ETV Bharat / bharat

ಲೈಂಗಿಕ ದೌರ್ಜನ್ಯದ ಭಯದಿಂದ ಶಾಲೆಯ ಮೊದಲ ಮಹಡಿಯಿಂದ ಹಾರಿದ್ದ ವಿದ್ಯಾರ್ಥಿನಿ! ಶಿಕ್ಷಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ - TEACHER GETS RIGOROUS IMPRISONMENT

ಸ್ಪೆಷಲ್ ಕ್ಲಾಸ್‌ಗೆಂದು ಬಂದ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕ ಅನುಚಿತವಾಗಿ ವರ್ತಿಸಿದ್ದಾನೆ. ಲೈಂಗಿಕ ದೌರ್ಜನ್ಯದ ಭಯ ಮತ್ತು ಆತಂಕದಿಂದ ವಿದ್ಯಾರ್ಥಿನಿ ಶಾಲಾ ಕಟ್ಟಡದ ಮೊದಲ ಮಹಡಿಯಿಂದಲೇ ಹಾರಿದ್ದಳು. ನಂತರ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದರು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : April 16, 2025 at 1:26 PM IST

1 Min Read

ವಿಜಯವಾಡ(ಆಂಧ್ರ ಪ್ರದೇಶ): 10ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಶಿಕ್ಷಕನಿಗೆ ವಿಜಯವಾಡದ ಪೋಕ್ಸೊ ನ್ಯಾಯಾಲಯ 10 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿ ಮಂಗಳವಾರ ಮಹತ್ವದ ತೀರ್ಪು ಪ್ರಕಟಿಸಿತು. ಅಪರಾಧಿಗೆ 20 ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.

ಪೊಲೀಸರು ಮತ್ತು ನ್ಯಾಯಾಲಯದ ದಾಖಲಾತಿಗಳ ಪ್ರಕಾರ, ಜೋಜಿನಗರದ ಭವಾನಿಪುರಂ ನಿವಾಸಿ ಪುಲ್ಲೆಟಿಕುರ್ತಿ ಭುವನಚಂದ್ರ(31) ಶಿಕ್ಷೆಗೊಳಗಾದ ತೆಲುಗು ಶಿಕ್ಷಕ. ಈತ ಸೂರ್ಯರಾವ್‌ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.

ಕಟ್ಟಡದ ಮೊದಲ ಮಹಡಿಯಿಂದ ಹಾರಿದ್ದ ವಿದ್ಯಾರ್ಥಿನಿ: 2018ರ ಜುಲೈ 23 ರಂದು ಈ ಘಟನೆ ನಡೆದಿತ್ತು. ವಿದ್ಯಾರ್ಥಿನಿ ವಿಶೇಷ ತರಗತಿಯಲ್ಲಿ ಪಾಲ್ಗೊಳ್ಳಲು ಬಂದಿದ್ದಳು. ಈ ಸಂದರ್ಭದಲ್ಲಿ ಶಿಕ್ಷಕ ಆಕೆಯೊಂದಿಗೆ ಅಸಭ್ಯ, ಆಕ್ಷೇಪಾರ್ಹ ರೀತಿಯಲ್ಲಿ ವರ್ತಿಸಿದ್ದಾನೆ. ಇದರಿಂದ ಭಯ, ಆತಂಕಗೊಂಡ ವಿದ್ಯಾರ್ಥಿನಿ, ಶಾಲಾ ಕಟ್ಟಡದ ಮೊದಲ ಮಹಡಿಯಿಂದ ಹಾರಿದ್ದಳು. ಪೊಲೀಸರು ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. 2028ರ ಜುಲೈ 25ರಂದು ಆತನನ್ನು ಬಂಧಿಸಿದ್ದರು.

ಈ ಘಟನೆಗೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ನ್ಯಾಯಾಧೀಶರಾದ ವಿ.ಭವಾನಿ ಶಿಕ್ಷೆ ಪ್ರಕಟಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸಂತ್ರಸ್ತೆಗೆ 3 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ದಂಡದ ಮೊತ್ತದಿಂದ ಹೆಚ್ಚುವರಿಯಾಗಿ 10 ಸಾವಿರ ರೂಪಾಯಿಯನ್ನೂ ನೀಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿತು.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಿ. ಕೃಷ್ಣವೇಣಿ ಅವರು ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದರು.

ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ; ಖಾಸಗಿ ಅನುದಾನಿತ ಪ್ರೌಢಶಾಲೆಯ ಶಿಕ್ಷಕನ ಬಂಧನ - SEXUAL HARASSMENT

ಇದನ್ನೂ ಓದಿ: ವಿಜಯನಗರ: ಖಾಸಗಿ ಬಸ್​ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಯತ್ನ, ಮೂವರು ಆರೋಪಿಗಳ ಬಂಧನ - ATTEMPTED RAPE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.