ಜಮ್ಮು: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಸ್ವಲ್ಪ ಸಮಯದ ನಂತರ, ಜಮ್ಮುವಿನ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್‌ಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.
ಯಾವುದೇ ಪರಿಸ್ಥಿತಿಯನ್ನು ಎದುರಿಲು ಸನ್ನದ್ಧವಾಗಿರುವ ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಡ್ರೋನ್‌ಗಳನ್ನು ಯಶಸ್ವಿಯಾಗಿ ತಡೆಹಿಡಿದಿದೆ ಎಂದು ಮೂಲಗಳು ತಿಳಿಸಿವೆ.
#WATCH | J&K: Red streaks seen and explosions heard as India's air defence intercepts Pakistani drones amid blackout in Samba.
— ANI (@ANI) May 12, 2025
(Visuals deferred by unspecified time) pic.twitter.com/EyiBfKg6hs
ಹಾಗೆ ಹೇಳಬೇಕು ಎಂದರೆ ಸಾಂಬಾ ವಲಯದಲ್ಲಿ ಕಡಿಮೆ ಸಂಖ್ಯೆಯ ಡ್ರೋನ್‌ಗಳು ಬಂದಿವೆ. ಗಾಬರಿಪಡುವ ಅವಶಯಕತೆಗಳೇನೂ ಇಲ್ಲ ಎಂದು ರಕ್ಷಣಾ ಸಚಿವಾಲಯದ (MoD) ಮೂಲಗಳು ತಿಳಿಸಿವೆ.
ಈ ನಡುವೆ ಪಂಜಾಬ್ ನ ಹೊಸಿಯಾರಪುರದಲ್ಲಿ ಮುಂಜಾಗ್ರತವಾಗಿ ಸ್ವಯಂ ಆಗಿ ಬ್ಲಾಕ್ ಔಟ್ ಮಾಡಲಾಗಿದೆ. ಯಾವುದೇ ಮುಂಬರುವ ಅಪಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಡಿಸಿ ಆಶಿಕಾ ಜೈನ್ ತಿಳಿಸಿದ್ದಾರೆ.
ಇದನ್ನು ಓದಿ: ನಮ್ಮ ಮಹಿಳೆಯರ ಸಿಂಧೂರ ತೆಗೆದ ಪರಿಣಾಮಗಳನ್ನು ಶತ್ರುಗಳು ಈಗ ಅರಿತುಕೊಂಡಿದ್ದಾರೆ: ನರೇಂದ್ರ ಮೋದಿ