ETV Bharat / bharat

'ಉಚಿತ ಕಾನೂನು ನೆರವು ನೀಡುವ ವಕೀಲರಿಗೆ ಪ್ರೋತ್ಸಾಹ ಧನ ನೀಡಿ': ಕೇಂದ್ರಕ್ಕೆ ಸಂಸದೀಯ ಸಮಿತಿ ಶಿಫಾರಸು - FREE LEGAL AID

ಉಚಿತ ಕಾನೂನು ನೆರವು ನೀಡುವ ವಕೀಲರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೊಳಿಸುವಂತೆ ಸಂಸದೀಯ ಸಮಿತಿಯು ಕೇಂದ್ರಕ್ಕೆ ಶಿಫಾರಸು ಮಾಡಿದೆ.

'ಉಚಿತ ಕಾನೂನು ನೆರವು ನೀಡುವ ವಕೀಲರಿಗೆ ಪ್ರೋತ್ಸಾಹ ಧನ ನೀಡಿ'; ಕೇಂದ್ರಕ್ಕೆ ಸಂಸದೀಯ ಸಮಿತಿ ಶಿಫಾರಸು
ಸಾಂದರ್ಭಿಕ ಚಿತ್ರ (IANS)
author img

By PTI

Published : April 11, 2025 at 4:54 PM IST

1 Min Read

ನವದೆಹಲಿ: ಬಡವರು ಹಾಗೂ ದುರ್ಬಲ ವರ್ಗದವರಿಗೆ ಉಚಿತ ಕಾನೂನು ನೆರವು ನೀಡುವ ವಕೀಲರಿಗೆ ಸೂಕ್ತ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ರೂಪಿಸುವಂತೆ ಸಂಸದೀಯ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸೂಕ್ತ ಪ್ರೋತ್ಸಾಹ ಧನ ನೀಡುವ ವ್ಯವಸ್ಥೆ ಇಲ್ಲದಿರುವುದರಿಂದ ವಕೀಲರು ಉಚಿತ ಕಾನೂನು ನೆರವು ನೀಡುವುದಕ್ಕೆ ಹಿಂದೇಟು ಹಾಕುವಂತಾಗಿದೆ ಎಂದು ಹೇಳಿರುವ ಸಂಸದೀಯ ಸಮಿತಿ, ಇಂಥ ವಕೀಲರಿಗಾಗಿ ರಾಷ್ಟ್ರೀಯ ರಜಿಸ್ಟ್ರಿಯೊಂದನ್ನು ಸ್ಥಾಪಿಸಿ ಅದರಲ್ಲಿ ಅವರ ಕೊಡುಗೆಗಳನ್ನು ನಮೂದಿಸುವ ಮೂಲಕ ಅವರ ವೃತ್ತಿಜೀವನದ ಏಳ್ಗೆಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸಮಾಜದ ತಳ ಸಮುದಾಯಗಳಿಗೆ ಅಗತ್ಯ ಕಾನೂನು ಸೇವೆಗಳನ್ನು ನೀಡುವ ಸಾಮರ್ಥ್ಯದ ಹೊರತಾಗಿಯೂ ಪ್ಯಾರಾ-ಲೀಗಲ್ ಸ್ವಯಂಸೇವಕರ (ಪಿಎಲ್​ವಿಗಳು) ಸೇವೆಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾನೂನು ಮತ್ತು ಸಿಬ್ಬಂದಿ ಕುರಿತ ಸಂಸದೀಯ ಸಮಿತಿ ವಿಷಾದಿಸಿದೆ.

ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯಡಿ ಕಾನೂನು ನೆರವಿನ ಕಾರ್ಯನಿರ್ವಹಣೆಯ ಪರಾಮರ್ಶೆ ಕುರಿತ ತನ್ನ ಹಿಂದಿನ ವರದಿಯ ಮೇಲೆ ಕೈಗೊಂಡ ಕ್ರಮಗಳ ವರದಿಯಲ್ಲಿ, ಪ್ರೊ-ಬೋನೊ (ವಿಶೇಷವಾಗಿ ಬಡವರಿಗೆ ನೀಡಲಾಗುವ ಉಚಿತ ಕಾನೂನು ಸೇವೆ) ಕೆಲಸವನ್ನು ಉತ್ತೇಜಿಸುವ ಮತ್ತು ವಕೀಲರಿಗೆ ನೀಡಲಾಗುವ ಪ್ರೋತ್ಸಾಹ ಧನ ಹೆಚ್ಚಿಸುವ ಪ್ರಯತ್ನಗಳು ಪ್ರಗತಿಯಲ್ಲಿವೆ ಎಂದು ಸಮಿತಿ ಹೇಳಿದೆ.

"... ರಚನಾತ್ಮಕ ಪ್ರೋತ್ಸಾಹ ಮತ್ತು ಔಪಚಾರಿಕ ಮಾನ್ಯತೆಯ ಅನುಪಸ್ಥಿತಿಯಿಂದಾಗಿ ವಕೀಲರ ವ್ಯಾಪಕ ಭಾಗವಹಿಸುವಿಕೆಗೆ ಅಡ್ಡಿಯಂಟಾಗುತ್ತಿದೆ. ಪರಿಣಾಮಕಾರಿ ಕಾನೂನು ಪ್ರಾತಿನಿಧ್ಯದ ಪ್ರಮುಖ ಪಾತ್ರವನ್ನು ಗುರುತಿಸಿ, ಸಾಂವಿಧಾನಿಕ ನ್ಯಾಯಾಲಯಗಳು (ಸುಪ್ರೀಂ ಕೋರ್ಟ್ ಮತ್ತು 25 ಹೈಕೋರ್ಟ್​ಗಳು) ವಿಶೇಷವಾಗಿ ಕೈದಿಗಳಿಗೆ ಉಚಿತ ಕಾನೂನು ನೆರವು ಸೇವೆಗಳನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿವೆ" ಎಂದು ಅದು ಹೇಳಿದೆ.

ಈ ಸಮಸ್ಯೆಯನ್ನು ಪರಿಹರಿಸಲು, ಸಮಿತಿಯು "ಸ್ವಯಂ ಪ್ರೇರಿತವಾಗಿ ಕೆಲಸ ಮಾಡುವ ವಕೀಲರಿಗಾಗಿ ರಾಷ್ಟ್ರೀಯ ನೋಂದಣಿಯನ್ನು ಸ್ಥಾಪಿಸಲು, ಮಾನ್ಯತೆ ನೀಡಲು ಮತ್ತು ಹಿರಿಯ ಪದನಾಮಗಳು ಅಥವಾ ನ್ಯಾಯಾಂಗ ನೇಮಕಾತಿಗಳಂತಹ ವೃತ್ತಿ ಪ್ರಗತಿಯ ಅವಕಾಶಗಳಿಗೆ ಅವರ ಕೊಡುಗೆಗಳನ್ನು ಲಿಂಕ್ ಮಾಡಲು" ಶಿಫಾರಸು ಮಾಡಿದೆ. ಇತ್ತೀಚೆಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದಲ್ಲಿ ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.

"ಪ್ರೋತ್ಸಾಹ ಧನಗಳ ವಾರ್ಷಿಕ ಪರಿಶೀಲನೆಗಳನ್ನು ಮಾರುಕಟ್ಟೆ ಮಾನದಂಡಗಳಿಗೆ ಅನುಗುಣವಾಗಿ ಸಾಂಸ್ಥಿಕಗೊಳಿಸಬೇಕು, ಬದ್ಧ ಕಾನೂನು ವೃತ್ತಿಪರರ ನೇಮಕಾತಿ ಮತ್ತು ಉಳಿಸಿಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಸಮಿತಿ ಸೂಚಿಸಿದೆ.

ಇದನ್ನೂ ಓದಿ: 2026ರ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ, ಶಿಫಾರಸು ಪ್ರಕ್ರಿಯೆ ಆರಂಭ - PADMA AWARDS 2026

ETV Bharat Logo

Copyright © 2025 Ushodaya Enterprises Pvt. Ltd., All Rights Reserved.