Bihar Election Results 2025

ETV Bharat / bharat

ಗಿಳಿಯು ಮನುಷ್ಯನಂತೆ ಮಾತನಾಡುತ್ತೆ!?: ಪ್ರಾಣಿ -ಪಕ್ಷಿಗಳಿಗೆ ತಾಯಿಯಾದ ಭವ್ಯಾ; ಮೂಕ ಪ್ರಾಣಿಗಳೊಂದಿಗೆ ಇವರ ಬಾಂಧವ್ಯ ಅನನ್ಯ - ಅಪಾರ!

ಇವರ ಕಥೆಯು ಮಾನವರು ಪ್ರಾಣಿಗಳೊಂದಿಗೆ ಹಂಚಿಕೊಳ್ಳಬಹುದಾದ ಸರಳ, ಮಾಂತ್ರಿಕ ಸಂಪರ್ಕವನ್ನು ಅದ್ಬುತ ಎಂಬುದನ್ನು ತೋರಿಸುತ್ತದೆ.

'They Call Me 'Amma' and Lean on Me, a Khammam woman shares a unique bond with birds and dogs
ಭವ್ಯ (TV Bharat)
author img

By ETV Bharat Karnataka Team

Published : October 7, 2025 at 5:56 PM IST

2 Min Read
Choose ETV Bharat

ಖಮ್ಮಂ (ತೆಲಂಗಾಣ): ಆಗಸದಲ್ಲಿ ಹಾರುವ ಹಕ್ಕಿಗಳನ್ನು ನೋಡಿದಾಕ್ಷಣ ಅವು ಮೋಡಿ ಮಾಡದೇ ಇರಲಾರವು. ಆದರೆ, ಆ ಹಕ್ಕಿಗಳು ನಿಮ್ಮ ಬಳಿ ಬಂದು ನಿಮ್ಮೊಟ್ಟಿಗೆ ಆಟವಾಡುತ್ತಾ ಅಮ್ಮಾ ಎಂದು ಕರೆದರೆ ಹೇಗಿರುತ್ತದೆ ಎಂದು ಊಹಿಸಿ. ಈ ರೀತಿ ಪಕ್ಷಿಗಳ ಅಮ್ಮನಾಗಿದ್ದಾರೆ ಖಮ್ಮಂ ನಗರದ ಧನ್ಸಲಾಪುರಂದ ಬಳಿ ವಾಸಿಸುವ ಸರ್ಕಾರಿ ಉದ್ಯೋಗಿ ಬಿ ಭವ್ಯಾ.

ಭವ್ಯಾ ಹಿಂದೆ ಮುಂದೆ ಓಡಾಡುತ್ತವೆ ಈ ಪ್ರಾಣಿ ಪಕ್ಷಿಗಳು: ಭವ್ಯಾ ಅವರಿಗೆ ಕೇವಲ ಮಾನವರು ಮಾತ್ರ ಸ್ನೇಹಿತರಲ್ಲ. ಅವರ ಕರೆಗೆ ಒಗೊಡುವವರಲ್ಲಿ ಮೊದಲಿಗೆ ಪಕ್ಷಿಗಳಾದರೆ ಎರಡನೇಯವರು ಎಂದರು ಅದು ಶ್ವಾನಗಳು. ಪ್ರಾಣಿ ಪಕ್ಷಿಗಳ ಜೊತೆಗೆ ಭವ್ಯಾ ಅನುಬಂಧ ಅಮೋಘ. ಪ್ರತಿ ಸಂಜೆ ಭವ್ಯಾ ಮನೆಗೆ ಮರಳುತ್ತಿದ್ದಂತೆ, ಆಕೆಯನ್ನು ಪ್ರೀತಿಯಿಂದ ಸ್ವಾಗತಿಸುತ್ತವೆ. ಶ್ವಾನಗಳು ಸಹ ಉತ್ಸಾಹದಿಂದ ಬಾಲಗಳನ್ನು ಅಲ್ಲಾಡಿಸುತ್ತಾ ಆಕೆಯ ಹಿಂದೆ ಪ್ರೀತಿಯಿಂದ ಓಡಾಡುತ್ತವೆ.

ಗಮನ ಸೆಳೆಯುತ್ತಿದೆ ಆಫ್ರಿಕನ್​ ಬೂದು ಗಿಳಿ: ಒಂದೂವರೆ ವರ್ಷದ ಹಿಂದೆ ಕೇರಳದಿಂದ ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ತರಲಾದ ಆಫ್ರಿಕನ್ ಬೂದು ಗಿಳಿ ಎಲ್ಲರ ಗಮನ ಸೆಳೆಯುತ್ತಿದೆ . ಈ ಗಿಳಿಯು ಮನುಷ್ಯನಂತೆ ಸರಳ ಪದಗಳನ್ನು ಮಾತನಾಡಬಲ್ಲದು. ಹಾಗೇ ಅಪರಿಚಿತರ ಕುರಿತು ಎಚ್ಚರಿಕೆಯಿಂದ ಗಮನಿಸುತ್ತದೆ. ರಕ್ಷಣಾತ್ಮಕ ಮತ್ತು ಬುದ್ಧಿವಂತ ಸ್ವಭಾವವನ್ನು ಪ್ರದರ್ಶಿಸುತ್ತದೆ. ಗ್ರೀನ್‌ಚೀಕ್ ಕೋನೂರ್ ಮತ್ತು ಸನ್ ಕೋನೂರ್ ಪಕ್ಷಿಗಳು ಕೂಡ ಅವರ ಸಂಕುಲದಲ್ಲಿದ್ದು, ಪ್ರತಿಯೊಂದೂ ಪಕ್ಷಿಗಳು ತಮ್ಮದೇ ಆದ ಸ್ವಭಾವಗಳಿಂದ ರೋಮಾಂಚನವನ್ನುಂಟು ಮಾಡುತ್ತಿವೆ.

ಲ್ಯಾಬ್ರಡಾರ್ ರಿಟ್ರೈವರ್ ಮತ್ತು ಗೋಲ್ಡನ್ ರಿಟ್ರೈವರ್ ಸೇರಿದಂತೆ ಹಲವು ಶ್ವಾನಗಳು ಕೂಡ ಅವರ ಬಳಗದಲ್ಲಿವೆ. ಈ ಶ್ವಾನಗಳು ಭವ್ಯಾ ಅವರೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದು, ನಿಷ್ಠಾವಂತ ರಕ್ಷಕರಾಗಿದ್ದಾರೆ. ಅವುಗಳಿಗೆ ಉತ್ತಮ ಆರೈಕೆ, ಸರಿಯಾದ ಆಹಾರ, ಶುದ್ಧ ನೀರು ಮತ್ತು ನಿಯಮಿತ ಆರೋಗ್ಯ ತಪಾಸಣೆಗಳನ್ನು ತಪ್ಪದೇ ಮಾಡುತ್ತಿದ್ದಾರೆ. ಇವರ ಬಳಿ ಇರುವ ಸಾಕು ಪ್ರಾಣಿಗಳು ಕೇವಲ ಪ್ರಾಣಿಗಳಲ್ಲ. ನಿಜವಾದ ಕುಟುಂಬ ಸದಸ್ಯರಾಗಿದ್ದಾರೆ. ಅವರು ಮನೆಯ ಮಕ್ಕಳಂತೆ ಅವರೆಲರನ್ನೂ ಭವ್ಯಾ ನೋಡಿಕೊಳ್ಳುತ್ತಿದ್ದಾರೆ.

ಈ ಪಕ್ಷಿಗಳು ಮತ್ತು ಶ್ವಾನಗಳು ಭವ್ಯಾ ಅವರ ನಿತ್ಯ ಒಡನಾಡಿಗಳಾಗಿದ್ದು, ಅವರ ಸಹಚರರಂತೆ ಹಿಂದೆ ಮುಂದೆ ಒಡಾಡುತ್ತಿರುತ್ತವೆ. ಮನೆಯ ಸದಸ್ಯರಂತೆ ಅವುಗಳನ್ನು ಸಂತೋಷ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಭವ್ಯಾ ಅವರ ಕೆಲಸಕ್ಕೆ ಭಾರಿ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. ಅವರ ನಿತ್ಯದ ಜೀವನ ಮಾನವರು ಪ್ರಾಣಿಗಳೊಂದಿಗೆ ಹಂಚಿಕೊಳ್ಳಬಹುದಾದ ಸರಳ, ಮಾಂತ್ರಿಕ ಸಂಪರ್ಕವನ್ನು ಅದ್ಬುತ ಎಂಬುದನ್ನು ಸಮಾಜಕ್ಕೆ ತೋರಿಸಿಕೊಡುತ್ತಿದೆ.

ಇದನ್ನೂ ಓದಿ: ನಿತ್ಯ 300 ಶ್ವಾನಗಳಿಗೆ ಆಹಾರ ಮಾತ್ರವಲ್ಲದೇ, ಔಷದೋಪಚಾರ; ಪ್ರದೀಪ್ ಕಾರ್ಯಕ್ಕೆ ಭಾರಿ ಮೆಚ್ಚುಗೆ

ಇದನ್ನೂ ಓದಿ: 9 ವರ್ಷದಲ್ಲಿ 40 ಸಾವಿರ ಜೀವಗಳಿಗೆ ಚಿಕಿತ್ಸೆ: ಪ್ರಾಣಿ - ಪಕ್ಷಿಗಳ ಆರೈಕೆಯಲ್ಲೇ ಖುಷಿ ಕಾಣುತ್ತಿರುವ ಸೌರಭ ಕಮ್ಮಾರ