ಮೀರತ್(ಉತ್ತರ ಪ್ರದೇಶ): ತಮ್ಮ ಮುದ್ದಿನ ಗಿಳಿ ಕಾಣೆಯಾಗಿದೆ. ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಉತ್ತರ ಪ್ರದೇಶದ ಪಕ್ಷಿಪ್ರೇಮಿ ಮಹಿಳೆಯೊಬ್ಬರು ಮನವಿ ಮಾಡಿದ್ದಾರೆ. ಮೀರತ್‌ನ ಪ್ರಭಾತ್ ನಗರದ ನಿವಾಸಿ ಆಕಾಂಕ್ಷಾ ಬಹುಮಾನ ಘೋಷಿಸಿದವರು.
ನಾಪತ್ತೆಯಾಗಿರುವ ಗಿಳಿಗಾಗಿ ಅವರು ಕಳೆದ ನಾಲ್ಕು ದಿನಗಳಿಂದ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಈವರೆಗೂ ಪತ್ತೆಯಾಗಿಲ್ಲ. ದಯಮಾಡಿ ಹುಡುಕಿ ಕೊಡಿ. ಗಿಳಿ ಹುಡುಕಿ ಕೊಟ್ಟವರಿಗೆ 10,000 ರೂಪಾಯಿ ನೀಡುವುದಾಗಿ ಅವರು ತಿಳಿಸಿದ್ದಾರೆ.
ಆಕಾಂಕ್ಷಾ ಅವರು ಗಿಳಿಯ ಫೋಟೋಸಹಿತ ಪೋಸ್ಟರ್‌ಗಳನ್ನು ರಸ್ತೆ ಹಾಗೂ ಬೀದಿಯಲ್ಲಿ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಹಾಕಿಕೊಂಡಿದ್ದಾರೆ.
''ಸುಮಾರು ನಾಲ್ಕು ವರ್ಷಗಳ ಹಿಂದೆ ಹೆಣ್ಣು ಗಿಳಿ ಖರೀದಿಸಿದ್ದೆ. ಮನೆಯವರೆಲ್ಲ ಪ್ರೀತಿಯಿಂದ ಮಿಟ್ಟು ಎಂದು ಕರೆಯುತ್ತಿದ್ದೆವು. ಮಿಟ್ಟು ಮನೆಯಂಗಳದಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿದ್ದಳು. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಎಲ್ಲವೂ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದವು. ಹೊರಗೆ ಹೋದಾಗಲೆಲ್ಲ ತನ್ನಿಬ್ಬರ ಮಕ್ಕಳನ್ನು ಕರೆದುಕೊಂಡೇ ಹೋಗುತ್ತಿದ್ದಳು. ಸೋಮವಾರ ಮನೆಯ ಸ್ಟೋರ್ ರೂಮ್‌ನಿಂದ ಹಳೆಯ ಏಣಿ ತೆಗೆಯುತ್ತಿದ್ದಾಗ ಏಕಾಏಕಿ ಏಣಿ ಕೈಯಿಂದ ಜಾರಿ ಬಿದ್ದು ದೊಡ್ಡ ಸದ್ದಾಯಿತು. ಇದರಿಂದ ಮಿಟ್ಟು ಭಯಗೊಂಡು ಬಾಲ್ಕನಿ ಗೇಟ್ ತೆರೆದಿದ್ದರಿಂದ ಹೊರ ಹಾರಿ ಹೋಗಿರಬಹುದು. ಎಲ್ಲಿ ಹುಡುಕಿದರೂ ಸಿಗುತ್ತಿಲ್ಲ. ಮಿಟ್ಟು ನನಗೆ ಮೂರನೇ ಮಗುವಿನಂತೆ. ಎಲ್ಲರೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೆವು. ಅದು ನಮ್ಮ ಮನೆಯ ಸದಸ್ಯೆಯಾಗಿತ್ತು'' ಎಂದು ಅವರು ಸಾಮಾಜಿಕ ಜಾಲತಾಣ ಸೇರಿ ರಸ್ತೆ ಹಾಗೂ ಬೀದಿಯಲ್ಲಿ ಗಿಳಿಯ ಪೋಸ್ಟರ್‌ಗಳನ್ನು ಹಾಕಿದ್ದಾರೆ.
ಇದನ್ನೂ ಓದಿ: ಮಕ್ಕಳೊಂದಿಗೆ ಬಿಸಿಯೂಟ ಸವಿದ ನಾಟ್ಯ ಮಯೂರಿ : ವಿಡಿಯೋ - Peacock ate lunch