ETV Bharat / bharat

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನೆಯ ಗಣಪತಿ ಪೂಜೆಯಲ್ಲಿ ಪ್ರಧಾನಿ ಮೋದಿ ಭಾಗಿ; ಪ್ರತಿಪಕ್ಷಗಳ ಟೀಕೆ - Modi Ganpati Puja

ಸುಪ್ರಿಂ ಕೋರ್ಟ್ ಮುಖ್ಯ ನಾಯಮೂರ್ತಿ (ಸಿಜೆಐ) ಮನೆಯ ಗಣಪತಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿರುವುದನ್ನು ಪ್ರತಿಪಕ್ಷಗಳ ನಾಯಕರು ಟೀಕಿಸಿದ್ದಾರೆ.

author img

By PTI

Published : Sep 12, 2024, 2:06 PM IST

row-over-pm-modi-attending-ganpati-puja-celebrations-at-cjis-residence-bjp-slams-opposition
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಾಮೂರ್ತಿ ಡಿ.ವೈ.ಚಂದ್ರಚೂಡ್ ಅವರ​ ಮನೆಯ ಗಣಪತಿ ಪೂಜೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗಿಯಾಗಿರುವುದನ್ನು ಪ್ರತಿಪಕ್ಷಗಳು ಟೀಕಿಸಿವೆ.

ಪ್ರಧಾನಿ ಮೋದಿ ಗಣಪತಿಗೆ ಆರತಿ ಮಾಡುತ್ತಿದ್ದು, ಪಕ್ಕದಲ್ಲಿ ಸಿಜೆಐ ಚಂದ್ರಚೂಡ್​ ಮತ್ತು ಅವರ ಪತ್ನಿ ಕಲ್ಪನಾ ದಾಸ್ ಇರುವ​ ವಿಡಿಯೋ ವೈರಲ್​ ಆಗಿದೆ.

ಶಿವಸೇನಾ (ಯುಬಿಟಿ) ನಾಯಕ ಸಂಜಯ್​ ರಾವ್ ಪ್ರತಿಕ್ರಿಯಿಸಿ​, "ಸಂವಿಧಾನ ರಕ್ಷಕರು ರಾಜಕೀಯ ನಾಯಕರನ್ನೂ ಭೇಟಿಯಾದಾಗ ಜನರಿಗೆ ಅನುಮಾನ ಮೂಡುತ್ತದೆ" ಎಂದಿದ್ದಾರೆ.

ಹಿರಿಯ ವಕೀಲೆ ಇಂದಿರಾ ಜೈಸಿಂಗ್​ 'ಎಕ್ಸ್'​ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, 'ಸುಪ್ರೀಂ ಕೋರ್ಟ್​ ಬಾರ್​ ಅಸೋಸಿಯೇಷನ್​ ಇದನ್ನು ಖಂಡಿಸುತ್ತದೆ' ಎಂದು ತಿಳಿಸಿದ್ದಾರೆ.

ಇನ್ನು ಟೀಕೆಗಳಿಗೆ ಉತ್ತರಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್​, "ಸಿಜೆಐ ಮನೆ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾದ ವಿಚಾರವಾಗಿ ಎಡಪಂಥೀಯ ಉದಾರವಾದಿಗಳು ಅಳುವುದಕ್ಕೆ ಶುರು ಮಾಡಿದ್ದಾರೆ" ಎಂದು ಟಾಂಗ್ ನೀಡಿದ್ದಾರೆ.

ಶಿವಸೇನಾ ರಾಜ್ಯಸಭಾ ಸಂಸದ ಮಿಲಿಂದ್​ ಡಿಯೋರಾ ಪ್ರತಿಕ್ರಿಯಿಸಿ, 'ಪ್ರತಿಪಕ್ಷಗಳ ಹೇಳಿಕೆಗಳು ದುರಾದೃಷ್ಟಕರ. ಅವರ ಪರವಾಗಿ ನ್ಯಾಯ ಬಂದಾಗ ಸುಪ್ರೀಂ ಕೋರ್ಟ್​ ವಿಶ್ವಾಸಾರ್ಹತೆಯನ್ನು ಮೆಚ್ಚುತ್ತಾರೆ. ಆದರೆ, ಪರಿಸ್ಥಿತಿಗಳು ಅವರ ಪರವಾಗಿಲ್ಲ ಎಂದಾದರೆ, ನ್ಯಾಯಾಂಗ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆಪಾದಿಸುತ್ತಾರೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿಯ ನಯಾ ಕಾಶ್ಮೀರ್​ ಕನಸು ನನಸಾಗದು: ರಶೀದ್ ಇಂಜಿನಿಯರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.