇದೇ ವೇಳೆ ಘೋಷಿಸಿದ್ದಾರೆ.

ಯುಎಸ್​ ಸುಂಕ ಹೇರಿಕೆ ಪ್ರಶ್ನಿಸುವುದಾಗಿ ಹೇಳಿದ ಡ್ರ್ಯಾಗನ್​: ಅಮೆರಿಕ ಹೇರಿರುವ ಸುಂಕಗಳ ವಿರುದ್ಧ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಮತ್ತೊಂದು ಮೊಕದ್ದಮೆ ಹೂಡುವುದಾಗಿಯೂ ಚೀನಾದ ವಾಣಿಜ್ಯ ಸಚಿವಾಲಯ ಹೇಳಿದೆ.

ಬೀಜಿಂಗ್ ಕಳೆದ ವಾರ ಕೆಲವು ಅಮೇರಿಕನ್ ಕಂಪನಿಗಳಿಂದ ಸೋರ್ಗಮ್, ಕೋಳಿ ಮತ್ತು ಎಲುಬಿನ ಆಮದುಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಭೂಮಿಯೊಳಗಿನ ಅಪರೂಪದ ಖನಿಜಗಳ ಮೇಲೆ ಹೆಚ್ಚಿನ ರಫ್ತು ನಿಯಂತ್ರಣಗಳನ್ನು ಹಾಕಿದೆ.

ಈ ನಡುವೆ ರಾಷ್ಟ್ರಗಳ ನಡುವಣ ವ್ಯಾಪಾರ ಯುದ್ಧ ಆರ್ಥಿಕ ಹಿಂಜರಿತವನ್ನುಂಟು ಮಾಡುತ್ತದೆ ಎಂದು ವಿಶ್ವ ಆರ್ಥಿಕ ಸಂಸ್ಥೆ ಡಬ್ಲ್ಯೂಟಿಒ ಕಳವಳ ವ್ಯಕ್ತಪಡಿಸಿದೆ.

ಇದನ್ನು ಓದಿ: ಭಾರತದ ಮೇಲೆ ಹೇರಿದ್ದ ಶೇ.26ರಷ್ಟು ಸುಂಕ ಜುಲೈ 9ರವರೆಗೆ ತಡೆಹಿಡಿದ ಅಮೆರಿಕ

ಹಡ್ಸನ್ ನದಿಯಲ್ಲಿ ಪ್ರವಾಸಿಗರಿದ್ದ ಹೆಲಿಕಾಪ್ಟರ್ ಪತನ: ಮೂವರು ಮಕ್ಕಳು ಸೇರಿ 6 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.