ಪುರಿ(ಒಡಿಶಾ): ಜಗತ್ ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆಯ ಆಚರಣೆಗಳು ಆರಂಭವಾಗಿವೆ. ಜಗನ್ನಾಥ, ಬಲಭದ್ರ ಮತ್ತು ಸುಭದ್ರ ದೇವಿಯ ಸ್ನಾನ ಪೂರ್ಣಿಮಾ ವಾರ್ಷಿಕ ಆಚರಣೆ ನಡೆಯುತ್ತಿದೆ. ಈ ಕಾರ್ಯಕ್ರಮ ಪ್ರತಿ ವರ್ಷ ಜ್ಯೇಷ್ಠ ತಿಂಗಳ ಹುಣ್ಣಿಮೆಯಂದು ನಡೆಯವುದು ಅನಾದಿ ಕಾಲದಿಂದಲೂ ನಡೆದು ಬಂದಿರುವ ಪದ್ಧತಿ.
ಹೇಗೆ ನಡೆಯತ್ತೆ ಸ್ನಾನ ಪೂರ್ಣಿಮಾ?: ಜಗನ್ನಾಥ ಮತ್ತು ಆತನ ಒಡಹುಟ್ಟಿದವರಿಗೆ ನಡೆಯುವ ಪವಿತ್ರ ಸ್ನಾನ ಕಾರ್ಯಕ್ಕೆ ಸುನ ಕುವ ಅಥವಾ ಶ್ರೀ ಮಂದಿರದಲ್ಲಿನ ಚಿನ್ನದ ಬಾವಿಯಿಂದ ಶುದ್ಧ ನೀರು ತರುತ್ತಾರೆ. ಪುರಿಯಲ್ಲಿರುವ ದೇಗುಲದಲ್ಲಿ ಈ ಬಂಗಾರದ ಬಾವಿ ಇದೆ. ಬಾವಿಯ ಹೆಸರು ಎಷ್ಟು ವಿಶಿಷ್ಟವಾಗಿದೆಯೋ ನೀರೂ ಸಹ ಅಷ್ಟೇ ವಿಶೇಷವಾಗಿದೆ. ವರ್ಷಕ್ಕೊಮ್ಮೆ ಮಾತ್ರ ಈ ಬಾವಿಯ ನೀರನ್ನು ಹೊರತೆಗೆಯಲಾಗುತ್ತದೆ. ಬಲಭದ್ರ, ದೇವಿ ಸುಭದ್ರ ಮತ್ತು ಜಗನ್ನಾಥ, ಚಕ್ರರಾಜ ಸುದರ್ಶನರೊಂದಿಗೆ ಸ್ನಾನ ಯಾತ್ರೆಯ ದಿನ ಸ್ನಾನ ಮಂಟಪದಲ್ಲಿ ಸ್ನಾನವನ್ನು ನೆರವೇರಿಸಲಾಗತ್ತದೆ.

ಭಾರತದಲ್ಲಿನ ಎಲ್ಲ ತೀರ್ಥಕ್ಷೇತ್ರಗಳ ನೀರು ಸ್ನಾನಪೂರ್ಣಿಮೆಗೆ ಮೊದಲು ಈ ಬಾವಿ ಸೇರುತ್ತದೆ ಎಂಬುದು ನಂಬಿಕೆ. ಸ್ನಾನ ಯಾತ್ರೆ ಮುಗಿದ ನಂತರ ಬಾವಿಯಿಂದ ನೀರು ಹೀರುತ್ತದೆ. ಈ ಹಿನ್ನೆಲೆಯಲ್ಲಿ ಬಾವಿಯ ನೀರನ್ನು ವರ್ಷದಲ್ಲಿ ಒಂದು ದಿನ ಸ್ನಾನ ಯಾತ್ರೆಯ ಸಮಯದಲ್ಲಿ ದೇವರ ಸ್ನಾನಕ್ಕೆ ಬಳಸಲಾಗುತ್ತದೆ.
ದೇವಾಲಯದ ಉತ್ತರ ದ್ವಾರದ ಬಳಿ ಇರುವ ದೇವಿ ಶೀತಲದ ಮುಂದೆ ಇರುವ ಬಾವಿಯನ್ನು ಚಿನ್ನದ ಬಾವಿ ಎಂದು ಕರೆಯಲಾಗುತ್ತದೆ. ಈ ಬಾವಿಯ ನೀರನ್ನು ವರ್ಷವಿಡೀ ಯಾವುದೇ ಇತರೆ ಉದ್ದೇಶಕ್ಕೂ ಬಳಸುವುದಿಲ್ಲ. ಆದರೆ, ದೇವರ ಸ್ನಾನ ಯಾತ್ರೆಯ ಸಮಯದಲ್ಲಿ ಮಾತ್ರ ಚತುರ್ಥ ಮೂರ್ತಿ ಸ್ನಾನ ಮಂಟಪದಲ್ಲಿರುವ ಈ ಬಾವಿಯಿಂದ ತೆಗೆದ ನೀರಿನಲ್ಲಿ ಸ್ನಾನ ಮಾಡಿಸಲಾಗುತ್ತದೆ. ಚಿನ್ನದ ಬಾವಿಯನ್ನು ವರ್ಷವಿಡೀ ಶೀತಲ ದೇವತೆಯ ವಾಹನ ಸಿಂಹ ಕಾಪಾಡುತ್ತದೆ ಎಂಬುದು ನಂಬಿಕೆ.

ಇದನ್ನೂ ಓದಿ: ಪುರಿ ಜಗನ್ನಾಥ ದೇಗುಲದ 'ರತ್ನಭಂಡಾರ' ಸ್ಥಳಾಂತರ ಪೂರ್ಣ; ನಿಧಿ ಬಗ್ಗೆ ಸಮಿತಿ ಹೇಳಿದ್ದೇನು?
ಚಿನ್ನದ ಬಾವಿಯ ಬಗ್ಗೆ ಅನೇಕ ವಿಚಿತ್ರ ವಿಷಯಗಳೂ ಇವೆ. ದಂತಕಥೆಗಳ ಪ್ರಕಾರ, ಒಮ್ಮೆ ರಾಜನು ದೇವಾಲಯ ನಿರ್ಮಿಸುವ ಬಯಕೆ ಹೊಂದಿದಾಗ ವಿವಿಧ ರಾಜ್ಯಗಳಿಂದ ಆತ ವಶಪಡಿಸಿಕೊಂಡ ಚಿನ್ನವನ್ನಿಡಲು ದೇವಾಲಯದಲ್ಲಿ ಯಾವುದೇ ಸುರಕ್ಷಿತ ಸ್ಥಳ ಅಥವಾ ಖಜಾನೆ ಇರಲಿಲ್ಲವಂತೆ. ಹಾಗಾಗಿ, ಆ ಚಿನ್ನವನ್ನೆಲ್ಲ ಆ ಬಾವಿಯಲ್ಲಿ ಇಟ್ಟುಕೊಂಡನಂತೆ. ಚಿನ್ನದ ಬಾವಿಯಿಂದ ಮಹಾಪ್ರಭುಗಳ ನಿಧಿಯ ಮನೆಗೆ ರಹಸ್ಯ ಸುರಂಗವಿದೆ ಎಂದು ಹೇಳಲಾಗುತ್ತದೆ.
ಜಗನ್ನಾಥ ಪ್ರಭುವನ್ನು ಸುನ ಠಾಕೂರ್ ಎಂದು ಕರೆಯುತ್ತಾರೆ. ಮಹಾಪ್ರಭು ಚಿನ್ನದ ರಥದ ಮೇಲೆ ಗಜಪತಿಯ ಸುತ್ತಲೂ ಈಜುತ್ತಾನೆ. ಮಹಾಪ್ರಭುಗಳಿಗೆ ಚಿನ್ನದ ತಟ್ಟೆಗಳಲ್ಲಿ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ನಂತರ ಸುನ ಗೋಸೇಯ್ ಎಂಬ ಸೇವಕ ಈ ಚಿನ್ನದ ಬಾವಿಯಿಂದ ನೀರನ್ನು ತೆಗೆದು ಸ್ನಾನ ಹುಣ್ಣಿಮೆಯ ದಿನ ಸ್ನಾನ ಮಾಡಿಸುತ್ತಾನೆ.

ಈ ಸ್ನಾನದ ಆಚರಣೆಯನ್ನು ಜಗನ್ನಾಥನ ಜನ್ಮದಿನದಂದು ಆಚರಿಸಲಾಗುವುದು. ಪುರಾಣದ ಪ್ರಕಾರ, ಜಗನ್ನಾಥ ಈ ಪವಿತ್ರ ದಿನದಂದೇ ಜನಿಸಿದ್ದಾರೆ. ನಾಲ್ಕು ವಿಗ್ರಹಗಳಿಗೆ ಕೊಡದ ನೀರಿನಲ್ಲಿ ಸ್ನಾನ ಮಾಡಲಾಗುತ್ತದೆ. ಸ್ನಾನಕ್ಕೆ ಮೊದಲು ಗರ್ಬಾದು ಸೇವಕರು ಪವಿತ್ರ ದೈವಿಕ ನೀರನ್ನು ಸ್ನಾನ ಮಂದಿರಕ್ಕೆ ತೆಗೆದುಕೊಂಡು ಹೋಗುತ್ತಾರೆ.
ಧರ್ಮಗ್ರಂಥಗಳ ಪ್ರಕಾರ, ಮೊದಲ ಹುಣ್ಣಿಮೆಯ ಮೊದಲು ಭಾರತದ ಎಲ್ಲಾ ಪವಿತ್ರ ನದಿಗಳು ಈ ಬಾವಿಯಲ್ಲಿ ವಿಲೀನಗೊಳ್ಳುತ್ತವಂತೆ. ಮಹಾಪ್ರಭು ಈ ಪವಿತ್ರ ನೀರಿನಲ್ಲಿ ಸ್ನಾನ ಮಾಡುತ್ತಾರೆ. ದೇವಾಲಯದ ಸ್ನಾನಕ್ಕೆ ಒಂದು ದಿನ ಚಂದ್ರಮಾನದ ಮೊದಲ ಹುಣ್ಣಿಮೆಯ ಹದಿನಾಲ್ಕನೇ ದಿನದಂದು ಬಾವಿಯನ್ನು ತೆರೆಯಲಾಗುತ್ತದೆ. ನಂತರ, ಬಾವಿಯನ್ನು ಸ್ವಚ್ಛಗೊಳಿಸಲಾಗುತ್ತದೆ. ಈ ಬಾವಿಯಿಂದ 32 ಬಿಂದಿಗೆ ಬಲಭದ್ರನಿಗೆ, 35 ಬಿಂದಿಗೆ ಜಗನ್ನಾಥನಿಗೆ, 22 ಬಿಂದಿಗೆ ಸುಭದ್ರಾ ದೇವಿಗೆ ಮತ್ತು 18 ಬಿಂದಿಗೆ ಸುದರ್ಶನನಿಗೆ ಸ್ನಾನದ ಆಚರಣೆ ನಡೆಯುತ್ತದೆ.

ಇದನ್ನೂ ಓದಿ: ಪುರಿ ಜಗನ್ನಾಥನ ರತ್ನಭಂಡಾರ ರಹಸ್ಯದ ಎರಡನೇ ಸುತ್ತಿನ ಸರ್ವೇ ಕಾರ್ಯ ಆರಂಭ -