ETV Bharat / bharat

ವಯನಾಡ್‌ ಪ್ರವಾಸೋದ್ಯಮ ಉತ್ತೇಜಿಸಲು ಜಿಪ್​ಲೈನ್​ ಸಾಹಸ ನಡೆಸಿದ ರಾಹುಲ್​ ಗಾಂಧಿ

ವಯನಾಡ್‌ ಲೋಕಸಭಾ ಕ್ಷೇತ್ರದ ಬಹಿರಂಗ ಪ್ರಚಾರ ಅಂತ್ಯವಾದ ಬಳಿಕ ಮಂಗಳವಾರ ರಾಹುಲ್ ಗಾಂಧಿ ಜಿಪ್‌ಲೈನ್‌ ಸಾಹಸ ನಡೆಸಿದರು. ನಂತರ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು.

rahul-gandhi-tring-waynads-longest-zipline-to-promote-tourism
ರಾಹುಲ್​ ಗಾಂಧಿ (ANI)
author img

By ANI

Published : Nov 13, 2024, 1:25 PM IST

ವಯನಾಡ್‌(ಕೇರಳ): ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಪರ ಮತಪ್ರಚಾರ ನಡೆಸಿದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಕ್ಷೇತ್ರದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಮಂಗಳವಾರ ವಯನಾಡ್‌ನ ಅತೀ ಉದ್ದದ ಜಿಪ್​ಲೈನ್​ ಸಾಹಸದಲ್ಲಿ ಭಾಗಿಯಾದರು. ಈ ಕುರಿತ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ.

"ಭೂ ಕುಸಿತದಂತಹ ಸವಾಲಿನ ನಡುವೆಯೂ ವಯನಾಡ್‌ ಅದ್ಭುತ ಪ್ರವಾಸಿ ಆಕರ್ಷಣೆ ಹೊಂದಿದೆ" ಎಂದು ರಾಹುಲ್ ತಿಳಿಸಿದ್ದಾರೆ. ಭೂಕುಸಿತಕ್ಕೊಳಗಾದ ಪ್ರದೇಶದ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಅವರು ಸಮಸ್ಯೆ ತಿಳಿದುಕೊಂಡರು.

ಬಳಿಕ ಮಾತನಾಡಿದ ರಾಹುಲ್​ ಗಾಂಧಿ, "ಇಲ್ಲಿನ ಸ್ಪೂರ್ತಿದಾಯಕ ಸ್ಥಳೀಯ ಜನರೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ನನಗೆ ಸಿಕ್ಕಿತು. ನೈಸರ್ಗಿಕ ವಿಪತ್ತಿನಂತಹ ಸವಾಲಿನ ಹೊರತಾಗಿಯೂ ಅವರು ದೃಢವಾಗಿ ನಿಂತಿದ್ದಾರೆ. ಇಲ್ಲಿನ ಪರಿಸರ ಬಹಳ ಸುಂದರವಾಗಿದೆ. ದಕ್ಷಿಣ ಭಾರತದ ಅತೀ ದೊಡ್ಡ ಡ್ರಾಪ್ ಟವರ್ ಮತ್ತು ರೋಮಾಂಚನಕಾರಿ ಜಿಪ್‌ಲೈನ್ ಸೇರಿದಂತೆ ಹಲವು ಪ್ರವಾಸಿ ಅದ್ಬುತಗಳು ಇಲ್ಲಿವೆ" ಎಂದು ಹೇಳಿದರು.

ನಿರಂತರ ಮಳೆಯಿಂದಾಗಿ ಜುಲೈ 30ರಂದು ಸಂಭವಿಸಿದ ಸರಣಿ ಭೂಕುಸಿತದಿಂದ ನೂರಾರು ಜನರು ಸಾವನ್ನಪ್ಪಿದ್ದರು. ವಯನಾಡ್ ಜಿಲ್ಲೆಯ ವೈತಿರಿ ತಾಲೂಕಿನ ಮೆಪ್ಪಾಡಿ ಪಂಚಾಯತ್‌ನ ಪುಂಜಿರಿಮಟ್ಟಂ, ಮುಂಡಕ್ಕೈ, ಚೂರಲ್ಮಲಾ ಮತ್ತು ವೆಳ್ಳರಿಮಲ ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿತ್ತು.

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆದ್ದ ರಾಹುಲ್​ ಗಾಂಧಿ, ರಾಯ್​ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು ವಯನಾಡ್‌ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ, ಅವರಿಂದ ತೆರವಾದ ಸ್ಥಾನದಲ್ಲಿ ಇದೀಗ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಇದೇ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: ಮತದಾರರಿಗೆ ಕಾಂಗ್ರೆಸ್‌ ಕಿಟ್​, ಹಣ, ಮದ್ಯ ಆಮಿಷ: ವಯನಾಡ್‌ ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.