ETV Bharat / bharat

ಎಲ್ಲ ವದಂತಿಗಳಿಗೆ ತೆರೆ: G-7 ಶೃಂಗಸಭೆಗೆ ಕೆನಡಾದಿಂದ ಆಹ್ವಾನ: ಮೋದಿ ಭಾಗಿ, ಇನ್ವೈಟ್​​​ ಮಾಡಿದ್ದಕ್ಕೆ ಧನ್ಯವಾದ - PM MODI TO ATTEND G7 SUMMIT

ಇದುವರೆಗೂ ಇದ್ದ ಎಲ್ಲ ಕುತೂಹಲಗಳಿಗೆ ತೆರೆ ಬಿದ್ದಿದೆ. ಕೆನಡಾದಲ್ಲಿ ನಡೆಯುವ G7 ಶೃಂಗಸಭೆಗೆ ಆಹ್ವಾನ ಬಂದಿದೆ. ಇದನ್ನು ಸ್ವತಃ ಪಿಎಂ ಸ್ಪಷ್ಟಪಡಿಸಿದ್ದಾರೆ.

PM MODI  G7
G-7 ಶೃಂಗಸಭೆಗೆ ಕೆನಡಾದಿಂದ ಆಹ್ವಾನ (ETV Bharat)
author img

By PTI

Published : June 6, 2025 at 8:14 PM IST

1 Min Read

ನವದೆಹಲಿ: ಈ ತಿಂಗಳ ಅಂತ್ಯದಲ್ಲಿ ಕೆನಡಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ಮತ್ತು ಹೊಸದಾಗಿ ಆಯ್ಕೆಯಾದ ಕೆನಡಾದ ಪ್ರತಿರೂಪ ಮಾರ್ಕ್ ಕಾರ್ನಿ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಜೂನ್ 15-17ರ ನಡುವೆ ಕೆನಡಾದ ಪ್ರಧಾನಿ ಅವರಿಂದ ಬಂದ ದೂರವಾಣಿ ಕರೆಯಲ್ಲಿ ಕನನಸ್ಕಿಸ್‌ನಲ್ಲಿ ನಡೆಯಲಿರುವ ಶೃಂಗಸಭೆಗೆ ಆಹ್ವಾನ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಹೇಳಿದ್ದು, ಕೆನಡಾ ಪಿಎಂಗೆ ಧನ್ಯವಾದವನ್ನೂ ಸಮರ್ಪಿಸಿದ್ದಾರೆ.

ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರಿಂದ ಕರೆ ಸ್ವೀಕರಿಸಲು ಸಂತೋಷವಾಗಿದೆ. ಅವರ ಇತ್ತೀಚಿನ ಚುನಾವಣಾ ವಿಜಯಕ್ಕಾಗಿ ಅವರನ್ನು ಅಭಿನಂದನೆ ಸಲ್ಲಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಕನನಸ್ಕಿಸ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಆಹ್ವಾನ ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ಭಾರತ ಮತ್ತು ಕೆನಡಾ ಪರಸ್ಪರ ಗೌರವ ಮತ್ತು ಸಮಾನ ಆಸಕ್ತಿಗಳನ್ನು ಹೊಂದಿದ್ದು, ನವೀಕೃತ ಚೈತನ್ಯದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತವೆ. ಶೃಂಗಸಭೆಯಲ್ಲಿ ಕಾರ್ನಿ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಅವರು ತಮ್ಮ ಎಕ್ಸ್​ ಹ್ಯಾಂಡಲ್​ ನಲ್ಲಿ ಹೇಳಿದ್ದಾರೆ.

ಜಸ್ಟಿನ್ ಟ್ರುಡೊ ಅವರ ಸರ್ಕಾರದ ಅಡಿ ದೇಶದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಚಟುವಟಿಕೆಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ಕೆನಡಾದೊಂದಿಗಿನ ಭಾರತದ ಸಂಬಂಧಗಳು ಹದಗೆಟ್ಟಿದ್ದವು.ಖಲಿಸ್ತಾನಿ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಟ್ರುಡೊ ಆರೋಪಿಸಿದ್ದರು.

ಎರಡು ರಾಷ್ಟ್ರಗಳ ನಡುವೆ ರಾಜತಾಂತ್ರಿಕ ವಿವಾದ ಉಲ್ಬಣಗೊಂಡಂತೆ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ನಡುವೆ ಹದಗೆಟ್ಟಿದ್ದವು. ಹೀಗಾಗಿ ಈ ಬಾರಿಯ G-7 ಶೃಂಗದಲ್ಲಿ ಭಾಗವಹಿಸುವುದಿಲ್ಲ ಎನ್ನಲಾಗಿತ್ತು.

ಜಿ -7 ಏಳು ಶ್ರೀಮಂತ ರಾಷ್ಟ್ರಗಳ ಗುಂಪಾಗಿದ್ದು, 2019 ರಿಂದ ಭಾರತಕ್ಕೆ ಪ್ರತಿಷ್ಠಿತ ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನ ಬರುತ್ತಿದೆ. ಟ್ರುಡೋ ರಾಜೀನಾಮೆ ಬಳಿಕ ಪ್ರಧಾನಿ ಆಗಿರುವ ಕಾರ್ನಿ, ಮೋದಿ ಅವರಿಗೆ ಶೃಂಗಕ್ಕೆ ಆಹ್ವಾನ ನೀಡಿದ್ದಾರೆ. ಹೀಗಾಗಿ ಎರಡು ದೇಶಗಳ ನಡುವಣ ಸಂಬಂಧಗಳಲ್ಲಿ ಸುಧಾರಣೆ ಆಗುವ ಭರವಸೆಯನ್ನು ಹುಟ್ಟುಹಾಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.