ETV Bharat / bharat

NEET- PG​ ಪರೀಕ್ಷೆ ಏಕಕಾಲಕ್ಕೆ ನಡೆಸಲು ಸುಪ್ರೀಂಕೋರ್ಟ್​ ಸೂಚನೆ: ಆಗಸ್ಟ್​ 3 ರಂದು ಎಕ್ಸಾಮ್​ - SC ON NEET PG

ನೀಟ್​ ಪರೀಕ್ಷೆಗೆ ಇದ್ದ ಅಡ್ಡಿಯು ನಿವಾರಣೆಯಾಗಿದೆ. ಆಗಸ್ಟ್​ 3 ರಂದು ಪರೀಕ್ಷೆ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್​ಬಿಇ) ಘೋಷಿಸಿದೆ.

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್ (ETV Bharat)
author img

By PTI

Published : June 6, 2025 at 4:15 PM IST

2 Min Read

ನವದೆಹಲಿ: ಅಕ್ರಮಗಳ ಒಳಸುಳಿಗೆ ಸಿಲುಕಿದ್ದ NEET- PG ಪರೀಕ್ಷೆಗೆ ಸುಪ್ರೀಂಕೋರ್ಟ್ ​ಶುಕ್ರವಾರ ಅನುಮತಿ ನೀಡಿದೆ. ಎರಡು ಹಂತಗಳ ಬದಲಿಗೆ ಏಕಕಾಲದಲ್ಲಿ ಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ (ಎನ್​ಬಿಇ) ಸೂಚನೆ ನೀಡಿದೆ. ಹೀಗಾಗಿ, ಆಗಸ್ಟ್​ 3 ರಂದು ಪರೀಕ್ಷೆ ನಡೆಯಲಿದೆ.

ನೀಟ್​ ಪರೀಕ್ಷೆ ನಡೆಸಲು ಎರಡು ತಿಂಗಳಿಗೂ ಅಧಿಕ ಸಮಯ ಕೋರಿದ್ದ ಎನ್​ಬಿಇ ಮನವಿಯನ್ನು ಮೊದಲು ಪ್ರಶ್ನಿಸಿದ್ದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು, ಬಳಿಕ ಇದನ್ನು ಸಮ್ಮತಿಸಿ ಆಗಸ್ಟ್​ನಲ್ಲಿಯೇ ಪರೀಕ್ಷೆ ನಡೆಸಲು ಅವಕಾಶ ನೀಡಿದೆ.

ಪರೀಕ್ಷೆ ನಡೆಸಲು ಎನ್‌ಬಿಇಗೆ ಹೆಚ್ಚಿನ ಸಮಯ ನೀಡುವುದಿಲ್ಲ. ಮೇ 30 ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆಯೇ ಏಕಕಾಲದಲ್ಲಿ ಪರೀಕ್ಷೆಯನ್ನು ನಡೆಸಬೇಕು ಎಂದು ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಪರೀಕ್ಷಾ ಮಂಡಳಿಯು, ಒಂದೇ ಬಾರಿಗೆ ಪರೀಕ್ಷೆ ನಡೆಸಬೇಕಾದಲ್ಲಿ ಸುಮಾರು 1,000 ಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳ ಅಗತ್ಯ ಇರುತ್ತದೆ. ಜೂನ್ 15 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಆಗಸ್ಟ್ 3 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30 ರ ನಡುವೆ ನಡೆಸಲಾಗುವುದು ಎಂದು ಹೇಳಿತು.

ಸುಪ್ರೀಂ ಕೋರ್ಟ್ ಹಿಂದಿನ ಆದೇಶವೇನು?: ವೈದ್ಯಕೀಯ ಶಿಕ್ಷಣದಲ್ಲಿ ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆಸುವ ನೀಟ್‌ ಪರೀಕ್ಷೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೇ 30 ರಂದು ಪ್ರಮುಖ ಆದೇಶಗಳನ್ನು ನೀಡಿತ್ತು. ಜೂನ್ 15 ರಂದು ನಡೆಸಲು ಉದ್ದೇಶಿಸಿದ್ದ ನೀಟ್ - ಪಿಜಿ 2025 ಪರೀಕ್ಷೆಯನ್ನು ಏಕಕಾಲಕ್ಕೆ ಪೂರ್ಣಗೊಳಿಸಬೇಕು ಎಂದು ನ್ಯಾಯಮೂರ್ತಿ ವಿಕ್ರಮನಾಥ್, ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರಿದ್ದ ತ್ರಿಸದಸ್ಯ ಪೀಠ ಹೇಳಿತ್ತು.

ಈ ಪರೀಕ್ಷೆಯನ್ನು ಎರಡು ಹಂತದಲ್ಲಿ ನಡೆಸುವುದರಿಂದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಪರೀಕ್ಷೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸುರಕ್ಷಿತ ಮತ್ತು ಭದ್ರತೆ ಇರುವ ಪರೀಕ್ಷಾ ಕೇಂದ್ರಗಳನ್ನೇ ಆಯ್ಕೆ ಮಾಡಬೇಕು. ಯಾವುದೇ ಎರಡು ಪ್ರಶ್ನೆ ಪತ್ರಿಕೆಗಳು ಎಂದಿಗೂ ಅತಿ ಕಠಿಣ ಮತ್ತು ಸುಲಭವಾಗಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ಸ್ಪರ್ಧೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ರ್‍ಯಾಂಕ್​ ನಿರ್ಧರಿಸುವಲ್ಲಿ ಪ್ರತಿಯೊಂದು ಅಂಕವೂ ಬಹಳ ನಿರ್ಣಾಯಕವಾಗಿದೆ. ಸಾಮಾನ್ಯ ಪದ್ಧತಿಯು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಅನುಸರಿಸಬೇಕು. ಪ್ರತಿ ವರ್ಷ ನಡೆಸುವ ಪರೀಕ್ಷೆಗೆ ಅದು ಸೂಕ್ತವಲ್ಲ ಎಂದು ಪೀಠ ಹೇಳಿದೆ.

ದೇಶಾದ್ಯಂತ ಒಂದೇ ಹಂತದಲ್ಲಿ ಪರೀಕ್ಷೆಯನ್ನು ನಡೆಸುವುದು ಕಷ್ಟವಾಗುವುದಿಲ್ಲ ಎಂದು ಹೇಳುವ ಮೂಲಕ ಅಧಿಕಾರಿಗಳ ಆಕ್ಷೇಪಣೆಗಳನ್ನು ಅದು ತಳ್ಳಿಹಾಕಿತು. ಅದರ ನಂತರ, ಜೂನ್ 15 ರಂದು ನಡೆಯಬೇಕಿದ್ದ ನೀಟ್ ಪಿಜಿ ಪರೀಕ್ಷೆ ಮುಂದೂಡುತ್ತಿರುವುದಾಗಿ ಎನ್‌ಬಿಇ ಘೋಷಿಸಿತು. ನ್ಯಾಯಾಲಯದ ಆದೇಶದಂತೆ ಈ ವರ್ಷದ ನೀಟ್ ಪರೀಕ್ಷೆ ಏಕಕಾಲಕ್ಕೆ ನಡೆಸುವುದಾಗಿ ಎನ್‌ಬಿಇ ಸ್ಪಷ್ಟಪಡಿಸಿದೆ. ಈಗ, ಸುಪ್ರೀಂ ಕೋರ್ಟ್‌ನ ಅನುಮತಿಯಂತೆ, ಆಗಸ್ಟ್ 3 ರಂದು ಪರೀಕ್ಷೆಯನ್ನು ನಡೆಸಲಿದೆ.

ಇದನ್ನೂ ಓದಿ: ಒಂದೆಡೆ ನೀಟ್​ ಪರೀಕ್ಷೆ ಬರೆದ 73 ವರ್ಷದ ಅಜ್ಜಿ; ಮತ್ತೊಂದೆಡೆ, ಒಂದೇ ಕನಸಿನ ಬೆನ್ನೇರಿರುವ ತಾಯಿ-ಮಗಳು

ಜೆಇಇ - ನೀಟ್ ಬರೆದಿದ್ದು ಲಕ್ಷಾಂತರ ಅಭ್ಯರ್ಥಿಗಳು: ಆದರೆ ಅರ್ಹರಾಗುವುದು ಎಷ್ಟು ಮಂದಿ, ಎಷ್ಟು ಸೀಟುಗಳು ಲಭ್ಯ?; ಇಲ್ಲಿದೆ ಮಾಹಿತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.