ನಿಜಾಮಾಬಾದ್: ಹೇಳಿಕೊಟ್ಟ ಪದಗಳನ್ನೇ ಮತ್ತೆ ಹೇಳಿ ಎಂದಾಗ ಕಷ್ಟಪಟ್ಟು ತೊದಲು ನುಡಿಯಾಡುವ ಮಕ್ಕಳ ಮಧ್ಯೆ ಮೂರುವರೆ ವರ್ಷದ ಪೋರ ವಿರಾಜ್ ಇದೀಗ ಗಮನ ಸೆಳೆದಿದ್ದಾನೆ. ಕಾರಣ ಆತನ ಸ್ಮರಣಾ ಶಕ್ತಿ. ನೋಡುಗರನ್ನು ಬೆರಗಾಗುವಂತೆ ಸಂಸ್ಕೃತ ಶ್ಲೋಕ, ಇಂಗ್ಲಿಷ್ ಪದ್ಯ ಅಥವಾ ಸಾಮಾನ್ಯ ಜ್ಞಾನದ ಪ್ರಶ್ನೆಗೆ ಪಟ್ ಅಂತಾ ಉತ್ತರ ನೀಡುತ್ತಾನೆ. ಇದೇ ಸಾಮರ್ಥ್ಯದ ಫಲವಾಗಿ ಕಳೆದ ಐದು ತಿಂಗಳಲ್ಲೇ ಹಲವು ಪ್ರಶಸ್ತಿಗಳು ಈತನನ್ನು ಹುಡುಕಿಕೊಂಡು ಬಂದಿವೆ.
2021ರ ಸೆಪ್ಟೆಂಬರ್ 7ರಂದು ಹುಟ್ಟಿದ ವಿರಾಜ್ ತಂದೆ ಶ್ರೀಧರ್ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆದರೆ, ಯಾತಿ ಶ್ರಾವಣಿ (ಖಾಸಗಿ ಶಾಲಾ ಶಿಕ್ಷಕರು) ನಿಜಾಮಾಬಾದ್ನ ಹೃದಯಭಾಗವಾಗಿರುವ ಭವಾನಿ ನಗರ್ ಕಾಲೋನಿಯಲ್ಲಿರುವ ವಿರಾಜ್ನ ಪ್ರತಿಭೆ, ಕಲಿಕಾ ಕೌಶಲ್ಯ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.
ಒಮ್ಮೆ ಹೇಳಿದ್ದನ್ನು ಮರೆಯದಂತೆ ನೆನಪಿನಲ್ಲಿಡುವ ಸ್ಮರಣಾಶಕ್ತಿ ಕಂಡು ಪೋಷಕರು ಕೂಡ ಬೆರಗಾದರು. ಈತನ ಈ ಸಾಮರ್ಥ್ಯಕ್ಕೆ ಅನುಗುಣವಾಗಿ ಪದ್ಯ, ಕಥೆ ಮತ್ತು ಪದಗಳನ್ನು ಹೇಳಿಕೊಡಲು ಶುರು ಮಾಡಿದರು. ಹೇಳಿಕೊಟ್ಟಿದ್ದನ್ನು ಚಾಚು ತಪ್ಪದೇ ಒಪ್ಪಿಸುವ ವಿರಾಜ್ ಅದನ್ನು ಮರೆಯುವುದೇ ಕಡಿಮೆ. ಈತನ ಸಾಮರ್ಥ್ಯವನ್ನು ಪ್ರೋತ್ಸಾಹಿಸಲು ಅನೇಕ ಸಂಸ್ಥೆಗಳು ಬಾಲಕನ ಕೌಶಲ್ಯ ಪರೀಕ್ಷಿಸಿ, ಪ್ರಶಸ್ತಿಯನ್ನು ಸಹ ನೀಡಿವೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ: ವಿರಾಜ್ ಅದ್ಭುತ ನೆನಪಿನ ಶಕ್ತಿಯನ್ನು ಮೂರು ವರ್ಷ 2ತಿಂಗಳಿದ್ದಾಗ ಪರೀಕ್ಷಿಸಲಾಗಿದ್ದು, ಪರಿಣಾವಾಗಿ ಈತ ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದ್ದಾನೆ.
ಈ ವೇಳೆ ಈತ 16 ಸಂಸ್ಕೃತ ಶ್ಲೋಕ, 14 ಇಂಗ್ಲಿಷ್ ಪದ್ಯ, 20 ಆಂಗ್ಲ ಪದ, 15 ಪಕ್ಷಿಗಳ ಹೆಸರು, 24 ತರಕಾರಿ, 20 ಬಗೆಯ ವಾಹನ, ಮಾನವ ದೇಹದ ಭಾಗ, ತಿಂಗಳು, ವಾರದ ದಿನಗಳನ್ನು ಪಟಪಟನೇ ಹೇಳಿರುವುದು ಎಲ್ಲರನ್ನು ಆಶ್ಚರ್ಯಚಕಿತವಾಗಿ ಮಾಡಿದೆ. ಈತನ ಈ ಕೌಶಲ್ಯಕ್ಕೆ ಬೆರಗಾದ ಜನ ಈತನ ಹೆಸರನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ಸೇರಿಸಲು ಸಹಕರಿಸಿದರು.
ವಿರಾಜ್ ಪ್ರತಿಭೆ ಇಲ್ಲಿಗೆ ಮುಗಿಯಲಿಲ್ಲ. ಆತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದವರೆಗೆ ತನ್ನ ವಿಜಯದ ಪ್ರಯಾಣ ಮುಂದುವರೆಸಿದ್ದಾನೆ. ಇದರ ಪರಿಣಾಮವಾಗಿ ಆತನಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿದೆ.
- ಇನ್ಫ್ಲುಯೆನ್ಸರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್: ಶ್ಲೋಕ ಪಠಣೆ ಮತ್ತು ಸಾಮಾನ್ಯ ಜ್ಞಾನ ಪ್ರಶ್ನೆಗೆ ಉತ್ತರ
- ಕಲಾಂ ವರ್ಲ್ಡ್ ರೆಕಾರ್ಡ್: ಅದ್ಭುತ ನೆನಪಿನ ಶಕ್ತಿಯ ಬಾಲಕ ಪ್ರಶಸ್ತಿ.
- ಸೂಪರ್ ಕಿಡ್ ಅವಾರ್ಡ್: ಸಣ್ಣ ವಯಸ್ಸಿನಲ್ಲಿ ಅಧಿಕ ನೆನಪಿನ ಶಕ್ತಿ
- ಇಂಟರ್ನ್ಯಾಷನಲ್ ಸ್ಟಾರ್ ಕಿಡ್ಸ್ ಅವಾರ್ಡ್: ಅದ್ಭುತ ನೆನಪಿನ ಕೌಶಲ್ಯ ಪ್ರದರ್ಶನ
- ಟಿಟಿಹೆಚ್ ರಾಷ್ಟ್ರ ಮಟ್ಟದ ಸ್ಪರ್ಧೆ: ನೆನಪಿನ ಸಕ್ತಿ ಸಾಮರ್ಥ್ಯಕ್ಕೆ ಪುರಸ್ಕಾರ
- ಸಾಂಸ್ಕೃತಿಕ ಕಲೆ ಕೇಂದ್ರ: ಶ್ಲೋಕ ಪಠಣೆಗೆ ಪ್ರಥಮ ಪ್ರಶಸ್ತಿ
ಸಂತಸದ ಹೆಮ್ಮೆಯಲ್ಲಿ ಪೋಷಕರು: ಶ್ರೀಧರ್ ಮತ್ತು ಶ್ರಾವಣಿ ಅವರು ತಮ್ಮ ಮಗ ತನ್ನ ಈ ಅಗಾಧ ಸ್ಮರಣೆಯಿಂದ ಒಂದು ದಿನ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುತ್ತಾನೆ ಎಂದು ಭಾವಿಸಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಆತ ಸಂತಸದಿಂದ ಕಲಿಯಬೇಕು ಎಂದು ಬಯಸಿಸದ್ದೇವೆ. ಆದರೆ, ಆತನ ಸ್ಮರಣಾಶಕ್ತಿ ನಮ್ಮನ್ನೇ ಬೆರಗಾಗಿಸಿದೆ. ಈ ವಯಸ್ಸಿನಲ್ಲಿ ಸಾಧನೆ ಮಾಡುತ್ತಿರುವ ಮಗನ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್: ಸೆರೆಬ್ರಲ್ ಮಲೇರಿಯಾದಿಂದ ಐವರು ಮಕ್ಕಳು ಸಾವು!
ಇದನ್ನೂ ಓದಿ: ಸಂಸತ್ನಲ್ಲಿ ಹಂಗಾಮ ಸೃಷ್ಟಿಸಿದ ಡಿಕೆಶಿ ಸಂವಿಧಾನದ ಕುರಿತ ಹೇಳಿಕೆ: DCM ರಾಜೀನಾಮೆಗೆ ಒತ್ತಾಯ: ರಾಜ್ಯಸಭೆಯಲ್ಲಿ ಜಟಾಪಟಿ