ETV Bharat / bharat

ಪುರಿ ಜಗನ್ನಾಥ ದೇಗುಲದಲ್ಲಿ ವಾರ್ಷಿಕ ಸ್ನಾನದ ಉತ್ಸವ ಆರಂಭ; ಸಿಎಂ ಭಾಗಿ - SNANA YATRA GRAND BATHING

ಪುರಿ ಜಗನ್ನಾಥ ದೇಗುಲದ ವಾರ್ಷಿಕ ಉತ್ಸವದ ಆಚರಣೆಗಳು ಪ್ರಾರಂಭವಾಗಿದ್ದು, ಇದನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡು ಹರಿದು ಬರುತ್ತಿದೆ.

Snana Yatra 2025: The Grand Bathing Festival Begins In Puri
ಸ್ನಾನ ಯಾತ್ರೆ (PTI)
author img

By ETV Bharat Karnataka Team

Published : June 11, 2025 at 2:29 PM IST

1 Min Read

ಪುರಿ (ಒಡಿಶಾ): ಪುರಿ ಜಗನ್ನಾಥ ಮತ್ತು ಸಹೋದರರ ಸ್ನಾನ ಯಾತ್ರೆ, ದೇವ್​ ಸ್ನಾನ ಪೂರ್ಣಿಮೆ ಎಂದು ಕೂಡ ಪ್ರಖ್ಯಾತಿ ಹೊಂದಿದ್ದು, ಹಿಂದೂ ಕ್ಯಾಲೆಂಡರ್​ ಪ್ರಕಾರ ಈ ದಿನ ಅತ್ಯಂತ ಪವಿತ್ರ ದಿನಗಳಲ್ಲಿ ಒಂದು. ಜೇಷ್ಠ ಮಾಸದ ಹುಣ್ಣಿಮೆ ದಿನ ಸಾಮಾನ್ಯವಾಗಿ ಜೂನ್​ ಅಥವಾ ಜುಲೈನಲ್ಲಿ ಆಗಮಿಸುವ ಈ ಹುಣ್ಣಿಮೆ ಪುರಿಯ ಜಗನ್ನಾಥ, ಆತನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರಾ ಹಾಗೂ ಸುದರ್ಶನ ಚಕ್ರಕ್ಕೆ ಪವಿತ್ರ ಮಜ್ಜನದ ದಿನವಾಗಿದೆ.

ಗರ್ಭಗುಡಿಯಲ್ಲಿರುವ ಈ ಮೂರು ದೇವರ ವಿಗ್ರಹಗಳನ್ನು ಸ್ನಾನ ಮಂಟಪಕ್ಕೆ ಕರೆತಂದು ಈ ವಿಶೇಷ ಸ್ನಾನದ ಆಚರಣೆ ಮಾಡಿಸಲಾಗುವುದು. ದೇಗುಲದ ಆವರಣದಲ್ಲಿರುವ ಚಿನ್ನದ ಬಾವಿಯಿಂದ 108 ಬಿಂದಿಗೆಯ ನೀರನ್ನು ದೇವರ ಸ್ನಾನಕ್ಕೆ ಬಳಕೆ ಮಾಡಲಾಗುತ್ತದೆ.

Snana Yatra 2025: The Grand Bathing Festival Begins In Puri
ಪುರಿ ಜಗನ್ನಾಥ ದೇಗುಲ ಸ್ನಾನದ ಉತ್ಸವ (PTI)

ಈ ಸ್ನಾನದ ಕಾರ್ಯದ ಬಳಿಕ ದೇವರ ವಿಗ್ರಹವನ್ನು ಆನೆಯ ವೇಷದಲ್ಲಿ ಅಲಂಕರಿಸಲಾಗುವುದು. ಇದು ದೈವಿಕ ಮತ್ತು ಭವ್ಯ ರೂಪವನ್ನು ಸಂಕೇತಿಸುತ್ತದೆ. ಇದು ಭಕ್ತರಿಗೆ ಅಪರೂಪದ ಮತ್ತು ಆಕರ್ಷಕ ದೃಶ್ಯವಾಗಿದ್ದು, ಇದನ್ನು ಕಣ್ತುಂಬಿಕೊಳ್ಳಲು ಮುಂದಾಗುತ್ತಾರೆ.

ಈ ಬಹು ದೊಡ್ಡ ಆಚರಣೆ ವೀಕ್ಷಣೆಗೆ ಸಾವಿರಾರು ಜನರು ದೇಗುಲಕ್ಕೆ ಆಗಮಿಸುತ್ತಾರೆ. ಈ ಅಪರೂಪದ ಗಳಿಗೆಯನ್ನು ಹಿಂದೂಯೇತರ ಭಕ್ತರು ಕಣ್ತುಂಬಿಕೊಳ್ಳಲು, ದೇವರ ವಿಶೇಷ ಅಲಂಕಾರ ವೀಕ್ಷಿಸಲು ದೇವಸ್ಥಾನದ ಹೊರ ಆವರಣದಲ್ಲಿ ಕಾದಿರುತ್ತಾರೆ.

ಪುರಿಯ ಜಗದ್ವಿಖ್ಯಾತ ರಥಯಾತ್ರೆಗೆ ಈಗಾಗಲೇ ನಗರ ಸಿದ್ಧವಾಗಿದ್ದು, ದೇಗುಲದಲ್ಲಿ ಆಚರಣೆಗಳು ಭರದಿಂದ ಸಾಗಿದೆ. ಅದರ ಮೊದಲ ಭಾಗವಾಗಿ ಸ್ನಾನ ಯಾತ್ರೆ ನಡೆದಿದ್ದು, ಪವಿತ್ರ ತ್ರಿಮೂರ್ತಿಗಳಾದ ಬಲಭದ್ರ, ಮಹಾಪ್ರಭು ಜಗನ್ನಾಥ ಮತ್ತು ದೇವಿ ಸುಭದ್ರಾರ ಈ ದೈವಿಕ ಸ್ನಾನ ವಿಧಿಗಳನ್ನು ವೀಕ್ಷಿಸಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾ ನಗರದಲ್ಲಿ ಸೇರಿದ್ದಾರೆ.

ಇಂದು ಈ ಪವಿತ್ರ ಸ್ನಾನ ಯಾತ್ರೆ ನಡೆಯಲಿದ್ದು, ತೆರೆದ ಪೆಂಡಲ್‌ನಲ್ಲಿ ಸ್ನಾನ ವಿಧಿಗಳು ನಡೆಯಲಿದೆ. ಇದನ್ನು ವೀಕ್ಷಿಸಲು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ಇತರ ಗಣ್ಯರು ಸೇರಿದಂತೆ ಲಕ್ಷಾಂತರ ಭಕ್ತರು ನಗರಕ್ಕೆ ಆಗಮಿಸಲಿದ್ದಾರೆ.

ಪುರಿಯ ರಾಜಕುಮಾರ, ಗಜಪತಿ ಮಹಾರಾಜ್ ದಿಬ್ಯಸಿಂಗ ದೇಬ್ ಅವರು ಮಧ್ಯಾಹ್ನ 3.30 ರ ಸುಮಾರಿಗೆ ಸ್ನಾನ ಮಂಟಪದಲ್ಲಿ ಗುಡಿಸುವ ಮೂಲಕ ಈ ಆಚರಣೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಜೂನ್ 27 ರಂದು ವಾರ್ಷಿಕ ರಥಯಾತ್ರೆ ನಡೆಯಲಿದೆ.

ಇದನ್ನೂ ಓದಿ: ಸ್ನಾನ ಪೂರ್ಣಿಮಾ: ಚಿನ್ನದ ಬಾವಿಯಿಂದ ತೆಗೆದ ನೀರಿನಲ್ಲಿ ಜಗನ್ನಾಥನಿಗೆ ಮಜ್ಜನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.