ETV Bharat / bharat

ಭಾರತೀಯ ಸೇನೆಯ ಸೈಟ್​ಗಳ ಮೇಲೆ ದಾಳಿಗೆ ಪಾಕಿಸ್ತಾನ​ ಹ್ಯಾಕರ್​​ಗಳಿಂದ ವಿಫಲ ಯತ್ನ - PAKISTAN HACKERS

ಪಾಕಿಸ್ತಾನದ ಸೈಬರ್​ ಕಳ್ಳರು ಸೇನೆಯ ವೆಬ್​ಸೈಟ್​ಗಳ ಮೇಲೆ ದಾಳಿ ನಡೆಸಲು ವಿಫಲ ಯತ್ನ ನಡೆಸಿದ್ದಾರೆ.

ಭಾರತೀಯ ಸೇನೆಯ ಸೈಟ್​ಗಳ ಮೇಲೆ ದಾಳಿಗೆ ಪಾಕಿಸ್ತಾನ​ ಹ್ಯಾಕರ್​​ಗಳಿಂದ ವಿಫಲ ಯತ್ನ
ಭಾರತೀಯ ಸೇನೆಯ ಸೈಟ್​ಗಳ ಮೇಲೆ ದಾಳಿಗೆ ಪಾಕಿಸ್ತಾನ​ ಹ್ಯಾಕರ್​​ಗಳಿಂದ ವಿಫಲ ಯತ್ನ (ANI)
author img

By ETV Bharat Karnataka Team

Published : April 29, 2025 at 4:34 PM IST

2 Min Read

ನವದೆಹಲಿ: ಪಹಲ್ಗಾಮ್​ ಉಗ್ರ ದಾಳಿಯ ಬಳಿಕ ಪಾಕಿಸ್ತಾನದ ಸೈಬರ್ ಅಪರಾಧಿಗಳು ಭಾರತದ ಗುಪ್ತ ಮಾಹಿತಿಯನ್ನು ಪಡೆಯಲು ಸೈಬರ್​​ ದಾಳಿ ಆರಂಭಿಸಿದ್ದಾರೆ. ಸೇನೆ, ಆಡಳಿತ ಸೇರಿದಂತೆ ವಿವಿಧ ಸೈಟ್​​ ಗಳನ್ನು ಸೈಬರ್​​ ಕಳ್ಳರು ಜಾಲಾಡುತ್ತಿದ್ದಾರೆ. ಆದರೆ, ಇದರಲ್ಲಿ ಅವರು ವಿಫಲವಾಗಿದ್ದಾರೆ ಎಂದು ಭಾರತ ತಿಳಿಸಿದೆ.

ಸೇನೆ ಸೇರಿದಂತೆ ಹಲವು ಅಭೇದ್ಯ ಸೈಟ್ ಗಳನ್ನು ಪಾಕಿಸ್ತಾನದ ಸೈಬರ್​ ಕಳ್ಳರು ಹ್ಯಾಕ್​ ಮಾಡಲು ಯತ್ನಿಸಿದ್ದಾರೆ. ಆದರೆ, ಅದರಲ್ಲಿ ಅವರು ಯಶ ಕಂಡಿಲ್ಲ. ಇದು ಸಾಧ್ಯವಾಗದಿದ್ದಾಗ, ಸಾರ್ವಜನಿಕವಾಗಿ ಎಲ್ಲರೂ ಬಳಸಬಹುದಾದ ಅಭಿವೃದ್ಧಿ ಮತ್ತು ಶೈಕ್ಷಣಿಕ ವೆಬ್‌ಸೈಟ್‌ಗಳನ್ನು ಹ್ಯಾಕ್​ ಮಾಡಿದ್ದಾರೆ. ಅದರ ಮೇಲೆ "ಐಒಕೆ ಹ್ಯಾಕರ್- ಖಿಲಾಫತ್‌ನ ಇಂಟರ್ನೆಟ್" ಎಂದು ಗೋಚರಿಸುತ್ತಿದೆ.

ಹ್ಯಾಕ್​ ಬಳಿಕ ಈ ಪುಟಗಳನ್ನು ವಿರೂಪಗೊಳಿಸ , ಆನ್‌ಲೈನ್ ಸೇವೆಗಳಿಗೆ ಅಡ್ಡಿಪಡಿಸಲು ಮತ್ತು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಲಾಗಿದೆ ಎಂಬುದನ್ನು ಭಾರತದ ಲೇಯರ್ಡ್ ಸೈಬರ್ ಸೆಕ್ಯುರಿಟಿ ಆರ್ಕಿಟೆಕ್ಚರ್ ಪತ್ತೆಹಚ್ಚಿದೆ. ಅವುಗಳ ಮೂಲವೆಲ್ಲವೂ ಪಾಕಿಸ್ತಾನದ್ದಾಗಿದೆ ಎಂದು ತಿಳಿಸಿದೆ.

ಭಾರತೀಯ ಸೇನೆಯ ಸೈಟ್​ಗಳ ಮೇಲೆ ದಾಳಿಗೆ ಪಾಕಿಸ್ತಾನ​ ಹ್ಯಾಕರ್​​ಗಳಿಂದ ವಿಫಲ ಯತ್ನ
ಭಾರತೀಯ ಸೇನೆಯ ಸೈಟ್​ಗಳ ಮೇಲೆ ದಾಳಿಗೆ ಪಾಕಿಸ್ತಾನ​ ಹ್ಯಾಕರ್​​ಗಳಿಂದ ವಿಫಲ ಯತ್ನ (ANI)

ಹ್ಯಾಕ್​ನಿಂದ ಸೇವೆಗೆ ಅಡ್ಡಿಯಿಲ್ಲ: ಸೈಬರ್​ ಹ್ಯಾಕ್​ ಗೆ ಸಂಬಂಧಿತ ನಾಲ್ಕು ಪ್ರಕರಣಗಳು ಕಂಡುಬಂದಿವೆ. ಶ್ರೀನಗರದ ಆರ್ಮಿ ಪಬ್ಲಿಕ್ ಸ್ಕೂಲ್ (ಎಪಿಎಸ್​) ಮತ್ತು ಶ್ರೀನಗರದ ಎಪಿಎಸ್​ ರಾಣಿಖೇತ್‌ನ ವೆಬ್‌ಸೈಟ್‌ಗಳು ಹ್ಯಾಕ್​ ಗೆ ಒಳಗಾಗಿವೆ. ಶ್ರೀನಗರದ ಎಪಿಎಸ್​ ಸೈಟ್​ ನಲ್ಲಿ ಸೇವೆಗೆ ಅಡಚಣೆ ಉಂಟಾಗಿದೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ.

ಸೇನಾ ಅಭಿವೃದ್ಧಿ ವಸತಿ ಸಂಸ್ಥೆ (AWHO) ಡೇಟಾಬೇಸ್‌ ಕೂಡ ಹ್ಯಾಕ್​ ಆಗಿದೆ. ಇದೇ ವೇಳೆ ಭಾರತೀಯ ವಾಯುಪಡೆಯ ಪೋರ್ಟಲ್ ಮೇಲೆ ಹ್ಯಾಕರ್​ ಗಳು ವಿಫಲ ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಎಲ್ಲಾ ನಾಲ್ಕು ಸೈಟ್​ ಗಳನ್ನು ಪ್ರತ್ಯೇಕಿಸಿ, ಪುನಃಸ್ಥಾಪನೆ ಮಾಡಲಾಗಿದೆ. ಸೈಬರ್​ ಕಳ್ಳರಿಂದ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೈಬರ್​ ಹ್ಯಾಕರ್​ ಗಳ ಈ ವಿಫಲ ಯತ್ನವು ಅವರ ದುರುದ್ದೇಶವು ತಿಳಿಯುತ್ತದೆ. ಭಾರತೀಯ ಸೇನೆಯು ತನ್ನ ಡಿಜಿಟಲ್ ದಾಖಲೆಗಳನ್ನು ರಕ್ಷಿಸಿಕೊಳ್ಳುವಲ್ಲಿ ಬಲಿಷ್ಟವಾಗಿದೆ. ಸೈಬರ್ ಗುಣಮಟ್ಟವನ್ನು ನಿರಂತರವಾಗಿ ನವೀಕರಿಸುವ ಮತ್ತು ಯೋಧರ ಮತ್ತು ಅವರ ಕುಟುಂಬಸ್ಥರ ಕಲ್ಯಾಣವನ್ನು ರಕ್ಷಿಸಲು ಸಶಕ್ತವಾಗಿದೆ.

ನಿರಂತರ ಕದನ ವಿರಾಮ ಉಲ್ಲಂಘನೆ: ಇನ್ನೊಂದೆಡೆ, ಕುಪ್ವಾರಾ, ಬಾರಾಮುಲ್ಲಾ, ಅಖ್ನೂರ್ ಸೆಕ್ಟರ್‌ನಲ್ಲಿ ಏಪ್ರಿಲ್ 28-29ರ ರಾತ್ರಿ ಗಡಿ ನಿಯಂತ್ರಣ ರೇಖೆಯಾದ್ಯಂತ (LoC) ಪಾಕಿಸ್ತಾನ ಸೇನೆಯು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಲೇ ಇದೆ.

ಭಾರತೀಯ ಸೇನೆಯ ಪ್ರಕಾರ, ಪಾಕಿಸ್ತಾನ ಸೇನೆಯ ಅಪ್ರಚೋದಿತ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳ ಗುಂಡಿನ ದಾಳಿಗೆ ಭಾರತೀಯ ಪಡೆಗಳು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಿವೆ. ಕಳೆದ ಐದು ದಿನಗಳಿಂದ ಗಡಿಯಲ್ಲಿ ಪಾಕ್​ ಸೇನೆಯು ಕದನ ವಿರಾಮ ಉಲ್ಲಂಘಿಸುಲ್ಲೇ ಇದೆ.

ಇದನ್ನೂ ಓದಿ: ಪಾಕಿಸ್ತಾನದ ರಕ್ಷಣಾ ಸಚಿವರ ಎಕ್ಸ್​ ಖಾತೆಗೆ ಭಾರತದಲ್ಲಿ ತಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.