ಬಾರಾಬಂಕಿ(ಉತ್ತರ ಪ್ರದೇಶ): ದೇಶ-ವಿದೇಶಗಳ ಹಲವು ಭಾಷೆಗಳಲ್ಲಿ ಅನುವಾದವಾಗಿರುವ ಪ್ರಸಿದ್ಧ ಹಿಂದೂ ಮಹಾಕಾವ್ಯ 'ರಾಮಾಯಣ', ಇದೀಗ ಉರ್ದು ಭಾಷೆಯಲ್ಲೂ ರಚಿತವಾಗಿದೆ. ಉತ್ತರ ಪ್ರದೇಶದ ಸಾಹಿತ್ಯಾಸಕ್ತ ವ್ಯಕ್ತಿಯೊಬ್ಬರು 14 ವರ್ಷ ಶ್ರಮವಹಿಸಿ ಈ ಧರ್ಮಗ್ರಂಥವನ್ನು ಅನುವಾದಿಸಿದ್ದಾರೆ.
ಬಾರಾಬಂಕಿಯ ವಿನಯ್ ಬಾಬು ಎಂಬವರು ಈ ಗ್ರಂಥದ ರಚನೆಕಾರರು. ಅನುವಾದ ಗ್ರಂಥಕ್ಕೆ 'ವಿನಯ್ ರಾಮಾಯಣ' ಎಂದು ಹೆಸರಿಸಿದ್ದಾರೆ. ಇದು 500 ಪುಟಗಳು, 24 ವಿಭಾಗ, 7 ಸಾವಿರ ದ್ವಿಪದಿಗಳನ್ನು ಹೊಂದಿದೆ. ಪದ್ಯಗಳ ಬದಲಿಗೆ ಕಾವ್ಯಾತ್ಮಕವಾಗಿ ರಚಿಸಿರುವುದು ಇದರ ವಿಶೇಷ.
ಉರ್ದುವಿಗೆ ಭಾಷಾಂತರಿಸಿದ್ದು ಹೇಗೆ?: 8ನೇ ತರಗತಿ ವ್ಯಾಸಂಗ ಮಾಡಿರುವ ವಿನಯ್ ಅವರಿಗೆ ಉರ್ದು ಭಾಷೆಯ ಜ್ಞಾನ ಇರಲಿಲ್ಲ. ಹೆಚ್ಚಿನ ವಿದ್ಯಾಭ್ಯಾಸ ಇಲ್ಲವಾದರೂ, ಕಾವ್ಯ ರಚನೆಯಲ್ಲಿ ಹೆಚ್ಚಿನ ಹೊಂದಿದ್ದರು. ಗುರುಗಳಿಂದ ಕಾವ್ಯ ರಚನೆ ಮೇಲೆ ಹಿಡಿತ ಸಾಧಿಸಿದರು. ಉರ್ದು ಭಾಷೆಯ ಮೇಲೂ ಪಾಂಡಿತ್ಯ ಬೆಳೆಸಿಕೊಂಡರು. ಜೀವನ ಸನ್ಮಾರ್ಗ ತೋರಿಸುವ ರಾಮಾಯಣವನ್ನು ಉರ್ದುವಿನಲ್ಲಿ ರಚಿಸಲು ನಿರ್ಧರಿಸಿದರು. ಕಾರಣ, ಆ ಭಾಷೆಯಲ್ಲಿ ಧರ್ಮಗ್ರಂಥ ಇಲ್ಲದೇ ಇರುವುದು.

14 ವರ್ಷ ಅವಿರತ ಶ್ರಮ: ವಿನಯ್ ಅವರು ರಾಮಾಯಣವನ್ನು ಉರ್ದುವಿಗೆ ಭಾಷಾಂತರಿಸಲು ಪ್ರಾರಂಭಿಸಿದಾಗ, ಅವರು ಅನೇಕ ಸಮಸ್ಯೆಗಳನ್ನು ಎದುರಿಸಿದರು. ಇದರಿಂದ ಧರ್ಮಗ್ರಂಥ ರಚಿಸಲು 14 ವರ್ಷ ತೆಗೆದುಕೊಂಡರು. ಅವಿರತ ಶ್ರಮದ ಬಳಿಕ ರಾಮಾಯಣವು ಉರ್ದುವಿನಲ್ಲಿ ರಚಿಸಿದರು. ಅದಕ್ಕೆ 'ವಿನಯ್ ರಾಮಾಯಣ' ಎಂದು ತಮ್ಮದೇ ಹೆಸರಿಟ್ಟರು. ಇದು ರಾಮಾಯಣದ ಅನುವಾದವಲ್ಲ, ಬದಲಾಗಿ ಅದರ ಸಾರದ ವ್ಯಾಖ್ಯಾನ ಎಂದು ಅವರು ಹೇಳಿದ್ದಾರೆ.
ರಾಜ್ಯಪಾಲರಿಂದ ಬಿಡುಗಡೆ ಬಯಕೆ: ರಾಮಾಯಣ ಬರೆಯುವಾಗ ಅಯೋಧ್ಯೆ, ಪ್ರಯಾಗ್‌ರಾಜ್ ಸೇರಿದಂತೆ ಹಲವು ಐತಿಹ್ಯ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಹಿಮಾಲಯಕ್ಕೂ ಹೋಗಿದ್ದೇನೆ. ಉರ್ದುವಿನಲ್ಲಿ ಗ್ರಂಥವು ಮುದ್ರಣಗೊಂಡಿದೆ. ಅದನ್ನು ರಾಜ್ಯಪಾಲರಿಂದ ಬಿಡುಗಡೆ ಮಾಡಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
ಮಹಾಭಾರತ ಅನುವಾದ: ಹಿಂದು ಧರ್ಮ ಗ್ರಂಥಗಳಾದ ರಾಮಯಾಣದ ಬಳಿಕ ಮಹಾಭಾರತವನ್ನು ಉರ್ದು ಭಾಷೆಯಲ್ಲಿ ಅನುವಾದಿಸುವ ಗುರಿ ಹೊಂದಿದ್ದೇನೆ. ಈಗಾಗಲೇ ಕೆಲ ಭಾಗಗಳನ್ನು ಬರೆದಿದ್ದೇನೆ. ಅದನ್ನೂ ದ್ವಿಪದಿಗಳಲ್ಲಿ ರಚಿಸುತ್ತಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರೈಲ್ವೆ ಹಳಿಯಡಿಯಲ್ಲಿ ಒಂದು ದೇವಿ ದೇಗುಲ: 700 ವರ್ಷಗಳ ಇತಿಹಾಸ, ಸ್ಥಳಾಂತರಿಸಲು ಬಂದವರಿಗೆ ತಕ್ಕ ಶಾಸ್ತಿ