ಲಖನೌ, ಉತ್ತರಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಜನರಿಗೆ ಭರ್ಜರಿ ಗಿಫ್ಟ್ ವೊಂದನ್ನು ನೀಡಿದ್ದಾರೆ. ಮನೆ ಪ್ಲಾನ್ ಪಾಸ್ ಮಾಡಿಸಿಕೊಳ್ಳುವಲ್ಲಿ ನಡೆಯುವ ಶೋಷಣೆ ಹಾಗೂ ಹಣ ವಸೂಲಿ ತಡೆಯಲು ಯೋಗಿ ಮಹತ್ತರ ನಿರ್ಧಾರ ಕೈಗೊಂಡಿದ್ದಾರೆ.
ಉತ್ತರ ಪ್ರದೇಶದ ಹೊಸ ಕಟ್ಟಡದ ಬೈಲಾದಲ್ಲಿ ಈ ಮೊದಲು ಇದ್ದ ಎಲ್ಲ ಸಮಸ್ಯೆಗಳನ್ನು ನಿವಾರಿಸಲಾಗಿದೆ. ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಗುರು ಪ್ರಸಾದ್ ಈ ಬಗ್ಗೆ ಮಾತನಾಡಿ, ನಕ್ಷೆ ಮಂಜೂರಾತಿ ಪಡೆಯುವ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
1000 ಚದರ ಅಡಿ ಒಳಗೆ ಮನೆ ಕಟ್ಟುವವರಿಗೆ ಪರಿಹಾರ: ಉತ್ತರ ಪ್ರದೇಶದಲ್ಲಿ ಈಗ 1000 ಚದರ ಅಡಿಯವರೆಗಿನ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಅಗತ್ಯವಿಲ್ಲ ಆದರೆ, 5000 ಚದರ ಅಡಿವರೆಗಿನ ಜಾಗದಲ್ಲಿ ಮನೆ ಕಟ್ಟುವವರಿಗೆ ಆರ್ಕಿಟೆಕ್ಟ್ ಪ್ರಮಾಣಪತ್ರ ಇದ್ದರೆ ಸಾಕು.
ಉತ್ತರ ಪ್ರದೇಶದ ವಸತಿ ಕಟ್ಟಡ ನಿರ್ಮಾಣ ಮತ್ತು ಅಭಿವೃದ್ಧಿ ಬೈಲಾ 2008 ರಲ್ಲಿ ಬದಲಾವಣೆಗಳನ್ನು ತರಲು ಅನುಮೋದನೆ ನೀಡಲಾಗಿದೆ. ಈ ಬದಲಾವಣೆಯಿಂದ ಜನಸಾಮಾನ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಉತ್ತರ ಪ್ರದೇಶದ ವಸತಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಸುಮಾರು ಇನ್ನೂರೈವತ್ತು ಪುಟಗಳ ಕಟ್ಟಡದ ಬೈ- ಲಾಗಳನ್ನು ಅಪ್‌ಲೋಡ್ ಮಾಡಲಾಗಿದೆ. ಈ ಹೊಸ ವ್ಯವಸ್ಥೆಯು ಸಾಮಾನ್ಯ ಜನರಿಗೆ ಹೆಚ್ಚಿನ ಪರಿಹಾರ ನೀಡಲಿದೆ ಎಂದು ನಂಬಲಾಗಿದೆ.
ಈಗ ಬಿಲ್ಡಿಂಗ್ ಬೈಲಾ ಅಡಿ ನೀವು ಮನೆಯ ಶೇ 25 ರಷ್ಟು ನರ್ಸರಿ, ಕ್ರೆಶ್ ಅಥವಾ ಹೋಂಸ್ಟೇ ನಡೆಸಲು ಬಯಸಿದರೆ ಅಥವಾ ಆರ್ಕಿಟೆಕ್ಟ್‌ಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು, ವೈದ್ಯರು ಮತ್ತು ವಕೀಲರಂತಹ ವೃತ್ತಿಪರರು, ಅಲ್ಲಿಯೇ ಕೆಲಸ ಮಾಡಲು ಬಯಸಿದರೆ ಈ ವಿವರಗಳನ್ನು ನಕ್ಷೆಯಲ್ಲಿ ಪ್ರತ್ಯೇಕವಾಗಿ ನಮೂದಿಸುವ ಅಗತ್ಯವಿಲ್ಲ.
ಸಕಾಲಕ್ಕೆ ಎನ್ ಒಸಿ ನೀಡಬೇಕು- ಸರ್ಕಾರದ ಆರ್ಡರ್: ಇದಲ್ಲದೇ ಪ್ರತಿ ಇಲಾಖೆಗೆ ಪ್ಲಾನ್ ಪಾಸ್ ಮಾಡಲು ಎನ್ ಒಸಿ ನೀಡಲು ಕಾಲಮಿತಿ ನಿಗದಿಪಡಿಸಲಾಗಿದೆ. ವಿವಿಧ ಇಲಾಖೆಗಳಿಗೆ 7 ರಿಂದ 15 ದಿನಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ಇದರ ನಂತರ, ಸಂಬಂಧಪಟ್ಟ ಇಲಾಖೆಯಿಂದ ಸ್ವಯಂಚಾಲಿತ ಎನ್ಒಸಿ ಸಿಕ್ಕಿದೆ ಎಂದು ಪರಿಗಣಿಸಲಾಗುತ್ತದೆ.
ಸಣ್ಣ ಪ್ಲಾಟ್‌ಗಳಲ್ಲೂ ಅಪಾರ್ಟ್‌ಮೆಂಟ್ ನಿರ್ಮಿಸಬಹುದು: ಇಲ್ಲಿಯವರೆಗೆ ಅಪಾರ್ಟ್ಮೆಂಟ್ ನಿರ್ಮಿಸಲು 2000 ಚದರ ಮೀಟರ್ ವಿಸ್ತೀರ್ಣದ ಪ್ಲಾಟ್ ಅಗತ್ಯವಿತ್ತು. ಆದರೆ, ಈಗ ಕೇವಲ 1000 ಚದರ ಮೀಟರ್‌ನ ಪ್ಲಾಟ್‌ನಲ್ಲಿಯೂ ನೀವು ಅಪಾರ್ಟ್ ಮೆಂಟ್ ನಿರ್ಮಾಣ ಮಾಡಬಹುದು. ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಆಸ್ಪತ್ರೆ ಮತ್ತು ವಾಣಿಜ್ಯ ಕಟ್ಟಡಕ್ಕೆ 3000 ಚದರ ಮೀಟರ್ ವಿಸ್ತೀರ್ಣ ಸಾಕಾಗುತ್ತದೆ.
ಎಷ್ಟು ಎತ್ತರದ ಕಟ್ಟಡ ಕಟ್ಟಬಹುದು: 24 ಮೀಟರ್ ಅಗಲದ ರಸ್ತೆಯಲ್ಲಿರುವ ಮನೆಗಳಲ್ಲಿ ಅಂಗಡಿ, ಕಚೇರಿ ತೆರೆಯಬಹುದು. ನೆಲದ ಪ್ರದೇಶದ ಅನುಪಾತವನ್ನು 3 ಪಟ್ಟು ಹೆಚ್ಚಿಸಲಾಗಿದೆ. 45 ಮೀಟರ್ ಅಗಲದ ರಸ್ತೆಯಲ್ಲಿ ನಿಮ್ಮ ಅವಶ್ಯಕತೆಗೆ ತಕ್ಕಷ್ಟ ಎತ್ತರದವರೆಗೂ ಕಟ್ಟಡವನ್ನು ಕಟ್ಟಬಹುದು ಎಂದು ಬೈಲಾದಲ್ಲಿ ಹೇಳಾಗಿದೆ.
ಈ ಹಿಂದೆ ಹೇಗಿತ್ತು ವ್ಯವಸ್ಥೆ?: ಈ ಹಿಂದೆ ಪ್ರಾಧಿಕಾರ ಹಾಗೂ ವಸತಿ ಅಭಿವೃದ್ಧಿ ಪ್ರದೇಶದ ಪ್ರತಿ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ನಕ್ಷೆ ಮಂಜೂರಾತಿ ಪಡೆಯುವುದು ಅಗತ್ಯವಾಗಿತ್ತು. ಆಗ ನೂರು ಚದರ ಮೀಟರ್‌ಗಳವರೆಗೆ ನಕ್ಷೆಯನ್ನು ರವಾನಿಸುವ ಅಗತ್ಯವಿರಲ್ಲ, ಆದರೆ 500 ಚದರ ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ನಿರ್ಮಿಸುವ ಕಟ್ಟಡಗಳಿಗೆ ಪ್ಲಾನ್ ಸಲ್ಲಿಸುವ ಅಗತ್ಯವಿರಲ್ಲಿಲ್ಲವಾದರೂ ಬಿಲ್ಡಿಂಗ್ ಪ್ಲಾನ್ ಅನ್ನು ವಾಸ್ತುಶಿಲ್ಪಿಯೇ ಸಿದ್ಧಪಡಿಸಿ ನಂತರ ಅನುಮೋದನೆ ಪಡೆದುಕೊಳ್ಳಬೇಕಿತ್ತು.
ಏನಿವು IIT - NIT - IIIT: ಇವುಗಳ ನಡುವಿನ ವ್ಯತ್ಯಾಸಗಳೇನು?; ಪ್ರವೇಶ ಪಡೆಯುವುದು ಹೇಗೆ? , ಎಷ್ಟಿರುತ್ತೆ ಶುಲ್ಕ?