ETV Bharat / bharat

ಸೂಟ್​ಕೇಸ್​ನಲ್ಲಿ ಗೆಳತಿಯನ್ನು ಬಚ್ಚಿಟ್ಟ ವಿಡಿಯೋ ನೈಜ ಘಟನೆಯಲ್ಲ; ಅದೊಂದು ಪ್ರಾಂಕ್ ಅಷ್ಟೇ! - GIRLS PLAYING PRANK

ಸೂಟ್​ಕೇಸ್​ನೊಳಗೆ ಯುವತಿಯನ್ನು ಬಚ್ಚಿಟ್ಟು ಹಾಸ್ಟೆಲ್​ನೊಳಗೆ ಹೋಗುತ್ತಿರುವ ವಿಡಿಯೋ ಕೇವಲ ಪ್ರಾಂಕ್​ಗಾಗಿ ಚಿತ್ರೀಕರಿಸಿದ್ದು ಎಂದು ವಿಶ್ವವಿದ್ಯಾಲಯ ಹೇಳಿದೆ.

Group of girls playing prank
ಸೂಟ್​ಕೇಸ್​ನಲ್ಲಿ ಗೆಳತಿಯನ್ನು ಬಚ್ಚಿಟ್ಟ ವಿಡಿಯೋದ ಫೋಟೋ (X@gharkekalesh)
author img

By ETV Bharat Karnataka Team

Published : April 13, 2025 at 3:20 PM IST

1 Min Read

ಚಂಡೀಗಢ: ಹಾಸ್ಟೆಲ್ ಕ್ಯಾಂಪಸ್ ಒಂದರಲ್ಲಿ ಸೂಟ್​ಕೇಸ್​ನೊಳಗೆ ಯುವತಿಯನ್ನು ಬಚ್ಚಿಟ್ಟುಕೊಂಡು ಹೋಗುತ್ತಿರುವ ವೈರಲ್ ವಿಡಿಯೋ ಕೇವಲ ತಮಾಷೆಗಾಗಿ ಚಿತ್ರೀಕರಿಸಲಾಗಿತ್ತು ಎಂದು ತಿಳಿದು ಬಂದಿದೆ.

ಹರಿಯಾಣದ ಖಾಸಗಿ ವಿಶ್ವವಿದ್ಯಾಲಯದ ಹಾಸ್ಟೆಲ್​ನೊಳಗೆ ಯುವಕನೊಬ್ಬ ದೊಡ್ಡ ಸೂಟ್​ಕೇಸ್ ತೆಗೆದುಕೊಂಡು ಹೋಗುತ್ತಿರುವುದು ಹಾಗೂ ಅದನ್ನು ತಪಾಸಣೆ ಮಾಡಿದಾಗ ಅದರೊಳಗಡೆಯಿಂದ ಯುವತಿಯೊಬ್ಬಳು ಹೊರ ಬರುತ್ತಿರುವ ವಿಡಿಯೋ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ವಿಡಿಯೋವನ್ನು ಹಾಸ್ಟೆಲ್​ನೊಳಗಿನ ವಿದ್ಯಾರ್ಥಿನಿಯರ ಒಂದು ಗುಂಪು ತಮಾಷೆ ಅಥವಾ ಪ್ರಾಂಕ್‌ಗಾಗಿ ಚಿತ್ರೀಕರಿಸಿತ್ತು ಎಂದು ಹೇಳಲಾಗಿದೆ.

ವೈರಲ್ ವಿಡಿಯೋ ಪ್ರಾಂಕ್ ಆಗಿದ್ದರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿರುವ ಸೋನಿಪತ್ ಮೂಲದ ವಿಶ್ವವಿದ್ಯಾಲಯ, ಶಿಸ್ತು ಸಮಿತಿಯ ಮುಂದೆ ಹಾಜರಾಗಿ ಹೇಳಿಕೆ ನೀಡುವಂತೆ ವೈರಲ್ ವಿಡಿಯೋದ ಚಿತ್ರೀಕರಣದಲ್ಲಿ ಭಾಗಿಯಾದ ಎಲ್ಲ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದೆ.

ನಿನ್ನೆ ಈ ವಿಡಿಯೋ ವೈರಲ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವಿಪರೀತ ಚರ್ಚೆ ನಡೆದಿತ್ತು. ಆದರೆ ಈಗ ವಿಶ್ವವಿದ್ಯಾಲಯದ ಮುಖ್ಯ ಸಂವಹನ ಅಧಿಕಾರಿ ಅಂಜೂ ಮೋಹನ್ ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಈ ವಿಡಿಯೋವನ್ನು ಹಾಸ್ಟೆಲ್​ನಲ್ಲಿನ ವಿದ್ಯಾರ್ಥಿನಿಯರು ತಮಾಷೆಗಾಗಿ ಚಿತ್ರೀಕರಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೆಳತಿಯನ್ನು ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟು ಹಾಸ್ಟೆಲ್‌ಗೆ ಕರೆದೊಯ್ಯುವಾಗ ಸಿಕ್ಕಿಬಿದ್ದ ವಿದ್ಯಾರ್ಥಿ! - GIRLFRIEND IN SUITCASE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.