ETV Bharat / bharat

ವಿಶ್ವ ಜೈವಿಕ ಇಂಧನ ದಿನ: ಸಾಂಪ್ರದಾಯಿಕ ಪಳಿಯುಳಿಕೆ ಇಂಧನದಿಂದ ಸುಸ್ಥಿರ ಪರಿಸರ - World Biofuel Day Highlights

author img

By ETV Bharat Karnataka Team

Published : Aug 10, 2024, 3:21 PM IST

Updated : Aug 10, 2024, 3:35 PM IST

ಜೈವಿಕ ಇಂಧನಗಳು ಕೇವಲ ಶುದ್ಧ ಪರಿಸರಕ್ಕೆ ಮಾತ್ರವಲ್ಲ, ಬದಲಾಗಿ ಸುಸ್ಥಿರ ತಂತ್ರಜ್ಞಾನದ ಅಳವಡಿಕೆ ಉತ್ತೇಜನ ನೀಡುತ್ತದೆ.

world-biofuel-day-highlights-sustainable-alternative-to-conventional-fossil-fuels
ಸಾಂದರ್ಭಿಕ ಚಿತ್ರ (GETTY IMAGE)

ನವದೆಹಲಿ: ಕೃಷಿ ತ್ಯಾಜ್ಯ, ಪ್ರಾಣಿ ತ್ಯಾಜ್ಯ, ಬೆಳೆಗಳು ಮತ್ತು ಹುಲ್ಲುಗಳಂತಹ ಜೈವಿಕ ಉತ್ಪಾದನೆಗಳ ಜೈವಿಕ ಅನಿಲಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆಗಸ್ಟ್​ 10ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಹಸಿರು ಮನೆ ಅನಿಲದ ತಗ್ಗುವಿಕೆಗೆ ಸಹಾಯ ಮಾಡಿ ಸುಸ್ಥಿರ ಜೈವಿಕ ಇಂಧನದಿಂದ ಸಾಂಪ್ರದಾಯಿಕ ಪಳಿಯುಳಿಕೆ ಇಂಧನ ಪ್ರಾಮುಖ್ಯತೆ ನೀಡಿ, ಗ್ರಾಮೀಣ ಅಭಿವೃದ್ಧಿಗೆ ಬೆಂಬಲ ನೀಡುವುದು.

ಜೈವಿಕ ಇಂಧನ: ಜೈವಿಕ ಇಂಧನ ಎಂಬುದು ಸಸ್ಯ ಮತ್ತು ಪ್ರಾಣಿಗಳಿಂದ ನವೀಕರಿಸಬಹುದಾದ ಶಕ್ತಿ ಮೂಲವಾಗಿದೆ. ಇವುಗಳನ್ನು ಪೆಟ್ರೋಲ್​ ಮತ್ತು ಡಿಸೇಲ್​ ನಂತೆಯೇ ಸಾಂಪ್ರದಾಯಿಕ ಪಳಿಯುಳಿಕೆ ಇಂಧನವಾಗಿ ವಿನ್ಯಾಸ ಮಾಡಲಾಗಿದೆ. ಎಥೆನಾಲ್​, ಬಯೋಡಿಸೇಲ್​ ಮತ್ತು ಬಯೋಗ್ಯಾಸ್​ನಂತಹ ವಿವಿಧ ಬಗೆಯ ಜೈವಿಕ ಇಂಧನಗಳಿವೆ. ಜೈವಿಕ ಇಂಧನಗಳು ಕಡಿಮೆ ಹಸಿರುಮನೆ ಅನಿಲ ಹೊರಸೂಸುವಿಕೆ, ಅನಿಲ ಆಮದು ಮೇಲಿನ ಅವಲಂಬನೆ ಮತ್ತು ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಉತ್ತೇಜನದಂತಹ ಅನೇಕ ಪ್ರಯೋಜನವನ್ನು ಹೊಂದಿದೆ.

ಇತಿಹಾಸ ಪ್ರಾಮುಖ್ಯತೆ: 1893ರಲ್ಲಿ ಜರ್ಮನ್​ ಅವಿಷ್ಕಾರಕ ಸರ್​ ರುಡಲ್ಫ್​ ಡಿಸೇಲ್​ ಕಡಲೆಬೀಜದ ಎಣ್ಣೆಯಲ್ಲಿ ಯಶಸ್ವಿಯಾಗಿ ಡಿಸೇಲ್​ ಇಂಜಿನ್​ ಚಾಲನೆ ಮಾಡಿದರು. ಈ ಅವಿಷ್ಕಾರದ ಹಿನ್ನೆಲೆ ಆಗಸ್ಟ್​ 10ನ್ನು ವಿಶ್ವ ಜೈವಿಕ ಇಂಧನ ದಿನವಾಗಿ ಆಚರಿಸಲಾಗುತ್ತಿದೆ. ಈ ಅವಿಷ್ಕಾರವು ಪಳಿಯುಳಿಕೆ ಇಂಧನಕ್ಕೆ ಸುರಕ್ಷಿತ ಸೃಷ್ಟಿ, ನವೀಕರಣ ಮತ್ತು ಸುಸ್ಥಿರ ಪರ್ಯಾಯ ಮಾರ್ಗವನ್ನು ತೆರೆಯಿತು.

ಭಾರತದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯ 2015ರಿಂದ ವಿಶ್ವ ಜೈವಿಕ ಇಂಧನ ದಿನವಾಗಿ ಆಚರಣೆಗೆ ಮುಂದಾಗಯಿತು. ಬಯೋಡಿಸೇಲ್​, ಬಯೋಎಥೆನಾಲ್​ ಮತ್ತು ಬಯೋ ಸಿಎನ್​ಜಿಗಳನ್ನು ಭಾರತದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.

ಹವಾಮಾನ ಬದಲಾವಣೆ ಹೆಚ್ಚಾಗುತ್ತಿದ್ದಂತೆ ಜಗತ್ತು ಶಕ್ತಿ ಉಳಿಸುವಿಕೆಯ ಮಾದರಿಯತ್ತ ಹೊರಳಿತು. ಜೈವಿಕ ಇಂಧನಗಳು ಕೇವಲ ಶುದ್ಧ ಪರಿಸರಕ್ಕೆ ಮಾತ್ರವಲ್ಲ, ಬದಲಾಗಿ ಸುಸ್ಥಿರ ತಂತ್ರಜ್ಞಾನದ ಅಳವಡಿಕೆಗೆ ಉತ್ತೇಜನ ನೀಡುತ್ತದೆ. ಇದು ಪರಿಸರದ ಮೇಲೆ ಅಡ್ಡ ಪರಿಣಾಮವನ್ನು ಕಡಿಮೆ ಮಾಡುತ್ತದೆ.

2024ರ ಧ್ಯೇಯವಾಕ್ಯ: ವಿಶ್ವ ಜೈವಿಕ ಇಂಧನ 2024ರ ಘೋಷವಾಕ್ಯ 'ಸುಸ್ಥಿರ ಜೈವಿಕ ಇಂಧನ: ಹಸಿರು ಭವಿಷ್ಯಕ್ಕೆ ನಾಂದಿ' ಆಗಿದೆ. ಇದು ದೀರ್ಘಾವಧಿಯಲ್ಲಿ ಪರಿಸರ ಪ್ರಯೋಜನಕ್ಕೆ ಕಾರಣವಾಗುವ ಜೈವಿಕ ಇಂಧನದ ಬಳಕೆ ಮತ್ತು ಅಭಿವೃದ್ಧಿಯ ಮಹತ್ವವನ್ನು ಸಾರುತ್ತದೆ. ಹಾಗೇ ತಂತ್ರಜ್ಞಾನದಲ್ಲಿ ಜೈವಿಕ ಇಂಧನದ ಉತ್ಪಾದನೆ ಅವಿಷ್ಕಾರದ ಅಗತ್ಯತೆ ಮತ್ತು ವಿಶಾಲವ್ಯಾಪ್ತಿಯ ಅಳವಡಿಕೆ ನೀತಿಗಳನ್ನ ಉತ್ತೇಜಿಸುತ್ತದೆ.

ಭಾರತದ ದೃಷ್ಟಿ: ಪಳಿಯುಳಿಕೆ ಇಂಧನ ಬಳಕೆಯೊಂದಿಗೆ ಆಮದಿನ ಮೇಲಿನ ಅವಲಂಬನೆ ತಗ್ಗಿಸುವ ಗುರಿ ಜೊತೆಗೆ ದೇಶದಲ್ಲಿನ ಶಕ್ತಿ ಭದ್ರತೆಯನ್ನು ಸಾಧಿಸಲು ಸರ್ಕಾರ ಒತ್ತು ನೀಡುತ್ತದೆ. ಪರಿಸರ ಮಾಲಿನ್ಯದಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪರ್ಯಾಯ ಇಂಧನಗಳು ಪ್ರಯೋಜನಕಾರಿಯಾಗಿದೆ. ಈ ಜೈವಿಕ ಇಂಧನವೂ ಕೃಷಿ ಮತ್ತು ಅರಣ್ಯದ ತ್ಯಾಜ್ಯ, ಮುನ್ಸಿಪಲ್ ಘನ ತ್ಯಾಜ್ಯ, ಹಸುವಿನ ತ್ಯಾಜ್ಯಗಳ ಮುಂತಾದವುಗಳನ್ನು ಜೈವಿಕ ಇಂಧನವಾಗಿ ಪರಿವರ್ತಿಸಬಹುದಾಗಿದೆ.

ಸರ್ಕಾರವು ಕಚ್ಚಾ ಇಂಧನದ ಆಮದಿನ ಅವಲಂಬನೆ ತಗ್ಗಿಸುವಲ್ಲಿ ಬದ್ಧವಾಗಿದ್ದು, ವಿದೇಶಿ ವಿನಿಮಯ ಉಳಿತಾಯ ಸಾಧನೆ ಮಾಡಿ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಗುರಿಯನ್ನು ಹೊಂದಿದ್ದು, ತ್ಯಾಜ್ಯ ಮತ್ತು ದಹಿಸುವಿಕೆಯ ಪಳೆಯುಳಿಕೆ ಇಂಧನದ ಮೂಲಕ ಪರಿಸರ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಿದೆ. ಈ ಮೂಲಕ ತ್ಯಾಜ್ಯ ನಿರ್ವಹಣೆ, ಕೃಷಿ ತ್ಯಾಜ್ಯ ನಿರ್ವಹಣೆ ನಡೆಸಿ ಸ್ವಚ್ಛ ಭಾರತದ ಅಭಿಯಾನವನ್ನು ಮೇಕ್​ ಇನ್​ ಇಂಡಿಯಾ ಅಭಿಯಾನದಲ್ಲಿ ಉತ್ತೇಜಿಸುತ್ತಿದೆ.

ಭಾರತವು ಇದೀಗ ವಿಶ್ವದ ಮೂರನೇ ಅತಿದೊಡ್ಡ ಗ್ರಾಹಕ ಮತ್ತು ಎಥೆನಾಲ್​​ ಬಳಸುವ ದೇಶವಾಗಿದೆ. 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ, ಜೈವಿಕ ಇಂಧನ ರಾಷ್ಟ್ರೀಯ ನೀತಿಯನ್ನು ಬಿಡುಗಡೆ ಮಾಡಿದ್ದರು. 2023ರ ನವೆಂಬರ್​ 30 ಭಾರತದ ಎಥೆನಾಲ್​​ ಉತ್ಪಾದನೆ ಸಾಮರ್ಥ್ಯವು ಅಂದಾಜು 1,380 ಕೋಟಿ ಲೀಟರ್​ ಇತ್ತು. ಇದರಲ್ಲಿ 875 ಕೋಟಿ ಕಾಕಂಬಿ, 505 ಕೋಟಿ ಲೀಟರ್​ ಧಾನ್ಯಗಳಿಂದ ಸಂಗ್ರಹವಾಗಿದೆ. ಸರ್ಕಾರವು ಪ್ರಧಾನಮಂತ್ರಿ ಜೀ-ವನ್​ ಯೋಜನಾ ಮೂಲಕ 2ಜಿ ಎಥೆನಾಲ್​ ಸಾಮರ್ಥ್ಯ ಸೃಷ್ಟಿಗೆ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸಿದೆ.

ಇದನ್ನೂ ಓದಿ: ಜಿ20 ಶೃಂಗಸಭೆ: ಪರಿಸರ ಸ್ನೇಹಿ ಜೈವಿಕ ಇಂಧನ ಜಾಗತಿಕ ಮೈತ್ರಿಕೂಟ ರಚನೆಗೆ ಭಾರತ ಪ್ರಸ್ತಾಪ

Last Updated : Aug 10, 2024, 3:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.