ಹೈದರಾಬಾದ್: ಅಪೋಲೋ ಆಸ್ಪತ್ರೆಯ ಸಿಎಸ್‌ಆರ್ ಉಪಾಧ್ಯಕ್ಷೆ, ಯುವರ್ ಲೈಫ್ ಫೌಂಡೇಶನ್ ಸ್ಥಾಪಕಿ ಹಾಗೂ ಚಲನಚಿತ್ರ ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರು ನೆಹರು ಮೃಗಾಲಯದಲ್ಲಿ ಹುಲಿ ಮರಿಗಳನ್ನು ದತ್ತು ಪಡೆದರು. ಗುರುವಾರ ತಮ್ಮ ಮಗಳು ಕ್ಲಿಂಕಾರ ಅವರೊಂದಿಗೆ ಮೃಗಾಲಯಕ್ಕೆ ಆಗಮಿಸಿದ ಉಪಾಸನಾ, ಮೃಗಾಲಯದಲ್ಲಿನ ವಿವಿಧ ಪ್ರಾಣಿಗಳ ಆವರಣಗಳನ್ನು ವೀಕ್ಷಿಸಿದರು.
ನಂತರ, ಅವರು ಮೃಗಾಲಯ ಉದ್ಯಾನವನದ ನಿರ್ದೇಶಕ ಡಾ. ಸುನಿಲ್ ಎಸ್. ಹಿರೇಮಠ ಅವರನ್ನು ಸಂಪರ್ಕಿಸಿ ಹುಲಿ ಮರಿಗಳನ್ನು ದತ್ತು ಪಡೆದರು. ಹುಲಿ ಮರಿಗಳ ನಿರ್ವಹಣೆಗೆ ಬೇಕಾದ ಹಣವನ್ನು ದೇಣಿಗೆ ಚೆಕ್ ರೂಪದಲ್ಲಿ ಮೃಗಾಲಯದ ನಿರ್ದೇಶಕರಿಗೆ ಹಸ್ತಾಂತರಿಸಲಾಯಿತು.
A year ago, she was just a tiny cub.
— Upasana Konidela (@upasanakonidela) June 20, 2025
Today, she’s a playful tigress named KlinKaara — after our daughter.
Thank you @hydzoo for this beautiful gesture. 🐯🧡
We believe wildlife belongs in the wild, but support efforts that honour animals with dignity and care. pic.twitter.com/KCs1nvMlR7
ಈ ಸಂದರ್ಭದಲ್ಲಿ, ಡಾ. ಸುನಿಲ್ ಎಸ್. ಹಿರೇಮಠ್ ಅವರು ಮಾತನಾಡಿ, ಕಾರ್ಪೊರೇಟ್ ಸಂಸ್ಥೆಗಳ ಜೊತೆಗೆ, ಬ್ಯಾಂಕುಗಳು, ಶಿಕ್ಷಣ ಸಂಸ್ಥೆಗಳು ಮತ್ತು ಪ್ರಾಣಿ ಪ್ರಿಯರು ಪ್ರಾಣಿ ದತ್ತು ಯೋಜನೆಯಲ್ಲಿ ಕೈಜೋಡಿಸುತ್ತಿದ್ದಾರೆ ಎಂದು ಹೇಳಿದರು.
ಹೆಣ್ಣು ಹುಲಿಗೆ ಕ್ಲಿಂಕಾರ ಹೆಸರು: ಉಪಾಸನಾ ಶುಕ್ರವಾರ ಈ ಬಗ್ಗೆ ಜಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಹೈದರಾಬಾದ್‌ನ ನೆಹರು ಪ್ರಾಣಿಶಾಸ್ತ್ರ ಉದ್ಯಾನದ ತಂಡಕ್ಕೆ ಅವರು ಧನ್ಯವಾದ ಕೂಡ ಅರ್ಪಿಸಿದ್ದಾರೆ. ಮೃಗಾಲಯದಲ್ಲಿರುವ ಹೆಣ್ಣು ಹುಲಿಯೊಂದಕ್ಕೆ ತಮ್ಮ ಮಗಳ ಹೆಸರಿಡಲಾಗಿದೆ ಎಂದು ಉಪಾಸನಾ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
'ಒಂದು ವರ್ಷದ ಹಿಂದೆ, ಅದು ಕೇವಲ ಸಣ್ಣ ಹುಲಿ ಮರಿಯಾಗಿತ್ತು. ಆದರೆ, ಈಗ ಅದು ತಮಾಷೆಯ ಹುಲಿಯಾಗಿದೆ. ನಮ್ಮ ಮಗಳು ಕ್ಲಿಂಕಾರ ಹೆಸರಿಡಲು ನಮಗೆ ತುಂಬಾ ಸಂತೋಷವಾಗಿದೆ' ಎಂದಿದ್ದಾರೆ.
ಇದನ್ನೂ ಓದಿ: ವಿಜಯನಗರ: ಮೃಗಾಲಯದ ಹೆಣ್ಣು ಹುಲಿ ದೇವಿ ಸಾವು - FEMALE TIGER DIED