ETV Bharat / bharat

ಮಹಿಳಾ ಅಧಿಕಾರಿಗೆ ನಿಂದಿಸಿದ ಆರೋಪ: ಪಶ್ಚಿಮ ಬಂಗಾಳ ಸಚಿವ ಅಖಿಲ್ ಗಿರಿ ರಾಜೀನಾಮೆ - Bengal Minister Resigns

author img

By PTI

Published : Aug 5, 2024, 2:32 PM IST

ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿರುವ ಆರೋಪ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಸಚಿವ ಅಖಿಲ್ ಗಿರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಶ್ಚಿಮ ಬಂಗಾಳ ಸಚಿವ ಅಖಿಲ್ ಗಿರಿ
ಪಶ್ಚಿಮ ಬಂಗಾಳ ಸಚಿವ ಅಖಿಲ್ ಗಿರಿ (IANS)

ಕೋಲ್ಕತಾ : ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪಶ್ಚಿಮ ಬಂಗಾಳದ ಬಂದೀಖಾನೆ ಸಚಿವ ಅಖಿಲ್ ಗಿರಿ ಸೋಮವಾರ ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿರುವುದಾಗಿ ಹೇಳಿದ್ದಾರೆ. ಸಚಿವ ಸ್ಥಾನದಿಂದ ಕೆಳಗಿಳಿಯುವಂತೆ ಮತ್ತು ಕ್ಷಮೆಯಾಚಿಸುವಂತೆ ತೃಣಮೂಲ ಕಾಂಗ್ರೆಸ್ ನಾಯಕತ್ವವು ನಿನ್ನೆ ಅವರಿಗೆ ಸೂಚಿಸಿತ್ತು.

ಆದರೆ ಯಾವುದೇ ಅಧಿಕಾರಿಯ ಬಳಿ ತಾನು ಕ್ಷಮೆಯಾಚಿಸುವುದಿಲ್ಲ, ಬದಲಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕ್ಷಮೆಯಾಚಿಸುತ್ತೇನೆ ಎಂದು ರಾಮನಗರದ ಟಿಎಂಸಿ ಶಾಸಕ ಅಖಿಲ್ ಗಿರಿ ಹೇಳಿದರು.

"ನಾನು ನನ್ನ ರಾಜೀನಾಮೆಯನ್ನು ಮುಖ್ಯ ಕಾರ್ಯದರ್ಶಿಯವರ ಮೂಲಕ ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಿದ್ದೇನೆ. ಆದರೆ ನಾನು ಯಾವುದೇ ಅಧಿಕಾರಿಗೆ ಕ್ಷಮೆಯಾಚಿಸುವುದಿಲ್ಲ. ನಾನು ಮುಖ್ಯಮಂತ್ರಿಗೆ ಕ್ಷಮೆಯಾಚಿಸುತ್ತೇನೆ" ಎಂದು ನಗರದ ದಕ್ಷಿಣ ಭಾಗದಲ್ಲಿರುವ ಶಾಸಕರ ಭವನದಿಂದ ಹೊರಡುವಾಗ ಗಿರಿ ಸುದ್ದಿಗಾರರಿಗೆ ತಿಳಿಸಿದರು.

"ಜನರ ಕಷ್ಟಗಳನ್ನು ನೋಡಿದ ನಂತರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಅವರನ್ನು ಹೇಗೆ ಹಿಂಸಿಸುತ್ತಿದ್ದಾರೆ ಎಂಬುದನ್ನು ನೋಡಿದಾಗ ನಾನು ಆ ದಿನ ತಾಳ್ಮೆ ಕಳೆದುಕೊಂಡಿದ್ದೆ. ಒಂದು ನಿರ್ದಿಷ್ಟ ಪದ ಬಳಸಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ. ಅದರ ಹೊರತಾಗಿ ನನ್ನ ಬೇರೆ ಯಾವ ಮಾತಿಗೂ ಕ್ಷಮೆ ಯಾಚಿಸುತ್ತಿಲ್ಲ. ನಾನು ಏನೇ ಮಾಡಿದರೂ ಅದು ಜನರ ಒಳ್ಳೆಯದಕ್ಕಾಗಿಯೇ" ಎಂದು ಗಿರಿ ಹೇಳಿದರು.

ಪುರ್ಬಾ ಮೇದಿನಿಪುರ ಜಿಲ್ಲೆಯ ತಾಜ್ ಪುರ್ ಸಮುದ್ರ ದಂಡೆಯ ಬಳಿ ಇರುವ ಅರಣ್ಯ ಇಲಾಖೆಯ ಜಾಗದಲ್ಲಿ ಅಂಗಡಿಗಳನ್ನು ಪ್ರಾರಂಭಿಸಲು ಸಣ್ಣ ಪುಟ್ಟ ವ್ಯಾಪಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಶಾಸಕ ಗಿರಿ ಇದೇ ಸಂದರ್ಭದಲ್ಲಿ ಆರೋಪಿಸಿದರು.

1998 ರಲ್ಲಿ ಟಿಎಂಸಿ ಸ್ಥಾಪನೆಯಾದಾಗಿನಿಂದಲೂ ಪಕ್ಷದೊಂದಿಗೆ ಇರುವ ಗಿರಿ, ತಾವು ತಾಳ್ಮೆ ಕಳೆದುಕೊಳ್ಳಲು ಕಾರಣವಾದ ಘಟನೆಗಳ ಬಗ್ಗೆ ಸಿಎಂಗೆ ವಿವರವಾಗಿ ಬರೆಯುವುದಾಗಿ ಪತ್ರ ಹೇಳಿದರು. ಬಿಜೆಪಿ ಸೇರುವಿರಾ ಎಂದು ಕೇಳಿದಾಗ "ನನ್ನ ಅಧಿಕಾರಾವಧಿ 2026 ರವರೆಗೆ ಇದೆ. ಅಲ್ಲಿಯವರೆಗೂ ನನ್ನ ಪಕ್ಷದ ಅಗತ್ಯಕ್ಕೆ ಅನುಗುಣವಾಗಿ ಶಾಸಕನಾಗಿ ಕೆಲಸ ಮಾಡುತ್ತೇನೆ." ಎಂದರು.

ಭಾನುವಾರ ಗಿರಿ ಕೆಲ ಸ್ಥಳೀಯರೊಂದಿಗೆ ಸೇರಿಕೊಂಡು ಫಾರೆಸ್ಟ್​ ರೇಂಜರ್​ ಮನಿಷಾ ಸಾಹು ಅವರಿಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದರು. ಅಲ್ಲದೆ ಅವರನ್ನು ನೌಕರಿಯಿಂದ ತೆಗೆದು ಹಾಕುವುದಾಗಿಯೂ ಸಚಿವರು ಹೇಳಿದ್ದರು. ಈ ವೀಡಿಯೊ ವೈರಲ್ ಆಗಿತ್ತು. ತಾಜ್​ಪುರ್​ ಬೀಚ್ ಬಳಿಯ ಅರಣ್ಯ ಇಲಾಖೆ ಭೂಮಿಯಲ್ಲಿ ನಿರ್ಮಾಣವಾಗಿದ್ದ ಅತಿಕ್ರಮಣಗಳನ್ನು ತೆಗೆದು ಹಾಕಿದ್ದಕ್ಕಾಗಿ ಸಚಿವರು ಸ್ಥಳೀಯರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಆರೋಗ್ಯ ವಿಮೆಯ ಜಿಎಸ್​ಟಿ ಕಡಿಮೆ ಮಾಡಿ: ಟಿಎಂಸಿ ಮುಖಂಡ ಒ'ಬ್ರಿಯಾನ್ ಒತ್ತಾಯ - GST on health insurance

ETV Bharat Logo

Copyright © 2024 Ushodaya Enterprises Pvt. Ltd., All Rights Reserved.