ETV Bharat / bharat

ಚೆನಾಬ್ ರೈಲ್ವೆ​ ಸೇತುವೆ ಉದ್ಘಾಟನೆಗೆ ಕ್ಷಣಗಣನೆ: 'ಜಮ್ಮು ಕಾಶ್ಮೀರಕ್ಕೆ ವಿಶೇಷ ದಿನ'ವೆಂದ ಪ್ರಧಾನಿ - CHENAB RAILWAY BRIDGE INAUGURATION

ದೇಶದ ಎಂಜಿನಿಯರಿಂಗ್ ಅದ್ಭುತಗಳಲ್ಲೊಂದಾದ ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೆ​ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಲಿದ್ದಾರೆ.

KASHMIR TRAIN INAUGURATION  CHIEF MINISTER OMAR ABDULLAH  TALLEST RAILWAY BRIDGE CHENAB  PRIME MINISTER NARENDRA MODI
ವಿಶ್ವದ ಅತೀ ಎತ್ತರದ ಚೆನಾಬ್ ರೈಲು​ ಸೇತುವೆ (ETV Bharat)
author img

By ETV Bharat Karnataka Team

Published : June 6, 2025 at 9:51 AM IST

2 Min Read

ಜಮ್ಮು ಮತ್ತು ಕಾಶ್ಮೀರ: ಇಂದು ಕತ್ರಾದಿಂದ ಶ್ರೀನಗರಕ್ಕೆ ಸಂಚರಿಸಲಿರುವ ಮೊದಲ ರೈಲಿನ ಉದ್ಘಾಟನೆ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ "ವಿಶೇಷ ದಿನ" ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. "ಈ ರೈಲಿನಿಂದ ಸಂಚಾರ ಸಂಪರ್ಕವು ಸುಧಾರಿಸಲಿದೆ, ಆಧ್ಯಾತ್ಮಿಕ ಪ್ರವಾಸೋದ್ಯಮದ ಉತ್ತೇಜನದ ಜೊತೆಗೆ, ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲಿದೆ" ಎಂದು ಪ್ರಧಾನಿ ತಿಳಿಸಿದ್ದಾರೆ.

ವಿಶ್ವದ ಅತೀ ಎತ್ತರದ​ ಚೆನಾಬ್ ರೈಲು​ ಸೇತುವೆಯ ಉದ್ಘಾಟನೆಯ ಸಿದ್ಧತೆಗಳ ಕುರಿತಾದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಎಕ್ಸ್​ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.

"ಜೂನ್​ 6 ಜಮ್ಮು ಕಾಶ್ಮೀರದ ನನ್ನ ಸಹೋದರಿಯರು ಹಾಗೂ ಸಹೋದರರಿಗೆ ವಿಶೇಷವಾದ ದಿನ. 46,000 ಕೋಟಿ ರೂ. ಮೌಲ್ಯದ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಾಗುತ್ತಿದೆ. ಇದು ಜನರ ಜೀವನದ ಮೇಲೆ ಬಹಳ ಸಕಾರಾತ್ಮಕ ಪರಿಣಾಮ ಬೀರಲಿದೆ. ಚೆನಾಬ್ ರೈಲು ಸೇತುವೆಯಿಂದ ಜಮ್ಮು ಮತ್ತು ಶ್ರೀನಗರ ನಡುವಿನ ಸಂಪರ್ಕ ಸುಧಾರಿಸಲಿದೆ" ಎಂದು ಎಕ್ಸ್​ನಲ್ಲಿ ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.

"ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆಯು ಎಲ್ಲಾ ಸಂದರ್ಭದಲ್ಲೂ ಸಂಪರ್ಕ ಕಲ್ಪಿಸಲಿದೆ. ಶ್ರೀ ಮಾತಾ ವೈಷ್ಣೋ ದೇವಿ ಕತ್ರಾದಿಂದ ಶ್ರೀನಗರಕ್ಕೆ ಸಂಚರಿಸುವ ವಂದೇ ಭಾರತ್ ರೈಲುಗಳು ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲಿವೆ. ಜೊತೆಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲಿದೆ" ಎಂದು ಹೇಳಿದ್ದಾರೆ.

ನಿನ್ನೆ ಮುಂಜಾನೆ, ಸಿಎಂ ಒಮರ್ ಅಬ್ದುಲ್ಲಾ ಅವರು ಚೆನಾಬ್ ಸೇತುವೆ ಮತ್ತು ಕತ್ರಾಗೆ ಭೇಟಿ ನೀಡಿದ್ದರು. ಬಳಿಕ ಪ್ರಧಾನಿಯವರ ಭೇಟಿಯ ಸಿದ್ಧತೆಗಳ ಮೇಲ್ವಿಚಾರಣೆ ಮಾಡಿದ್ದರು.

"ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಾಗಿ ವ್ಯವಸ್ಥೆಗಳ ಪರಿಶೀಲನೆ ಹಿನ್ನೆಲೆಯಲ್ಲಿ ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಗೆ ಭೇಟಿ ನೀಡಿದ್ದೇನೆ. ಪ್ರಧಾನಿ ಮೋದಿ ಆಮಿಸುತ್ತಿರುವುದು ಜಮ್ಮು ಮತ್ತು ಕಾಶ್ಮೀರಕ್ಕೆ ಒಂದು ಹೆಗ್ಗುರುತಿನ ದಿನವಾಗಿದೆ. ರೈಲ್ವೆ ಮೂಲಕ ಕಣಿವೆ ನಾಡು ಹಾಗೂ ದೇಶದ ಉಳಿದ ಭಾಗಗಳಿಗೆ ಸಂಪರ್ಕ ಒದಗಿಸಲಾಗುವುದು. ಗೌರವಾನ್ವಿತ ಪ್ರಧಾನಿಯವರು ಉದ್ಘಾಟನೆ ಮಾಡಲಿದ್ದಾರೆ" ಎಂದು ಎಕ್ಸ್​ನಲ್ಲಿ ಸಿಎಂ ಒಮರ್ ಅಬ್ದುಲ್ಲಾ ಬರೆದುಕೊಂಡಿದ್ದಾರೆ.

11 ಗಂಟೆಗೆ ಸೇತುವೆ ಉದ್ಘಾಟನೆ: ಪ್ರಧಾನಿಯವರು ಬೆಳಗ್ಗೆ 10 ಗಂಟೆಗೆ ಉಧಮ್‌ಪುರ ವಾಯು ನೆಲೆಗೆ ಆಗಮಿಸಲಿದ್ದು, S-70 ವೀಕ್ಷಣಾ ವೇದಿಕೆಯತ್ತ ಸಾಗಲಿದ್ದಾರೆ. ನಂತರ, ಬೆಳಗ್ಗೆ 11 ಗಂಟೆಗೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ಪ್ರಧಾನಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ, ಭಾರತದ ಅತಿ ಉದ್ದದ ಕೇಬಲ್-ಸ್ಟೇಡ್ ಅಂಜಿ ಖಾದ್ ಸೇತುವೆಗೆ ಭೇಟಿ ನೀಡಲಿದ್ದಾರೆ. ಈ ಎರಡೂ ಸೇತುವೆಗಳು ಎಂಜಿನಿಯರಿಂಗ್ ಅದ್ಭುತಗಳಾಗಿದ್ದು, ಚೆನಾಬ್ ಸೇತುವೆಯು ಫ್ರಾನ್ಸ್‌ನ ಐಫೆಲ್ ಟವರ್‌ಗಿಂತ ಎತ್ತರವಾಗಿದೆ.

ಮೊದಲ ರೈಲು ಸೇವೆ: ಜೊತೆಗೆ, ಇಂದು ಕಾಶ್ಮೀರಕ್ಕೆ ನೇರ ರೈಲು ಸೇವೆ ಆರಂಭವಾಗಲಿದೆ. ಪ್ರಧಾನಿ ಮೋದಿ ಅವರು ಕತ್ರಾದಲ್ಲಿರುವ ಶ್ರೀ ಮಾತಾ ವೈಷ್ಣೋ ದೇವಿ (SMVD) ರೈಲು ನಿಲ್ದಾಣದಿಂದ ಶ್ರೀನಗರ (SINA) ರೈಲು ನಿಲ್ದಾಣಕ್ಕೆ ಸಂಚರಿಲಿರುವ ಮೊದಲ ರೈಲನ್ನು ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ: ಕಾಶ್ಮೀರಕ್ಕೆ ನೇರ ರೈಲು ಸೇವೆ: ಫೆಬ್ರವರಿಯಲ್ಲಿ ಮೊದಲ ರೈಲು ಉದ್ಘಾಟಿಸಲಿರುವ ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.