ಸಾಗರ, ಮಧ್ಯಪ್ರದೇಶ: ಕಳೆದ ಸೋಮವಾರ ಬೆಳಗ್ಗೆ ನಾಪತ್ತೆಯಾಗಿದ್ದ ಮಹಾರ್ ರೆಜಿಮೆಂಟ್‌ನ ಲೆಫ್ಟಿನೆಂಟ್ ಕರ್ನಲ್ ಪ್ರಮೋದ್ ಕುಮಾರ್ ನಿಗಮ್ ಕೊನೆಗೂ ಲಲಿತಪುರದ ಹೋಟೆಲ್‌ನಲ್ಲಿ ಪತ್ತೆಯಾಗಿದ್ದಾರೆ. ಪ್ರಮೋದ್ ಅವರು ಎಟಿಎಂ ವಹಿವಾಟಿನ ಮೂಲಕ ಅವರು ಲಲಿತಪುರದಲ್ಲಿದ್ದಾರೆ ಎಂಬ ಮಾಹಿತಿ ಕ್ಯಾಂಟ್ ಪೊಲೀಸರಿಗೆ ಸಿಕ್ಕಿತ್ತು.
ಈ ಮಾಹಿತಿ ಆಧಾರದ ಮೇಲೆ ಪೊಲೀಸರು ತಕ್ಷಣವೇ ಲಲಿತಪುರದ ಕಡೆಗೆ ತೆರಳಿದ್ದರು. ಅಲ್ಲಿ ಅವರು ಸಿವಿಲ್ ಲೈನ್‌ನ ಕೈಲಾಶ್ ಹೋಟೆಲ್‌ನಲ್ಲಿ ಪತ್ತೆಯಾಗಿದ್ದರು. ಆರಂಭಿಕ ವಿಚಾರಣೆಯಲ್ಲಿ ಲಲಿತಪುರ ಹೇಗೆ ಬಂದೇ ಎಂಬುದು ಬಗ್ಗೆ ತಿಳಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಸೇನೆ ಮತ್ತು ಲೆಫ್ಟಿನೆಂಟ್ ಕರ್ನಲ್ ಅವರ ಕುಟುಂಬವು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಕಾಣೆಯಾದ ಲೆಫ್ಟಿನೆಂಟ್ ಪತ್ತೆಯಾಗಿದ್ದು ಹೇಗೆ?: ಕ್ಯಾಂಟ್ ಪೊಲೀಸ್ ಠಾಣೆಯ ಉಸ್ತುವಾರಿ ರೋಹಿತ್ ಡೋಂಗ್ರೆ ಈ ಬಗ್ಗೆ ಮಾತನಾಡಿ, ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಸೇನಾ ಗುಪ್ತಚರ ಮತ್ತು ಮಿಲಿಟರಿ ಪೊಲೀಸರನ್ನು ಹೊರತುಪಡಿಸಿ, ನಮ್ಮ ತಂಡವು ಲೆಫ್ಟಿನೆಂಟ್ ಕರ್ನಲ್ ಅವರಿಗಾಗಿ ಹಗಲು ರಾತ್ರಿ ಹುಡುಕುತ್ತಿತ್ತು. ಸಿಸಿಟಿವಿ ದೃಶ್ಯಗಳಿಂದ ನಮಗೆ ಯಾವುದೇ ಸುಳಿವು ಸಿಗಲಿಲ್ಲ. ಇನ್ನೊಂದು ಸಮಸ್ಯೆ ಎಂದರೆ ಲೆಫ್ಟಿನೆಂಟ್ ಕರ್ನಲ್ ಅವರ ಮೊಬೈಲ್ ಮನೆಯಲ್ಲಿತ್ತು. ಆದ್ದರಿಂದ ಅವರ ಸ್ಥಳವನ್ನು ಕಂಡುಹಿಡಿಯುವುದು ತುಂಬಾ ಕಷ್ಟಕರವಾಗಿತ್ತು. ನಾವು ಎಎಸ್‌ಐ ಸಂಜಯ್ ಬಾಮ್ನಿಯಾ, ಎಎಸ್‌ಐ ಕೈಲಾಶ್ ರಾಜ್, ಹೆಡ್ ಕಾನ್ಸ್‌ಟೇಬಲ್ ವಿನೋದ್ ವಿಶ್ವಕರ್ಮ ಮತ್ತು ಕಾನ್ಸ್‌ಟೇಬಲ್ ಆನಂದ್ ಖಾತಿಕ್ ಮತ್ತು ಅಮನ್ ಸ್ವಾಮಿ ಅವರ ಐದು ಸದಸ್ಯರ ತಂಡವನ್ನು ರಚಿಸಿದ್ದೆವು. ಈ ತಂಡ ಕರ್ನಲ್ ಅವರನ್ನು ನಿರಂತರವಾಗಿ ಅವರನ್ನು ಹುಡುಕುತ್ತಿತ್ತು.
ಸಿಸಿಟಿವಿ ಮತ್ತು ಮೊಬೈಲ್‌ನಿಂದ ಯಾವುದೇ ಸಹಾಯ ಸಿಕ್ಕಿರಲಿಲ್ಲ. ನಮಗೆ ಯಾವುದೇ ನಿರ್ದಿಷ್ಟ ಸುಳಿವು ಸಿಗಲಿಲ್ಲ, ಆದರೆ ಈ ಮಧ್ಯೆ ಕಾಣೆಯಾದ ಲೆಫ್ಟಿನೆಂಟ್ ಎಟಿಎಂ ನಿಂದ ವಹಿವಾಟು ನಡೆಸಿರುವುದು ಗೊತ್ತಾಗಿತ್ತು. ಸೈಬರ್ ಸೆಲ್ ಸಹಾಯದಿಂದ ನಾವು ಅವರ ಇರುವ ಸ್ಥಳದ ಮಾಹಿತಿ ಪಡೆದುಕೊಂಡೆವು. ಈ ಮಾಹಿತಿ ಮೆರೆಗೆ ಸ್ಥಳಕ್ಕೆ ತಲುಪಿದಾಗ, ಲಲಿತಪುರದ ಕೈಲಾಶ್ ಹೋಟೆಲ್‌ನಲ್ಲಿ ತಂಗಿರುವುದು ಗೊತ್ತಾಯಿತು. ಆರಂಭಿಕ ವಿಚಾರಣೆಯಲ್ಲಿ, ಅವರು ಲಲಿತಪುರವನ್ನು ಹೇಗೆ ತಲುಪಿದರು ಎಂಬ ಮಾಹಿತಿ ನೀಡಿಲ್ಲ.
ನೆಮ್ಮದಿಯ ನಿಟ್ಟುಸಿರು ಬಿಟ್ಟ ಸೇನೆ, ಪೊಲೀಸರು: ಲೆಫ್ಟಿನೆಂಟ್ ಮಟ್ಟದ ಅಧಿಕಾರಿಯ ಹಠಾತ್ ಕಣ್ಮರೆಯಿಂದಾಗಿ ಸೈನ್ಯವು ತುಂಬಾ ಚಿಂತಿತವಾಗಿತ್ತು. ಸೇನಾ ಗುಪ್ತಚರ ಇಲಾಖೆಯಿಂದ ಹಿಡಿದು ಮಿಲಿಟರಿ ಪೊಲೀಸರವರೆಗೆ ಎಲ್ಲರೂ ಸೇನೆಯ ಆಡಳಿತಾತ್ಮಕ ಕೆಲಸ ಮತ್ತು ಪಿಂಚಣಿ ಪ್ರಕರಣಗಳನ್ನು ನೋಡಿಕೊಳ್ಳುತ್ತಿದ್ದ ಪ್ರಮೋದ್ ಕುಮಾರ್ ನಿಗಮ್ ಅವರನ್ನು ಹುಡುಕುತ್ತಿದ್ದರು. ಸಾಮಾಜಿಕ ಮಾಧ್ಯಮಗಳ ಮೂಲಕ ಅವರನ್ನು ಹುಡುಕಲು ಪ್ರಯತ್ನಿಸಲಾಯಿತು, ಆದರೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
ಕ್ಯಾಂಟ್ ಪೊಲೀಸ್ ಠಾಣೆ ನಿರಂತರವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿತ್ತು. ಆದರೆ ಅಲ್ಲಿಂದ ಯಾವುದೇ ಸುಳಿವು ಸಿಗಲಿಲ್ಲ. ಲೆಫ್ಟಿನೆಂಟ್ ಕರ್ನಲ್ ಬಳಿ ಮೊಬೈಲ್ ಫೋನ್ ಇಲ್ಲದ ಕಾರಣ ಪೊಲೀಸರಿಗೆ ಸ್ಥಳ ಸಿಕ್ಕಿರಲಿಲ್ಲ . ಏತನ್ಮಧ್ಯೆ, ಎಟಿಎಂ ವ್ಯವಹಾರವು ಕ್ಯಾಂಟ್ ಪೊಲೀಸರಿಗೆ ಅವರ ಸ್ಥಳವನ್ನು ಕಂಡು ಹಿಡಿಯಲು ಸಹಾಯಕವಾಗಿದೆ. ಕ್ಯಾಂಟ್ ಪೊಲೀಸ್ ತಂಡ ಕಾಣೆಯಾದ ಲೆಫ್ಟಿನೆಂಟ್ ಅವರನ್ನು ಪತ್ತೆ ಮಾಡಿತು.